ಮಡಿಕೇರಿ, ಆ. ೧೦: ಮೈಸೂರು ಕೊಡವ ಸಮಾಜದ ಗುರುಮನೆಯಲ್ಲಿ ಪೊಂಬೊಳಕ್ ಕೊಡವ ಕೂಟದ ೪ನೇ ವರ್ಷದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.

ಈ ಸಂದರ್ಭದಲ್ಲಿ, ಭೂಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಕರ್ನಲ್ ವಾಟೇರಿರ ಸದಾಶಿವ, ವಿದ್ಯಾಕ್ಷೇತ್ರದಲ್ಲಿ ಡಾಕ್ಟರೇಟ್ ಡಿಗ್ರಿ ಪಡೆದ ತೀತರಮಾಡ ದೇವಕ್ಕಿ, ಜಾನಪದ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಂದಪAಡ ಜಫ್ರಿ ನಾಣಯ್ಯ ಮತ್ತು ಕುಲ್ಲಚಂಡ ವಿನುತ ಕೇಸರಿ ಅವರುಗಳನ್ನು ಸನ್ಮಾನಿಸಲಾಯಿತು. ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಮುಂಡೋಟಿರ ಜಯ ಚಂಗಪ್ಪ ಪ್ರೋತ್ಸಾಹಧನ ನೀಡಿದರು.

ಕೊಡಂದೇರ ಹರೀಶ್ ಮಾಚಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತೀತರಮಾಡ ದೇವಕ್ಕಿ ಪ್ರಾರ್ಥನೆ ನೆರವೇರಿಸಿದರು. ಸಂಘದ ಅಧ್ಯಕ್ಷ ಮುಂಡೋಟಿರ ಜಯ ಚಂಗಪ್ಪ ಸ್ವಾಗತ ಕೋರಿದರು. ಒಂದು ವರ್ಷದಲ್ಲಿ ಮರಣ ಪಟ್ಟ ಸದಸ್ಯರ ಹೆಸರುಗಳನ್ನು ಚಂಬAಡ ರಜನಿ ಓದಿದರು. ಸಂಘದ ಜಂಟಿ ಕಾರ್ಯದರ್ಶಿ ತೀತರಮಾಡ ದೇವಕ್ಕಿ ಕಳೆದ ಸಭೆಯ ವರದಿಯನ್ನು ವಾಚಿಸಿದರು. ಖಜಾಂಚಿ ಮಂದನೆರವAಡ ಟಿಮ್‌ಸನ್ ನಾಣಯ್ಯ ೨೦೨೫-೨೬ ನೇ ಸಾಲಿನ ಲೆಕ್ಕಪತ್ರ ವರದಿಯನ್ನು ಒಪ್ಪಿಸಿದರು. ಕ್ರೀಡಾ ಕಾರ್ಯದರ್ಶಿ ಅಡಿಕೆರ ಸಜನ್ ಕಾರ್ಯಪ್ಪ ಕ್ರೀಡಾ ಚಟುವಟಿಕೆಗಳ ವರದಿ ಒಪ್ಪಿಸಿದರು. ಬೊಳ್ಳಜಿರ ವಿದ್ಯ ವಂದನಾರ್ಪಣೆ ಗೈದರು. ಅಣ್ಣರ್‌ಕಂಡ ಪ್ರತಿಮ ತಿಮ್ಮಯ್ಯ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಬೊಳಕಾಟ್, ಕೋಲಾಟ್, ಉಮ್ಮತಾಟ್, ನೃತ್ಯ-ನಾಟಕ ಪ್ರದರ್ಶನ ಜರುಗಿತು. ಮಕ್ಕಳ ಆಟ-ಪಾಟ್ ನಡೆಯಿತು.

ಕಾರ್ಯಕ್ರಮದಲ್ಲಿ ಬೊಪ್ಪಂಡ ಅಪ್ಪಾಜಿ, ಚೊಟ್ಟೆಮಾಡ ಗಣಪತಿ, ಮುಳ್ಳಂಡ ವಿನು ಕಾರ್ಯಪ್ಪ, ಕೊಟ್ರಂಗಡ ರಂಜನ್, ಮುಂಡೋಟಿರ ರಜಿನಿ ಚಂಗಪ್ಪ, ಬೊಳ್ಳೆಪಂಡ ವಾಣಿ ಹಾಜರಿದ್ದರು.