ಕಣಿವೆ, ಆ. ೧೦: ಸತತ ೨೮ ವರ್ಷಗಳ ಕಾಲ ದೇಶ ಸೇವೆ ಮಾಡಿ ತವರಿಗೆ ಮರಳಿದ ಯೋಧನನ್ನು ಕುಶಾಲನಗರದ ಕಾವೇರಿ ಪ್ರತಿಮೆ ಬಳಿ ಹುಟ್ಟೂರಿನ ಜನತೆ ಆತ್ಮೀಯವಾಗಿ ಬರಮಾಡಿಕೊಂಡರು.
ನAಜರಾಯಪಟ್ಟಣ ನಿವಾಸಿ ಸಿ.ಎಲ್. ತಿಲಕ್ ಅವರನ್ನು ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭ ಯೋಧ ತಿಲಕ್ ಪತ್ನಿ ನೀತಾ, ಪುತ್ರ ಗಗನ್ ಇದ್ದರು.
ನಂಜರಾಯಪಟ್ಟಣ ಗ್ರಾ.ಪಂ. ಮಾಜಿ ಅಧ್ಯಕ್ಷ ಸಿ.ಎಲ್. ವಿಶ್ವ, ಜ್ಯೋತಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಹೆಚ್.ಎಸ್.ಚೇತನ್, ಕುಟುಂಬ ಸದಸ್ಯರಾದ ನಡುಮನೆ ಹೇಮಾವತಿ, ಮಾಜಿ ಸೈನಿಕರಾದ ಪಾಣತ್ತಲೆ ಸೋಮಣ್ಣ, ಜಲಾಲುದ್ದೀನ್, ಪಿ.ಕೆ. ರಾಮು, ಕೆಮ್ಮಾರನ ಗಿರೀಶ್, ಪಾರೇರಾ ಜಯ ಮತ್ತಿತರರಿದ್ದರು.
ಕುಶಾಲನಗರದ ಕಾವೇರಿ ಪ್ರತಿಮೆ ಬಳಿಯಿಂದ ನಂಜರಾಯಪಟ್ಟಣದ ಸಹಕಾರ ಸಂಘದ ಸಭಾಂಗಣದವರೆಗೂ ತೆರೆದ ವಾಹನದಲ್ಲಿ ಯೋಧ ತಿಲಕ್ ಅವರನ್ನು ಕರೆದೊಯ್ಯಲಾಯಿತು.