ಪೊನ್ನಂಪೇಟೆ, ಆ. ೧೩: ಪೊನ್ನಂಪೇಟೆಯ ಕರ್ನಾಟಕ ಶಾಲೆ ಪ್ರಾಥಮಿಕ ವಿಭಾಗದಲ್ಲಿ ಸಚೇತನಾ ಕಾರ್ಯಕ್ರಮವನ್ನು ಆಯೋಜಿಸ ಲಾಯಿತು.
ಕಾರ್ಯಕ್ರಮದ ಅಂಗವಾಗಿ ೧೬ನೇ ಶತಮಾನದ ವೀರರಾಣಿ ಚೆನ್ನಭೈರಾದೇವಿಯ ಆಡಳಿತ, ಧೈರ್ಯ ಹಾಗೂ ಸಾಧನೆಗಳನ್ನು ಆಧರಿಸಿದ ಸಂಕ್ಷಿಪ್ತ ನಾಟಕವನ್ನು ೪ನೇ ತರಗತಿಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
ವೀರರಾಣಿ ಚೆನ್ನಭೈರಾದೇವಿ ಪಾತ್ರದಲ್ಲಿ ತನಿಷ ಪಿಳ್ಳೆ ಪಿ.ವಿ., ಮಂತ್ರಿ ಪಾತ್ರದಲ್ಲಿ ಜೆಶಿಕ ಹೆಚ್.ಎಸ್. ಹಾಗೂ ಆಸ್ಥಾನಿಕರಾಗಿ ವಿಷ್ಣುವರ್ಧನ್ ಎಂ.ಸಿ. ಹಾಗೂ ಪ್ರೀತಂ ಪೂರ್ಣಚಂದ್ರ ಎನ್.ವಿ. ಅಭಿನಯಿಸಿದರು.
ವಿದ್ಯಾರ್ಥಿಗಳ ನಾಟಕ ತರಗತಿ ಶಿಕ್ಷಕಿಯರಾದ ದಾಕ್ಷಾಯಿಣಿ ಎನ್.ಎಸ್. ಹಾಗೂ ಮಂಜುಳಾ ಆರ್. ನಿರ್ದೇಶನದಲ್ಲಿ ಮೂಡಿಬಂತು. ಮಕ್ಕಳನ್ನು ಐತಿಹಾಸಿಕ ಪಾತ್ರಗಳಿಗೆ ಸಜ್ಜುಗೊಳಿಸುವಲ್ಲಿ ಪೋಷಕರು ಸಹಕಾರ ನೀಡಿದರು. ಐತಿಹಾಸಿಕ ಘಟನೆಗಳನ್ನು ಅಭಿನಯದ ಮೂಲಕ ಪರಿಣಾಮಕಾರಿಯಾಗಿ ಪರಿಚಯಿಸಿ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕ ಬಿ.ಎಂ. ವಿಜಯ್ ಹಾಗೂ ಶಿಕ್ಷಕ ವೃಂದದ ಮೆಚ್ಚುಗೆ ಪಾತ್ರರಾದರು.