ಭಾಗಮಂಡಲ, ಆ. ೧೦: ತಲಕಾವೇರಿ ಕ್ಷೇತ್ರಕ್ಕೆ ಭಾನುವಾರ ರಾತ್ರಿ ಕಾಡಾನೆಗಳು ನುಗ್ಗಿ ದಾಂಧಲೆ ಮಾಡಿವೆ. ತಡ ರಾತ್ರಿಯಲ್ಲಿ ನುಗ್ಗಿದ ಕಾಡಾನೆ ಕಬ್ಬಿಣದ ಕಾಂಪೌAಡ್ ಮುರಿದು ಆವರಣದೊಳಗೆ ನುಸುಳಿದ ಕಾಡಾನೆಗಳು ಅನ್ನ ಛತ್ರದ ಕೆಳಭಾಗದಲ್ಲಿ ಇರುವ ಬ್ಯಾರಿಕೇಡ್ಗಳನ್ನು ಮುರಿದು ಹಾಕಿವೆ. ಹೂಕುಂಡಗಳನ್ನು ಧ್ವಂಸ ಮಾಡಿವೆ. ಕಬ್ಬಿಣದ ಗೇಟು ಒಂದನ್ನು ಧ್ವಂಸಗೊಳಿಸಿವೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಎರಡು ಆನೆಗಳು ಬಂದಿವೆ ಎಂದು ಹೇಳಲಾಗಿದ್ದು ಜನರು ಓಡಾಡಲು ಭಯ ಪಡುವಂತಾಗಿ ವಾತಾವರಣ ನಿರ್ಮಾಣವಾಗಿದೆ. ಮುಂಡ್ರೋಟು ಭಾಗದಿಂದ ಕಾಡಾನೆಗಳು ಪ್ರವೇಶಿಸದಂತೆ ಭದ್ರತಾ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸೋಲಾರ್ ಬೇಲಿ ಅಳವಡಿಸಲಾಗಿದ್ದು ಅದು ಕಾರ್ಯನಿರ್ವಹಿಸುತ್ತಿಲ್ಲ. ಮಳೆಗಾಲದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುವ ಪ್ರವಾಸಿಗರು ಬೆಳಿಗ್ಗೆ ೮.೩೦ ರ ನಂತರ ಹಾಗೂ ಸಂಜೆ ೫.೩೦ರ ಒಳಗಾಗಿ ಬರುವಂತೆ ಸೂಚನೆ ನೀಡಲಾಗಿದೆ. ಮಂಜು ಮುಸುಕಿದ ವಾತಾವರಣ ಇರುವುದರಿಂದ ಜನರಿಗೆ ಹಾಗೂ ವಾಹನ ಚಾಲಕರಿಗೆ ಆನೆಗಳು ಗೋಚರಿಸದೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಆದುದರಿಂದ ಜಾಗೃತರಾಗಿರುವಂತೆ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.