*ಗೋಣಿಕೊಪ್ಪ, ಆ. ೧೦: ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಮಹಾಸಭೆ ಗೋಣಿಕೊಪ್ಪ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಸಂಘದಗೌರವಅಧ್ಯಕ್ಷ ಕೆ.ಪಿ. ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೆ.ಪಿ. ಬೋಪಣ್ಣ ಅವರು ಸತತ ಆರನೇ ಬಾರಿಗೆ ಗೌರವ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದು, ಜಿಮ್ಮ ಸುಬ್ಬಯ್ಯ ಅವರು ೧೬ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಅಶ್ವತ್, ಕಾರ್ಯದರ್ಶಿಯಾಗಿ ಹೇಮಂತ್, ಖಜಾಂಚಿಯಾಗಿ ರಂಜು ಹಾಗೂ ಸಹ ಕಾರ್ಯದರ್ಶಿಯಾಗಿ ಪೂಣಚ್ಚ ಆಯ್ಕೆಯಾದರು. ಇದರ ಜೊತೆಗೆ ಸಂಘದ ಆಡಳಿತ ಮಂಡಳಿಗೆ ೧೧ ಸದಸ್ಯರನ್ನು ಆಯ್ಕೆ ಮಾಡಲಾಯಿತು.