ಕೊಡಗು ಕ್ರೀಡೆಯ ತವರೂರು, ಹಾಕಿಯ ನೆಲೆಬೀಡು. ಹಾಕಿಯಲ್ಲಿ ಅತೀ ಹೆಚ್ಚು ಪ್ರಸಿದ್ಧಿಯನ್ನು ಹೊಂದಿರುವ ರಾಜ್ಯ ಪಂಜಾಬ್.ಕೊಡಗು ಜಿಲ್ಲೆಯನ್ನು ಹಾಕಿಯಲ್ಲಿ ಕರ್ನಾಟಕದ ಪಂಜಾಬ್ ಎಂದೂ ಕರೆಯುತ್ತೇವೆ. ಹಾಕಿ ವಿಶ್ವಕಪ್, ಒಲಂಪಿಕ್ಸ್ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಕೊಡಗಿನ ಹಾಕಿ ಆಟಗಾರರದ್ದೇ ಪಾರುಪತ್ಯವಿತ್ತು. ಹಾಕಿ ಭಾರತದ ರಾಷ್ಟಿçÃಯ ತಂಡದಲ್ಲಿ ಕನಿಷ್ಟ ಮೂವರಾದರೂ ಸ್ಥಾನ ಪಡೆಯುತ್ತಿದ್ದರು. ೧೯೭೫ರಲ್ಲಿ ಭಾರತವು ಚೊಚ್ಚಲ ಹಾಕಿ ವಿಶ್ವಕಪ್ ಗೆದ್ದಾಗ ಭಾರತ ತಂಡದಲ್ಲಿ ಕೊಡಗಿನ ಬಿ.ಪಿ. ಗೋವಿಂದ ಹಾಗೂ ಪಿ.ಇ. ಕಾಳಯ್ಯ ಅವರುಸ್ಥಾನ ಪಡೆದಿದ್ದರು. ಆದರೆ ಕಳೆದ ೧೨ ವರ್ಷಗಳಿಂದ ವಿಶ್ವಕಪ್‌ನಲ್ಲಿ ಕೊಡಗಿನ ಆಟಗಾರರೇ ಇಲ್ಲ. ಕಳೆದ ವರ್ಷ ಯೂರೋಪ್ ಲೀಗ್‌ನಲ್ಲಿ ಕೊಡಗಿನ ಚಂದೂರ ಪೂವಣ್ಣ ಅವರು ಸ್ಥಾನ ಪಡೆದಿದ್ದರು. ಆದರೆ ೨೦೧೪ರ ಬಳಿಕ ವಿಶ್ವಕಪ್, ೨೦೧೬ರ ಬಳಿಕ ಒಲಂಪಿಕ್ ಹಾಗೂ ೨೦೧೮ರ ಬಳಿಕ ಏಷ್ಯನ್ ಗೇಮ್ಸ್ನಲ್ಲಿ ಕೊಡಗಿನ ಆಟಗಾರರು ರಾಷ್ಟಿçÃಯ ತಂಡದಲ್ಲಿ ಇಲ್ಲದಿರುವುದು ವಿಪರ್ಯಾಸ.

೨೦೧೪ರ ಹಾಕಿ ವಿಶ್ವಕಪ್‌ನಲ್ಲಿ ಕೊಡಗಿನ ನಾಲ್ವರು

ಆಗಸ್ಟ್ ೧೫ ರಿಂದ ೩೦ರವರೆಗೆ ನೆದರ್ಲ್ಯಾಂಡ್ ಹಾಗೂ ಬೆಲ್ಜಿಯಂನಲ್ಲಿ ಹಾಕಿ ವಿಶ್ವಕಪ್ ನಡೆಯಲಿದೆ. ೨೦೧೪ರ ಬಳಿಕ ಕೊಡಗಿನ ಒಬ್ಬ ಹಾಕಿ ಆಟಗಾರ ಕೂಡ ವಿಶ್ವಕಪ್‌ನಲ್ಲಿ ಸ್ಥಾನ ಪಡೆದಿಲ್ಲ. ೨೦೧೪ರಲ್ಲಿ ನೆದರ್ಲ್ಯಾಂಡ್‌ನಲ್ಲಿ ನಡೆದ ಹಾಕಿ ವಿಶ್ವಕಪ್‌ನಲ್ಲಿ ಕೊಡಗಿನ ಎಸ್.ವಿ ಸುನಿಲ್, ರಘುನಾಥ್, ಎಸ್.ಕೆ ಉತ್ತಪ್ಪ, ನಿಖಿನ್ ತಿಮ್ಮಯ್ಯ ಭಾರತ ತಂಡದ ಪರವಾಗಿ ಆಡಿದ್ದರು. ಅದಾದ ಬಳಿಕ ೨೦೧೮, ೨೦೨೩ ಹಾಗೂ ೨೦೨೬ರ ವಿಶ್ವಕಪ್‌ಗಳÀಲ್ಲಿ ಕೊಡಗಿನ ಆಟಗಾರರೇ ಇಲ್ಲ. ೧೨ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಹಾಕಿ ವಿಶ್ವಕಪ್‌ಗೆ ಕರ್ನಾಟದಕ ಏಕೈಕ ಆಟಗಾರರ ಆಯ್ಕೆಯಾಗಿದ್ದಾನೆ. ಕೂಡಿಗೆ ಕ್ರೀಡಾ ಶಾಲೆಯ ವಿದ್ಯಾರ್ಥಿಯಾಗಿದ್ದ ಹಾಸನದ ಎಚ್.ಎಸ್ ಮೋಹಿತ್ ಈ ಬಾರಿಯ ವಿಶ್ವಕಪ್ Àಲ್ಲಿ ಭಾರತ ತಂಡದಲ್ಲಿ ಗೋಲ್‌ಕೀಪರ್ ಆಗಿ ಸ್ಥಾನ ಪಡೆದಿದ್ದಾರೆ.

೨೦೧೬ರ ಲಂಡನ್ ರಿಯೋ ಒಲಿಂಪಿಕ್ಸ್ನಲ್ಲಿ ಕೊಡಗಿನ ಎಸ್.ವಿ ಸುನಿಲ್, ರಘುನಾಥ್, ಎಸ್.ಕೆ ಉತ್ತಪ್ಪ, ನಿಖಿನ್ ತಿಮ್ಮಯ್ಯ ಭಾರತ ಹಾಕಿ ತಂಡದಲ್ಲಿ ಇದ್ದರು. ಇದಾದ ನಂತರ ಒಲಿಂಪಿಕ್ಸ್ನಲ್ಲಿ ಕೂಡ ಕೊಡಗಿನ ಆಟಗಾರರಿಗೆ ಅವಕಾಶ ದೊರೆತಿಲ್ಲ. ೨೦೧೮ರ ಏಷ್ಯನ್ ಗೇಮ್ಸ್ನಲ್ಲಿ ಎಸ್.ವಿ ಸುನಿಲ್ ಆಡಿದ್ದರು. ಇದಾದ ಬಳಿಕ ಏಷ್ಯನ್ ಗೇಮ್ಸ್ನಲ್ಲಿ ಕೂಡ ಕೊಡಗಿನ ಆಟಗಾರರಿಗೆ ಭಾರತ ರಾಷ್ಟಿçÃಯ ಹಾಕಿ ತಂಡ ದೂರವಾಗಿಯೇ ಉಳಿದಿದೆ.

ಹಾಕಿಯ ತವರೂರಿನಲ್ಲೇ ಕಳೆದ ಒಂದು ದಶಕಗಳಿಂದ ಹಾಕಿಯ ಕ್ರೇಜ್ ಕಡಿಮೆಯಾಗುತ್ತಾ ಬಂದಿದೆ. ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲಿ ಯುವ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಹೊರತೆಗೆಯುತ್ತಾರೆ. ಆದರೆ ಅವರಿಗೆ ಜಿಲ್ಲೆಯಲ್ಲಿ ಸರಿಯಾದ ಆಟದ ವ್ಯವಸ್ಥೆಯೇ ಇಲ್ಲದಂತಾಗಿದೆ. ಸಣ್ಣ ರಾಜ್ಯ ಒಡಿಸ್ಸಾದಲ್ಲಿ ಅಲ್ಲಿನ ಆಟಗಾರರು ಸಣ್ಣ ಪ್ರಾಯದಲ್ಲೇ ಆಸ್ಟೊçà ಹಾಕಿ ಟರ್ಫ್ನಲ್ಲೇ ಆಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿರುವ ಹಾಕಿ ಟರ್ಫ್ ಕ್ರೀಡಾಂಗಣ ಗುಣಮಟ್ಟ ಅಷ್ಟಕಷ್ಟೇ. ಅದಲ್ಲದೇ ಮಣ್ಣಿನ ಹಾಕಿ ಮೈದಾನದಲ್ಲಿ ಆಡಿ ಏಕಾಏಕಿ ಆಸ್ಟೊçà ಟರ್ಫ್ನಲ್ಲಿ ಆಡಲು ಕಷ್ಟಸಾಧ್ಯ.ಹಾಕಿ ಕ್ರೀಡೆಗೆ ಮೂಲಭೂತ ಸೌಕರ್ಯಗಳು ಇಲ್ಲದೆ, ಆಟಗಾರರು ಹಾಕಿ ಆಟದಿಂದಲೇ ದೂರ ಸರಿಯುತ್ತಿದ್ದಾರೆ. ರಾಷ್ಟಿçÃಯ ಮಟ್ಟದ ನುರಿತ ತರಬೇತುದಾರರು ಕೂಡ ಇಲ್ಲಿ ಇಲ್ಲವಾಗಿದ್ದಾರೆ. ಕ್ರೀಡಾಪಟುಗಳು ಕೇವಲ ಕಾಲೇಜು ಮಟ್ಟದವರೆಗೆ ಹಾಕಿ ಕ್ರೀಡೆಯತ್ತ ಆಸಕ್ತಿ ತೋರಿ ನಂತರ ದೂರವಾಗುತ್ತಿದ್ದಾರೆ. ಕರ್ನಾಟಕ ಹಾಕಿ ತಂಡದಲ್ಲಿ ಕೊಡಗಿನ ೭ ರಿಂದ ೮ ಮಂದಿ ಆಟಗಾರರು ಸ್ಥಾನ ಪಡೆಯುವುದು ಮಾಮೂಲಿ. ಆದರೆ ರಾಷ್ಟಿçÃಯ ತಂಡವೆAಬ ಕನಸು ಕೊಡಗಿನ ಆಟಗಾರರಿಗೆ ಕಳೆದ ಒಂದು ದಶಕಗದಿಂದ ಕನಸಾಗಿಯೇ ಉಳಿದಿದೆ. ಕೊಡಗಿನ ಆಟಗಾರರ ಪಾರುಪತ್ಯವಿದ್ದ ಭಾರತದ ಹಾಕಿ ತಂಡದಲ್ಲಿ ಪಂಜಾಬ್, ಹರಿಯಾಣ ರಾಜ್ಯದ ಆಟಗಾರರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

೪೩ ವರ್ಷಗಳ ಕಾಲ ಹಾಕಿ ವಿಶ್ವಕಪ್ ನಲ್ಲಿ ಕೊಡಗಿನ ಆಟಗಾರರು;

೧೯೭೧ ರಿಂದ ೨೦೧೪ ರವರೆಗೆ ನಡೆದ ಹಾಕಿ ವಿಶ್ವಕಪ್ ಟೂರ್ನಿಗಳಲ್ಲಿ ಒಟ್ಟು ೧೬ ಮಂದಿ ಕೊಡಗಿನ ಆಟಗಾರರು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

೧೯೭೧ರ ಬಾರ್ಸಿಲೋನಾ ಮತ್ತು ೧೯೭೩ರ ಆಮ್ಸೆಲ್ವೀನ್ ವಿಶ್ವಕಪ್‌ನಲ್ಲಿ ಡಾ. ಎಂ.ಪಿ. ಗಣೇಶ್ ಆಡಿದ್ದರು. ೧೯೭೩ ಮತ್ತು ೧೯೭೫ರಲ್ಲಿ ಬಿ.ಪಿ. ಗೋವಿಂದ, ೧೯೭೫ರಲ್ಲಿ ಪಿ.ಇ. ಕಾಳಯ್ಯ ಅವರು ಕೊಡಗಿನಿಂದ ಆಡಿ ಚಾಂಪಿಯನ್ ತಂಡದಲ್ಲಿದ್ದರು.

೧೯೮೨ರ ಮುಂಬೈ ಮತ್ತು ೧೯೮೬ರ ಲಂಡನ್ ವಿಶ್ವಕಪ್‌ನಲ್ಲಿ ಎಂ.ಎA. ಸೋಮಯ್ಯ ಭಾರತದ ಪರ ಆಡಿದ್ದರು. ೧೯೯೦ರ ಲಾಹೋರ್ ವಿಶ್ವಕಪ್‌ನಲ್ಲಿ ಬಿ.ಕೆ. ಸುಬ್ರಮಣಿ ತಂಡದಲ್ಲಿದ್ದರು.

೧೯೯೪ರ ಸಿಡ್ನಿ ವಿಶ್ವಕಪ್‌ನಲ್ಲಿ ಕೊಡಗಿನಿಂದ ಒಟ್ಟಿಗೆ ೩ ಜನ ಆಡಿದ್ದರು. ಡಾ. ಎ.ಬಿ. ಸುಬ್ಬಯ್ಯ, ಕೆ.ಕೆ. ಪೂಣಚ್ಚ, ಸಂದೀಪ್ ಸೋಮೇಶ್ ಅವರು ಆ ತಂಡದಲ್ಲಿದ್ದರು. ೧೯೯೮ರ ಉಟ್ರೆಕ್ಟ್ ವಿಶ್ವಕಪ್‌ನಲ್ಲಿ ಜಗದೀಶ್ ಪೊನ್ನಪ್ಪ ಆಡಿದ್ದರು.

೨೦೦೨, ೨೦೦೬, ೨೦೧೦ ರಲ್ಲಿ ಸತ ೩ ಬಾರಿ ಅರ್ಜುನ್ ಹಾಲಪ್ಪ ಅವರು ವಿಶ್ವಕಪ್ ಆಡಿದ್ದರು. ೨೦೦೬ರಲ್ಲಿ ವಿ.ಎಸ್. ವಿನಯ್, ಹರಿಪ್ರಸಾದ್, ವಿ.ಆರ್. ರಘುನಾಥ್ ಅವರು ಒಟ್ಟಿಗೆ ಆಡಿದ್ದರು.

ಕೊನೆಯ ಬಾರಿ ೨೦೧೪ರ ನೆದರ್ಲ್ಯಾಂಡ್ ವಿಶ್ವಕಪ್‌ನಲ್ಲಿ ವಿ.ಎಸ್. ಸುನಿಲ್, ವಿ.ಆರ್. ರಘುನಾಥ್, ಎಸ್.ಕೆ. ಉತ್ತಪ್ಪ, ಸಿ. ನಿಕಿನ್ ತಿಮ್ಮಯ್ಯ ೪ ಜನ ಕೊಡಗಿನ ಆಟಗಾರರು ಒಟ್ಟಿಗೆ ಆಡಿದ್ದರು. ಇದೇ ಕೊಡಗಿನ ಆಟಗಾರರು ಆಡಿದ ಕೊನೆಯ ವಿಶ್ವಕಪ್ ಆಗಿದೆ.

೧೯೭೦ ರಿಂದ ೨೦೧೮ ರವರೆಗೆ ಕೊಡಗಿನ ಆಟಗಾರ ಚಿನ್ನದ ಭೇಟೆ

೧೯೭೨ರ ಮ್ಯೂನಿಚ್ ಒಲಂಪಿಕ್ಸ್ನಲ್ಲಿ ಎಂ.ಪಿ. ಗಣೇಶ್, ಬಿ.ಪಿ. ಗೋವಿಂದ ಅವರು ಕಂಚಿನ ಪದಕ ಗೆದ್ದಿದ್ದರು. ೧೯೮೦ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಎಂ.ಎA. ಸೋಮಯ್ಯ ಅವರು ಚಿನ್ನದ ಪದಕ ಗೆದ್ದ ತಂಡದ ಸದಸ್ಯರಾಗಿದ್ದರು.

೧೯೭೧ರ ವಿಶ್ವಕಪ್‌ನಲ್ಲಿ ಡಾ. ಎಂ.ಪಿ. ಗಣೇಶ್ ಕಂಚು ಗೆದ್ದರು. ೧೯೭೩ರಲ್ಲಿ ಬಿ.ಪಿ. ಗೋವಿಂದ, ಡಾ. ಎಂ.ಪಿ. ಗಣೇಶ್ ಬೆಳ್ಳಿ ಪದಕ ಗೆದ್ದ ತಂಡದಲ್ಲಿದ್ದರು. ೧೯೭೫ರಲ್ಲಿ ಪಿ.ಇ. ಕಾಳಯ್ಯ, ಬಿ.ಪಿ. ಗೋವಿಂದ ಅವರು ವಿಶ್ವಕಪ್ ಚಾಂಪಿಯನ್ ತಂಡದಲ್ಲಿದ್ದರು.

ಏಷ್ಯನ್ ಗೇಮ್ಸ್ನಲ್ಲಿ ಕೊಡಗಿನ ಆಟಗಾರರ ಸಾಧನೆ

ಬಿ.ಪಿ. ಗೋವಿಂದ ಅವರು ಏಷ್ಯನ್ ಗೇಮ್ಸ್ನಲ್ಲಿ ೧೯೭೦, ೭೪, ೭೮ ರಲ್ಲಿ ಬೆಳ್ಳಿ ಪದಕ ಗೆದ್ದರು. ಅಮ್ಮಂಡ ಎಸ್. ಉತ್ತಯ್ಯ ೧೯೭೦ರಲ್ಲಿ ಬೆಳ್ಳಿ, ಎಂ.ಪಿ. ಗಣೇಶ್ ೧೯೭೦, ೭೪ರಲ್ಲಿ ಬೆಳ್ಳಿ, ಕೆ.ಎನ್. ಕುಶ ೧೯೭೪ರಲ್ಲಿ ಬೆಳ್ಳಿ ಪದಕ ಗೆದ್ದರು.

ಎಂ.ಎA. ಸೋಮಯ್ಯ ೧೯೮೨ರಲ್ಲಿ ಬೆಳ್ಳಿ ಮತ್ತು ೧೯೮೬ರಲ್ಲಿ ಕಂಚು, ಬಿ.ಕೆ. ಸುಬ್ರಮಣಿ ೧೯೮೬ರಲ್ಲಿ ಕಂಚು ಪದಕ ಗೆದ್ದರು.

ಎ.ಬಿ. ಸುಬ್ಬಯ್ಯ ೧೯೯೦, ೯೪ರಲ್ಲಿ ಬೆಳ್ಳಿ ಮತ್ತು ೧೯೯೮ರಲ್ಲಿ ಚಿನ್ನದ ಪದಕ, ಸಂದೀಪ್ ಸೋಮೇಶ್ ೧೯೯೮ ರಲ್ಲಿ ಚಿನ್ನದ ಪದಕ ಗೆದ್ದರು.

ಅರ್ಜುನ ಹಾಲಪ್ಪ ೨೦೧೦ರಲ್ಲಿ ಕಂಚು, ವಿ.ಆರ್. ರಘುನಾಥ್ ೨೦೧೪ರಲ್ಲಿ ಚಿನ್ನ, ಎಸ್.ವಿ. ಸುನಿಲ್ ೨೦೧೪ರಲ್ಲಿ ಚಿನ್ನ ಮತ್ತು ೨೦೧೮ರಲ್ಲಿ ಕಂಚು, ಸಿ. ನಿಕ್ಕಿನ್ ತಿಮ್ಮಯ್ಯ ೨೦೧೪ರಲ್ಲಿ ಚಿನ್ನ ಪದಕ ಗೆದ್ದಿದ್ದರು.

ಜೂನಿಯರ್ ತಂಡದಲ್ಲಿಲ್ಲ ಕೊಡಗಿನ ಆಟಗಾರರು

ದಶಕಗಳ ಹಿಂದೆ ಭಾರತದ ರಾಷ್ಟಿçÃಯ ಹಾಕಿ ಜೂನಿಯರ್ ತಂಡದಲ್ಲಿ ಕೊಡಗಿನ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು ಆದರೆ ಇತ್ತೀಚಿನ ವರ್ಷಗಳಲ್ಲಿ ಕೊಡಗಿನ ಆಟಗಾರರು ಜೂನಿಯರ್ ತಂಡದಲ್ಲಿ ಕೂಡ ಸ್ಥಾನ ಪಡೆಯುತ್ತಿಲ್ಲ. ಚಂದೂರ ಪೂವಣ್ಣ ಒಬ್ಬರು ಮಾತ್ರ ಜೂನಿಯರ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಅದಲ್ಲದೇ ರಾಷ್ಟಿçÃಯ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಕೂಡ ಕೊಡಗಿನ ಹಾಕಿ ಆಟಗಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದೆ. ಸಾಯಿ ಹಾಕಿ ಹಾಸ್ಟೆಲ್‌ನಲ್ಲಿ ಕೂಡ ಕೊಡಗಿನ ಯುವ ಹಾಕಿಪಟುಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಕಳೆದ ವರ್ಷ ಯೂರೋಪ್ ಲೀಗ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕೊಡಗಿನ ಹಾಕಿ ಆಟಗಾರ ಚಂದೂರ ಪೂವಣ್ಣ ಹೇಳುತ್ತಾರೆ.