ನೆದರ್ಲ್ಯಾಂಡ್, ಆ. ೧೫: ನೆದರ್ಲ್ಯಾಂಡ್ ಹಾಗೂ ಬೆಲ್ಜಿಯಂನಲ್ಲಿ ನಡೆಯುತ್ತಿರುವ ಎಫ್.ಐ.ಎಚ್ ಹಾಕಿ ವಿಶ್ವಕಪ್‌ನಲ್ಲಿ ಭಾರತ ಪುರುಷರ ತಂಡ ಶುಭಾರಂಭ ಮಾಡಿದೆ.
ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ವೇಲ್ಸ್ ವಿರುದ್ಧ ೩-೧ ಅಂತರದಲ್ಲಿ ಗೆಲುವು ಸಾಧಿಸಿ ಗ್ರೂಪ್ ಡಿನಲ್ಲಿ ಸದ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಭಾರತದ ಪರ ಪೆನಾಲ್ಟಿ ಕಾರ್ನರ್ ಮೂಲಕ ನಾಯಕ ಹರ್ಮನ್ ಪ್ರೀತ್ ೨ ಹಾಗೂ ಸಂಜಯ್ ೧ ಗೋಲು ಭಾರಿಸಿ ತಂಡದ ಗೆಲುವಿಗೆ ಕಾರಣರಾದರು. ಭಾರತದ ೨ನೇ ಪಂದ್ಯ ಇಂಗ್ಲೆAಡ್ ವಿರುದ್ಧ ತಾ. ೧೭ ರಂದು ಸಂಜೆ ೬:೩೦ ಕ್ಕೆ ನಡೆಯಲಿದೆ. ಮಹಿಳೆಯರ ತಂಡದ ಪಂದ್ಯವು ಚೀನಾ ವಿರುದ್ಧ ತಾ. ೧೬ ರಂದು (ಇಂದು) ಸಂಜೆ ೪:೩೦ಕ್ಕೆ ನಡೆಯಲಿದೆ.