ನಾಪೋಕ್ಲು, ಆ. ೧೩: ಬಿಲ್ಲವ ಸಮಾಜಕ್ಕಾಗಿ ಒಂದು ಸ್ವಂತ ಜಾಗವನ್ನು ಖರೀದಿಸುವುದು ಸಮಾಜದ ಕನಸಾಗಿತ್ತು. ಅದು ಇಂದು ನನಸಾಗಿದೆ ಎಂದು ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಪ್ರತೀಪ ಹೇಳಿದರು.
ಬಿಲ್ಲವ ಸಮಾಜದ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಆಟಿಡೊಂಜಿ ದಿನಾಚರಣೆ, ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಹಾಗೂ ಬೃಹತ್ ರಕ್ತದಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದವರು ಸಭೆ - ಸಮಾರಂಭಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಒಂದು ಸುಸಜ್ಜಿತ ಕಟ್ಟಡದ ಅಗತ್ಯವಿದೆ. ದಾನಿಗಳ ನೆರವಿನಿಂದ ಶೀಘ್ರವಾಗಿ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.
ಬಿಲ್ಲವ ಸಮಾಜದ ಜಿಲ್ಲಾ ಉಪಾಧ್ಯಕ್ಷ ಬಿ.ಬಿ. ವಿಠಲ, ಬಿ.ಆರ್. ದೇವಪ್ಪ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಾಪೋಕ್ಲು ಬಿಲ್ಲವ ಸಮಾಜದ ಉಪಾಧ್ಯಕ್ಷ ಬಿ.ಆರ್. ವಸಂತ್ ಹಾಗೂ ಜಗನ್ನಾಥ, ಕಾರ್ಯದರ್ಶಿ ಕೆ.ಎಸ್. ಲೋಹಿತ್, ಸಂಘಟನಾ ಕಾರ್ಯದರ್ಶಿ ಬಿ.ಎ. ಪ್ರಕಾಶ್, ಖಜಾಂಚಿ ಬಿ.ಡಿ. ದೀಪಕ್, ಕ್ರೀಡಾ ಕಾರ್ಯದರ್ಶಿ ಬಿ.ಎ. ದಿಲೀಪ್, ಸಮಾಜದ ಪ್ರಮುಖರಾದ, ಬಿ.ಎಸ್. ಬಾಬು, ಬಿ.ಎಸ್. ಬಾಳಪ್ಪ, ಬಿ.ಜಿ. ಅಣ್ಣಪ್ಪ, ಬಿ.ಬಿ. ನವೀನ್, ಚಂದ್ರಾವತಿ, ದೇವಕ್ಕಿ, ನಳಿನಿ, ಲಲಿತ, ಬಿ.ಜಿ. ಧನಂಜಯ, ಶಾರದ, ನಿರ್ದೇಶಕರು ಹಾಗೂ ಸಮಾಜವರು ಉಪಸ್ಥಿತರಿದ್ದರು.