ವೀರಾಜಪೇಟೆ, ಆ. ೧೩: ವೀರಾಜಪೇಟೆ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಸ್ಥಳೀಯ ಸಂಘ-ಸAಸ್ಥೆಗಳ ಜಂಟಿ ಆಶ್ರಯದಲ್ಲಿ, ಮದ್ಯವರ್ಜನಾ ಶಿಬಿರವನ್ನು ಆಯೋಜಿಸುವ ಉದ್ದೇಶದಿಂದ ವೀರಾಜಪೇಟೆಯ ಅಂಗಳ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು.
ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಅರುಣ್ ಬಾನಂಗಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ರಚನೆ ಮಾಡಲಾಯಿತು. ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮದ್ಯವ್ಯಸನಕ್ಕೆ ತುತ್ತಾದವರನ್ನು ಆ ಚಟದಿಂದ ಮುಕ್ತಗೊಳಿಸಿ, ಅವರ ಕುಟುಂಬಗಳಲ್ಲಿ ಮರಳಿ ಸಂತಸ ತರಲು ವೀರಾಜಪೇಟೆಯಲ್ಲಿ ಮದ್ಯವರ್ಜನ ಶಿಬಿರ ಆಯೋಜಿಸಲಾಗುತ್ತಿದೆ ಎಂದರು. ಬಳಿಕ ವ್ಯವಸ್ಥಾಪನಾ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜೇಮ್ಸ್, ಗೌರವಾಧ್ಯಕ್ಷರಾಗಿ ಲಕ್ಷಿ÷್ಮ, ಕೋಶಾಧಿಕಾರಿಯಾಗಿ ಸುಮನ, ಉಪಾಧ್ಯಕ್ಷರಾಗಿ, ಬಿ.ಎಂ. ಗಣೇಶ್, ರಜಿತ ಕಾರ್ಯಪ್ಪ, ರೇಖಾ ಗಣೇಶ್ ಸೇರಿದಂತೆ ಸಲಹಾ ಸಮಿತಿ ಸದಸ್ಯರನ್ನು, ಗೌರವ ಸಲಹೆಗಾರರನ್ನೂ ಸಹ ಆಯ್ಕೆ ಮಾಡಲಾಯಿತು.
ವೀರಾಜಪೇಟೆ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಹರೀಶ್ ಮಾತನಾಡಿ, ಒಕ್ಕೂಟಗಳ ಮತ್ತು ಸೇವಾ ಪ್ರತಿನಿಧಿಗಳ ಮುಖಾಂತರ ಪ್ರತಿಯೊಂದು ಸಂಘದ ಸದಸ್ಯರ ಮನೆ-ಮನೆಗೂ ಭೇಟಿ ನೀಡಿ ಶಿಬಿರಾರ್ಥಿಗಳ ನೋಂದಣಿ ಪ್ರಕ್ರಿಯೆಯನ್ನು ವೇಗಗೊಳಿಸಬೇಕು ಎಂದರು.
ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಅರುಣ್ ಬಾನಂಗಡ ಅವರು ಮಾತನಾಡಿ, ಗ್ರಾಮೀಣ ಭಾಗದ ಪ್ರತಿಯೊಂದು ಕುಟುಂಬಕ್ಕೂ ಈ ಶಿಬಿರದ ಮಾಹಿತಿ ತಲುಪಬೇಕು. ಸ್ಥಳೀಯ ಸಂಘ-ಸAಸ್ಥೆಗಳು ಮತ್ತು ಸ್ವಯಂಸೇವಕರು ಕೈಜೋಡಿಸಿದಾಗ ಮಾತ್ರ ಈ ಅಭಿಯಾನ ಸಂಪೂರ್ಣ ಯಶಸ್ವಿಯಾಗಲು ಸಾಧ್ಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲಾ ನಿರ್ದೇಶಕರಾದ ವಿಠಲ್ ಸಾಲಿಯಾನ್ ಅವರ ಮಾರ್ಗದರ್ಶನದಲ್ಲಿ ಈ ಸಭೆ ನಡೆಯಿತು. ವ್ಯವಸ್ಥಾಪನಾ ಸಮಿತಿ ರಚನೆ ಬಳಿಕ ನೂತನ ಸಮಿತಿಯ ಪದಾಧಿಕಾರಿಗಳು ಮದ್ಯವ್ಯರ್ಜನ ಶಿಬಿರದ ಪೂರ್ವ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಸುಬ್ರಮಣ್ಯ, ದಯಾ ಚಂಗಪ್ಪ, ವಲಯ ಮೇಲ್ವಿಚಾರಕರಾದ ಶಿವಕುಮಾರ್, ಧನೇಶ್, ಕೃಷಿ ಯೋಜನಾಧಿಕಾರಿ ವಸಂತ್, ಸೇವಾ ಪ್ರತಿನಿಧಿಗಳಾದ ಮೀನಾಕ್ಷಿ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು, ನವಜೀವನ ಸಮಿತಿಯ ಸದಸ್ಯರು, ವೀರಾಜಪೇಟೆ ಕ್ಷೇತ್ರದ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.