ಚೆಯ್ಯಂಡಾಣೆ, ಆ. ೧೨: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಕೇರಿ ಗ್ರಾಮದ ತೋಟವೊಂದರಲ್ಲಿ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ಸಾಗಾಟಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆ ೩೩ ನಾಟಾಗಳನ್ನು ವಶಪಡಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಬಲೆ ಬೀಸಿದೆ. ಕೋಕೇರಿ ಗ್ರಾಮದ ಬೆಳಿಯಂಡ್ರ ಕುಟುಂಬಕ್ಕೆ ಸೇರಿದ ತೋಟದಿಂದ ಅಕ್ರಮವಾಗಿ ಮರ ಕಡಿದು ಸಾಗಾಟ ಮಾಡಲು ಯತ್ನಿಸಿರುವ ಕುರಿತು ರಾಮಯ್ಯ ಎಂಬವರು ನೀಡಿದ ದೂರಿನ ಅನ್ವಯ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ೩೩ ಬೀಟೆ ಮರ ನಾಟಾಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬAಧಿಸಿದAತೆ ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ಸಾಗಾಟಕ್ಕೆ ಯತ್ನಿಸಿದ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಆರೋಪದಡಿ ಬಿ.ಎಂ.ಬೆಳ್ಯಪ್ಪ, ಬಿ.ಎಸ್. ಪೂಣಚ್ಚ, ಬಿ.ಪಿ. ತೀರ್ಥಕುಮಾರ್, ಬಿ.ಎಸ್. ಸುಬ್ಬಯ್ಯ, ಬಿ.ಎಸ್.ಜೀವನ್, ಬಿ.ಸಿ.ದಿನೇಶ್, ಬಿ.ಯು. ಆನಂದ್ ಎಂಬವರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದೆ.
ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಆರ್ಎಫ್ಓ ಶಿವರಾಮ್, ಡಿಆರ್ಎಫ್ಓ ಶ್ರೀನಿವಾಸ್, ಲೋಕೇಶ್, ಗಾರ್ಡ್ ನಂದೀಶ್, ಅಣ್ಣಾಸ್ ಗುಡ್ಡೆ, ಆರ್ಆರ್ಟಿ ಸಿಬ್ಬಂದಿ ಇದ್ದರು.