ಸುಂಟಿಕೊಪ್ಪ, ಆ. ೧೩: ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಕಳ್ಳನೊಬ್ಬ ಕೈಚಳಕ ತೋರಿದ್ದು, ಸರಣಿ ಕಳ್ಳತನ ಪ್ರಕರಣಗಳಿಂದ ಸ್ಥಳೀಯರಲ್ಲಿ ಆತಂಕಮೂಡಿದೆ. ಆರೋಪಿಯ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಗದ್ದೆಹಳ್ಳದಲ್ಲಿ ಬೈಕ್‌ವೊಂದನ್ನು ಕಳವು ಮಾಡಲು ಯತ್ನಿಸಿರುವುದು ವರದಿಯಾಗಿದೆ. ರಾಷ್ಟಿçÃಯ ಹೆದ್ದಾರಿ ವಸತಿಗೃಹಕ್ಕೂ ನುಗ್ಗಿರುವ ಬಗ್ಗೆ ಸ್ಥಳೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಕನ್ನಡ ವೃತ್ತದ ಸಮೀಪದ ಶ್ರೀರಾಮ ಕಾಂಪ್ಲೆಕ್ಸ್ನ ಎರಡು ಅಂಗಡಿಗಳ ಬೀಗ ಮುರಿದಿರುವುದು ಬೆಳಕಿಗೆ ಬಂದಿದೆ. ತಿರುಮೂರ್ತಿ ಎಂಬವರ ಸೈಬರ್ ಅಂಗಡಿಗೆ ನುಗ್ಗಿದ ಕಳ್ಳ, ಬೀಗ ಒಡೆದು ಅಂದಾಜು ೧೦ರಿಂದ ೧೫ ಸಾವಿರ ನಗದು ಕಳವು ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಅಂಗಡಿಯ ಹಿಂಭಾಗದಲ್ಲಿರುವ ಬ್ಯೂಟಿ ಪಾರ್ಲರ್‌ಗೂ ನುಗ್ಗಿ ಹಣಕ್ಕಾಗಿ ಹುಡುಕಾಡಿದ್ದಾನೆ. ಆದರೆ ಯಾವುದೇ ಬೆಲೆಬಾಳುವ ವಸ್ತುಗಳು ಅಥವಾ ನಗದು ಸಿಗದ ಹಿನ್ನೆಲೆಯಲ್ಲಿ ವಾಪಸಾಗಿರುವುದು ಕಂಡುಬAದಿದೆ. ಇದೇ ರೀತಿಯಲ್ಲಿ ಮಂಗಳವಾರ ಗದ್ದೆಹಳ್ಳದಲ್ಲಿರುವ ವಂದನ ಬಾರ್‌ಗೆ ನುಗ್ಗಿ ಅಲ್ಲಿಯೂ ಹಣ ಕದ್ದು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ಮಾಹಿತಿ ಪಡೆದ ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದು, ಶೀಘ್ರ ಬಂಧನಕ್ಕೆ ಬಲೆ ಬೀಸಿದ್ದಾರೆ.