ಮಡಿಕೇರಿ, ಆ. ೧೪: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೃಷಿ ಸಚಿವ ನರೇಂದ್ರ ಸ್ವಾಮಿ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.

ಸಚಿವ ಸಂಪುಟ ಪುನರ್‌ರಚನೆಗೊಂಡ ಹಿನ್ನೆಲೆ ಉಸ್ತುವಾರಿ ಸಚಿವ ಸ್ಥಾನ ಖಾಲಿಯಿತ್ತು. ಹಿಂದೆ ಬರ/ಅತಿವೃಷ್ಟಿ ಪರಿಸ್ಥಿತಿ ಪರಿವೀಕ್ಷಣೆಗೂ ನರೇಂದ್ರ ಸ್ವಾಮಿ ಅವರನ್ನೇ ಕೊಡಗು ಜಿಲ್ಲೆಗೆ ನಿಯೋಜಿಸಲಾಗಿತ್ತು. ಇದೀಗ ಅವರನ್ನು ಉಸ್ತುವಾರಿ ಸಚಿವರನ್ನಾಗಿ ಮುಂದುವರಿಸಲಾಗಿದೆ.