ಸಿದ್ದಾಪುರ: ಆ. ೧೩; ಜೆಎಸ್.ಕೆ.ಎಸ್.ಎಸ್.ಎಫ್-ಜಿ.ಸಿ.ಸಿ ಕೊಡಗಿನ ೨೦೨೬-೨೦೨೮ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು. ಜಿ.ಸಿ.ಸಿ ರಾಷ್ಟçಗಳ ವಿವಿಧ ಭಾಗಗಳಲ್ಲಿ ನೆಲೆಸಿರುವ ಕೊಡಗು ಜಿಲ್ಲೆಯ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಸಂಘಟನೆಯ ಮುಂದಿನ ಕಾರ್ಯಯೋಜನೆ ಹಾಗೂ ಭವಿಷ್ಯದ ಚಟುವಟಿಕೆಗಳ ಕುರಿತು ಚರ್ಚಿಸಿದರು.
ಸಾಮಾನ್ಯ ಸಭೆಯು ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಅಧ್ಯಕ್ಷರಾದ ಶುಐಬ್ ಫೈಝಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಬಾಖವಿ, ಎಸ್.ಕೆ.ಎಸ್.ಎಸ್.ಎಫ್ ರಾಜ್ಯ ಉಪಾಧ್ಯಕ್ಷ ತಮ್ಲೀಕ್ ದಾರಿಮಿ, ಹಾಗೂ ಜಿ.ಸಿ.ಸಿ ಹಿರಿಯ ನಾಯಕರಾದ ಜೈನುದ್ದೀನ್ ಮುಸ್ಲಿಯಾರ್ ಮತ್ತು ರಝಾಕ್ ಫೈಝಿ (ಎಡಪಾಲ) ಸಭೆಯಲ್ಲಿ ಭಾಗವಹಿಸಿ ಸಂಘಟನೆಯ ಬೆಳವಣಿಗೆಗೆ ಅಗತ್ಯವಾದ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಕಳೆದ ಅವಧಿಯ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಿ, ಸದಸ್ಯತ್ವ ವಿಸ್ತರಣೆ, ಸಂಘಟನಾ ಬಲವರ್ಧನೆ, ಧಾರ್ಮಿಕ ಶಿಕ್ಷಣ, ಸಮಾಜಸೇವಾ ಯೋಜನೆಗಳು, ಯುವಜನರ ಭಾಗವಹಿಸುವಿಕೆ, ಮಾಧ್ಯಮ ಚಟುವಟಿಕೆಗಳು ಹಾಗೂ ಜಿ.ಸಿ.ಸಿಯಲ್ಲಿರುವ ಕೊಡಗು ಮೂಲದ ಕನ್ನಡಿಗರನ್ನು ಇನ್ನಷ್ಟು ಸಂಘಟಿಸುವ ಕುರಿತು ಚರ್ಚೆ ನಡೆಯಿತು. ಸಭೆಯ ಅಂತ್ಯದಲ್ಲಿ ನೂತನ ಕಾರ್ಯಕಾರಿ ಸಮಿತಿಯ ಪಟ್ಟಿಯನ್ನು ಸರ್ವಾನುಮತದಿಂದ ಅಂತಿಮಗೊಳಿಸಲಾಯಿತು. ಬಳಿಕ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಶಾವರಾ ಸದಸ್ಯರು ಹಾಗೂ ಕೊಡಗು ನಾಇಬ್ ಖಾಝಿಯಾದ ಅಬ್ದುಲ್ಲಾ ಫೈಝಿ ಉಸ್ತಾದ್ ಅವರು ನೂತನ ಕಾರ್ಯಕಾರಿ ಸಮಿತಿಯನ್ನು ಅಧಿಕೃತವಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ಲಾ ಫೈಝಿ ಉಸ್ತಾದ್ ಅವರು, ಹುದ್ದೆಗಳು ಗೌರವದ ಸಂಕೇತವಲ್ಲ, ಬದಲಾಗಿ ಸಮಾಜ ಮತ್ತು ಸಂಘಟನೆಗೆ ಸೇವೆ ಸಲ್ಲಿಸುವ ಅಮಾನತ್ ಎಂದು ತಿಳಿಸಿದರು.
೨೦೨೬-೨೦೨೮ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಹುಸೈನ್ ಫೈಝಿ ಬಜೆಗುಂಡಿ ಆಯ್ಕೆಯಾದರು. ಸಲಹಾ ಸಮಿತಿ ಸದಸ್ಯರಾಗಿ ಜೈನುದ್ದೀನ್ ಮುಸ್ಲಿಯಾರ್, ರಝಾಕ್ ಫೈಝಿ ಹಾಗೂ ಶಫೀಕ್ ನೆಲ್ಲಿಹುದಿಕೇರಿ ನೇಮಕಗೊಂಡರು. ಉಪಾಧ್ಯಕ್ಷರಾಗಿ ಕಮರುದ್ದೀನ್ ಅಝ್ಹರಿ, ಯಾಹ್ಯಾ (ಕೊಡ್ಲಿಪೇಟೆ), ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ (ಚೇರಂಬಾಣೆ), ಕಾರ್ಯದರ್ಶಿಗಳಾಗಿ ರಹೀಮ್ (ಕುಶಾಲನಗರ), ಸಫ್ವಾನ್ (ಚಾಮೆ) ಸಂಘಟನಾ ಕಾರ್ಯದರ್ಶಿಯಾಗಿ ಅಶ್ರಫ್ ಅಝ್ಹರಿ (ಕೊಂಡAಗೇರಿ), ಕಾರ್ಯಕಾರಿ ಕಾರ್ಯದರ್ಶಿಯಾಗಿ ಅಪ್ಸರ್ (ಮಡಿಕೇರಿ), ಖಜಾಂಚಿ ಯಾಗಿ ರಹೀಮ್ (ಪೊನ್ನಂಪೇಟೆ, ಮಲೇಷ್ಯಾ), ದಅವಾ ವಿಂಗ್‌ಗೆ ಜುನೈದ್ ಬಜೆಗುಂಡಿ, ನಝೀರ್ ದಾರಿಮಿ (ಚಾಮೆ) ಆಯ್ಕೆಗೊಂಡರು. ಮೀಡಿಯಾ ವಿಂಗ್‌ಗೆ ರಶೀದ್ ಇ.ಪಿ. (ತ್ಯಾಗತೂರು), ವಿಕಾಯ ವಿಂಗ್‌ಗೆ ಲತೀಫ್ (ಕಡಂಗ), ಸಹಚಾರೆ ವಿಂಗ್‌ಗೆ ನವಾಝ್ ಎಡಪಾಲ, ಸದಸ್ಯರಾಗಿ ಅಶ್ಫಾಕ್ (ಕೊಡ್ಲಿಪೇಟೆ), ಗಫೂರ್ ಲತೀಫಿ, ಹಮ್ಜ ದಾರಿಮಿ, ನಿಜಾಂ (ಎಡಪಾಲಂ), ರಫೀಕ್ (ಕುಂಜಿಲ) ಹಾಗೂ ಉಮ್ಮರ್ ದಾರಿಮಿ ನೇಮಕಗೊಂಡರು.