ಚೆಯ್ಯಂಡಾಣೆ, ಆ. ೧೦: ಸಮಸ್ತ ಸೆಂಟಿನರಿ ೧೦೦ನೇ ವರ್ಷಾಚರಣೆಯ ಅಂಗವಾಗಿ ಕರ್ನಾಟಕದಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಇದರ ಯಶಸ್ವಿಯಾಗಿ ಸಮಸ್ತ ಸೆಂಟಿನರಿ ಎಕ್ಸಿಕ್ಯೂಟಿವ್ ಕೌನ್ಸಿಲ್(ಇಸಿ)ನ್ನು ವೀರಾಜಪೇಟೆಯ ಅನ್ವಾರುಲ್ ಹುದಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಚಿಸಲಾಯಿತು.

ಸುನ್ನಿ ಜಂಇಯ್ಯತುಲ್ ಉಲಮಾ, ಕರ್ನಾಟಕ ಮುಸ್ಲಿಂ ಜಮಾಅತ್, ಕೊಡಗು ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್ ಸುನ್ನಿ ಯುವಜನ ಸಂಘ, ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್, ಸುನ್ನಿ ಸ್ಟೂಡೆಂಟ್ ಫೆಡರೇಶನ್ ಸೇರಿದಂತೆ ಸಂಘಟನೆಯ ಜಿಲ್ಲಾ ನಾಯಕರನ್ನು ಸೇರಿಸಿ ಕೌನ್ಸಿಲ್ ಅನ್ನು ರಚಿಸಲಾಗಿದೆ.

ಕೂರ್ಗ್ ಜಂಇಯ್ಯತುಲ್ ಉಲಮಾ ಜಿಲ್ಲಾಧ್ಯಕ್ಷ ಸಯ್ಯಿದ್ ಶಿಯಾಬುದ್ದೀನ್ ತಂಙಳ್ ಕಿಲ್ಲೂರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದಿವಾನಿ ಖಾಝಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಅದಿ ಮಲ್ಲೂರ್ ಉದ್ಘಾಟಿಸಿದರು.

ಡಾ. ಅಬ್ದುಲ್ ರಶೀದ್ ಝೃನಿ ಕಾಮಿಲ್ ಸಖಾಫಿ ವಿಷಯ ಮಂಡಿಸಿ ಮಾತನಾಡಿದರು. ಸಯ್ಯಿದ್ ಶಿಯಾಬುದ್ದೀನ್ ಕಿಲ್ಲೂರ್ ತಂಙಳ್ ಪ್ರಾರ್ಥಿಸಿ,ಹಫೀಲ್ ಸಅದಿ ಸ್ವಾಗತಿಸಿ, ವಂದಿಸಿದರು. ಕೊಡಗು ಜಿಲ್ಲಾ ಎಕ್ಸಿಕ್ಯೂಟಿವ್ ಕೌನ್ಸಿಲ್ ಅಧ್ಯಕ್ಷರಾಗಿ ಅಬ್ದುಲ್ ಹಫೀಲ್ ಸಅದಿ, ಜನರಲ್ ಕನ್ವಿನರ್ ಆಗಿ ಮೊಹಮ್ಮದ್ ಹಾಜಿ ಕುಂಜಿಲ, ಕೋಶಾಧಿಕಾರಿಯಾಗಿ ಮುನಿರ್ ಮಲ್ಳರಿ,ವೈಸ್ ಚೇರ್ಮನ್ ಆಗಿ ಖಾಲಿದ್ ಫೈಝಿ, ಅಬ್ದುಲ್ಲ ಸಖಾಫಿ, ಜಂಟಿ ಕನ್ವೀನರ್ ಆಗಿ ಮುಜೀಬ್ ಕೊಂಡAಗೇರಿ, ಖಮರುದ್ದೀನ್ ಸಖಾಫಿ ಝೋನ್ ಉಸ್ತುವಾರಿಗಳಾಗಿ ಮಡಿಕೇರಿ ಝೋನ್ ಷಂಶುದ್ದೀನ್ ಅಂಜ್ಜದಿ, ವೀರಾಜಪೇಟೆ ಝೋನ್ ಯಾಕೂಬ್ ಮಾಸ್ಟರ್, ಸೋಮವಾರಪೇಟೆ ಜೋನ್ ಜುನೈದ್ ನೆಲ್ಲಿಹುದಿಕೇರಿ ಅವರನ್ನು ಆಯ್ಕೆ ಮಾಡಲಾಯಿತು.