*ಗೋಣಿಕೊಪ್ಪ, ಆ. ೧೪: ಕಣ್ಣು ಹಾಯಿಸಿದಷ್ಟು ದೂರವೂ ಕಾಣಿಸಿದ್ದು ತ್ರಿವರ್ಣ ಧ್ವಜವೇ... ಕೈಯಲ್ಲಿ ತಿರಂಗ ಹಿಡಿದು ದೇಶಪ್ರೇಮದ ಹೆಜ್ಜೆ ಹಾಕಿದ ಜನಸ್ತೋಮ, ಮುಗಿಲು ಮುಟ್ಟಿದ ದೇಶಭಕ್ತಿಯ ಘೋಷಣೆಗಳು, ರಾರಾಜಿಸಿದ ಬಾವುಟ ಗೋಣಿಕೊಪ್ಪದಲ್ಲಿ ಶುಕ್ರವಾರ ನಡೆದ ತಿರಂಗ ಯಾತ್ರೆ ರಾಷ್ಟçಭಕ್ತಿಯ ವೈಭವಕ್ಕೆ ಸಾಕ್ಷಿಯಾಯಿತು.

೮೦ನೇ ಸ್ವಾತಂತ್ರö್ಯ ದಿನಾಚರಣೆ ಹಾಗೂ ವಂದೇ ಮಾತರಂ ಗೀತೆಯ ೧೫೦ನೇ ವರ್ಷದ ಸಂಭ್ರಮದ ಅಂಗವಾಗಿ ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆ ಮಂಡಲ ವತಿಯಿಂದ ಗೋಣಿಕೊಪ್ಪದಲ್ಲಿ ೫೦೦ ಮೀಟರ್ ಉದ್ದದ ತಿರಂಗ ಯಾತ್ರೆ ನಡೆಯಿತು.

ಹರಿಶ್ಚಂದ್ರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಶ್ರೀ ಉಮಾಮಹೇಶ್ವರಿ ದೇವಸ್ಥಾನದವರೆಗೆ ನಡೆದ ಯಾತ್ರೆಗೆ ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಹಾಗೂ ಮಾಜಿ ಸೈನಿಕರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಗೋಣಿಕೊಪ್ಪದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು. ರಾಷ್ಟçಭಕ್ತಿಯ ಘೋಷಣೆಗಳೊಂದಿಗೆ ಸುಮಾರು ಎರಡು ಕಿಲೋಮೀಟರ್ ಸಾಗಿದ ತಿರಂಗ ಯಾತ್ರೆ ಗಮನಸೆಳೆಯಿತು.

ಈ ಸಂದರ್ಭ ಮಾತನಾಡಿದ ಕೆ.ಜಿ. ಬೋಪಯ್ಯ, ದೇಶಪ್ರೇಮವನ್ನು ಅಭಿವ್ಯಕ್ತಪಡಿಸುವ ಉದ್ದೇಶದಿಂದ ತಿರಂಗ ಯಾತ್ರೆ ಆಯೋಜಿಸಲಾಗಿದೆ. ಪ್ರತಿಯೊಬ್ಬರಲ್ಲೂ ರಾಷ್ಟçಭಕ್ತಿ ಸದಾ ಚಿಮ್ಮುತ್ತಿರಬೇಕು. ದೇಶ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಭಾರತದ ಗಟ್ಟಿತನವನ್ನು ಜಗತ್ತಿಗೆ ತೋರಿಸಿ, ದೇಶವನ್ನು ಮಾದರಿ ರಾಷ್ಟçವನ್ನಾಗಿ ರೂಪಿಸುವಲ್ಲಿ ಪ್ರತಿಯೊಬ್ಬ ನಾಗರಿಕನೂ ಕೊಡುಗೆ ನೀಡಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಹಿಂದೆ ಸ್ವಾತಂತ್ರö್ಯ ದಿನಾಚರಣೆ ಸರ್ಕಾರಿ ಇಲಾಖೆಗಳ ಮಟ್ಟಕ್ಕೆ ಸೀಮಿತವಾಗಿತ್ತು. ಇದೀಗ ದೇಶಭಕ್ತಿಯ ಭಾವನೆಯನ್ನು ಜನರಲ್ಲಿ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ತಿರಂಗ ಯಾತ್ರೆ ಹಾಗೂ ಮನೆಮನೆಗಳಲ್ಲಿ ತಿರಂಗ ಹಾರಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ದೇಶವನ್ನು ಮತ್ತಷ್ಟು ಸಮೃದ್ಧವಾಗಿ ಕಟ್ಟುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದ್ದು, ಭಾರತದ ಇತಿಹಾಸ, ಸ್ವಾತಂತ್ರö್ಯ ಹೋರಾಟ ಹಾಗೂ ರಾಷ್ಟç ನಿರ್ಮಾಣದ ಶಕ್ತಿಯನ್ನು ಯುವಜನತೆ ಅರಿತುಕೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ಮಾಜಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಮಾತನಾಡಿ, ಸ್ವಾತಂತ್ರೋತ್ಸವದ ಸಂಭ್ರಮದ ಜೊತೆಗೆ ದೇಶ ವಿಭಜನೆಯ ನೋವನ್ನೂ ಸ್ಮರಿಸಬೇಕಾಗಿದೆ. ದೇಶದ ಅಂಗಾAಗ ಕಳಚಿಕೊಂಡ ನೋವು ಇಂದಿಗೂ ಭಾರತೀಯರ ಮನಸ್ಸಿನಲ್ಲಿ ಉಳಿದಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ವೀರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಜಿಲ್ಲಾ ಉಪಾಧ್ಯಕ್ಷ ಗುಮ್ಮಟ್ಟೀರ ಕಿಲನ್ ಗಣಪತಿ, ಪ್ರಧಾನ ಕಾರ್ಯದರ್ಶಿ ನೆಲ್ಲೀರ ಚಲನ್ ಕುಮಾರ್, ವಕ್ತಾರ ಮಾಚಿಮಾಡ ರವೀಂದ್ರ, ಪ್ರಮುಖರಾದ ಮಾಪಂಗಡ ಯಮುನಾ ಚಂಗಪ್ಪ, ಪಟ್ಟಡ ರೀನಾ ಪ್ರಕಾಶ್, ಮೂಕಳೇರ ಕಾವ್ಯ ಮಧು, ಕುಲ್ಲಚಂಡ ಬೋಪಣ್ಣ, ನಿತಿನ್ ಮೊಣ್ಣಪ್ಪ, ಮಹೇಶ್, ಪಟ್ಟಡ ರಂಜಿ, ಕಿಶನ್ ಪೂವಯ್ಯ, ರಾಕೇಶ್, ಸಂಪತ್, ಮುದ್ದಿಯಡ ಮಂಜು, ಕುಟ್ಟಂಡ ಅಜಿತ್ ಕರುಂಬಯ್ಯ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. - ಎನ್.ಎನ್. ದಿನೇಶ್