ಮೇರು ಮೃಗ ಎಂಬ ಹೆಗ್ಗಳಿಕೆಗೆ ಪ್ರಾಪ್ತವಾಗಿರುವ ಸಿಂಹವು ತನ್ನ ಅಸಾಮಾನ್ಯ ಶಕ್ತಿ ಹಾಗೂ ಚುರುಕುತನದಿಂದಾಗಿ ಪ್ರಾಣಿ ಪ್ರಪಂಚದಲ್ಲಿಯೇ ಮೃಗಗಳ ರಾಜ ಎಂದು ಕರೆಸಿಕೊಳ್ಳುತ್ತದೆ. ಅಳಿವಿನ ಅಂಚಿನಲ್ಲಿ ಇರುವ ಈ ವನ್ಯಜೀವಿಯ ಉಳಿವಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವುಗಳಿಗೆ ರಕ್ಷಣೆ ನೀಡಲು ವನ್ಯಮೃಗ ಚಿಂತಕರು ನ್ಯಾಷನಲ್ ಜಿಯೋಗ್ರಾಫಿಕ್ ಸಹಭಾಗಿತ್ವದಲ್ಲಿ ೨೦೧೩ ರಂದು ಆಗಸ್ಟ್ ತಿಂಗಳ ಹತ್ತನೇ ದಿನವನ್ನು ವಿಶ್ವ ಸಿಂಹಗಳ ದಿನವೆಂದು ಘೋಷಿಸಿದರು. ಪಾಂತೆರಾ ಲಿಯೋ ಎನ್ನುವ ವೈಜ್ಞಾನಿಕ ಹೆಸರನ್ನು ಹೊಂದಿರುವ ಸಿಂಹವನ್ನು ಅದರ ದೀರ್ಘವಾದ ಕೇಶರಾಶಿಗಳಿಂದಾಗಿ ಕೇಸರಿ ಎಂದೂ ಕರೆಯಲಾಗುತ್ತದೆ.
ಜನರಲ್ಲಿ ಸಿಂಹಗಳ ಬಗ್ಗೆ ಅರಿವು ಮೂಡಿಸಲು, ಸಿಂಹಗಳು ಎದುರಿಸುತ್ತಿರುವ ಸವಾಲುಗಳನ್ನು ತಿಳಿಸಲು ವಿಶ್ವದ ಸಿಂಹ ದಿನವನ್ನು ಆಚರಿಸಲಾಗುತ್ತದೆ. ಇದರೊಂದಿಗೆ ಸಿಂಹಗಳನ್ನು ಬೇಟೆಯಾಡುವವರಿಂದ ಅವನ್ನು ಉಳಿಸಲು, ಅವುಗಳಿಗೆ ಬೇಕಾದ ಸ್ವಾಭಾವಿಕ ತಾಣಗಳನ್ನು ರಕ್ಷಿಸಲು ಈ ದಿನವನ್ನು ಗುರುತಿಸಲಾಗಿದೆ. ಪ್ರಕೃತಿಯಲ್ಲಿ ಜೀವಸಂಕುಲಗಳ ಸಮತೋಲನವನ್ನು ಕಾಪಾಡಲು ಮತ್ತು ಸಾಂಸ್ಕೃತಿಕ ವೈಭವವನ್ನು ಇರಿಸಿಕೊಳ್ಳಲೂ ಈ ದಿನವನ್ನು ಆಚರಿಸಲಾಗುವುದು. ಅಲ್ಲದೆ ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳು ಮತ್ತು ಪ್ರತಿಯೊಬ್ಬ ಪ್ರಜೆಯೂ ಸಿಂಹದ ಬಾಳನ್ನು ತಮ್ಮ ಸ್ವಾರ್ಥಕ್ಕಾಗಿ ಕೆಡಿಸದಿರಲು ಸಹ ಈ ದಿನವನ್ನು ಆಚರಿಸಲಾಗುತ್ತದೆ.
ಸಿಂಹಗಳನ್ನು ಮುಖ್ಯವಾಗಿ ಆಫ್ರಿಕಾದ ಸಿಂಹ ಮತ್ತು ಏಶಿಯಾಟಿಕ್ ಸಿಂಹ ಎಂದು ವರ್ಗೀಕರಿಸಿ ಅವುಗಳನ್ನು ಪಾಂತೆರಾ ಲಿಯೋ ಮತ್ತು ಪಾಂತೆರಾ ಲಿಯೋ ಪರ್ಸಿಕಾ ಎಂದು ಹೆಸರಿಸಲಾಗಿದೆ. ಈ ಹಿಂದೆ ಸಿಂಹಗಳನ್ನು ಸರ್ಕಸ್ಗಳಲ್ಲಿ ಬಳಸಿಕೊಳ್ಳಲಾಗುತ್ತಿದ್ದರೂ ಅನಂತರದ ದಿನಗಳಲ್ಲಿ ಸರಕಾರ ಯಾವುದೇ ಕಾಡು
ಮೃಗವನ್ನು ಸರ್ಕಸ್ಗಳಲ್ಲಿ ಬಳಸಿಕೊಳ್ಳಬಾರದು ಎನ್ನುವ ಕಾನೂನನ್ನು ತಂದು ಅವುಗಳಿಗೆ ಮನುಜರು ನೀಡುವ ವೇದನೆಯನ್ನು ತಡೆಯಲಾಗಿದೆ. ಸ್ವತಂತ್ರವಾಗಿ ಅಲೆದಾಡುವ ಸಿಂಹಗಳನ್ನು ಮನುಷ್ಯ ತನ್ನ ಲಾಭಕ್ಕಾಗಿ ಹೀಗೆ ಬೋನಿನಲ್ಲಿ ಕೂಡಿಡುವುದು ಪ್ರಾಣಿದಯಾ ಸಂಘದವರ ವಿರೋಧಕ್ಕೆ ಕಾರಣವಾಗಿದೆ.
ವಿಶ್ವದಲ್ಲ್ಲಿ ಒಟ್ಟು ಸುಮಾರು ಮೂವತ್ತು ಸಾವಿರ ಸಿಂಹಗಳಿರಬಹುದೆAದು ಅಂದಾಜು ಮಾಡಲಾಗಿದೆ. ಟಾಂಜಾನಿಯಾ ಎಂಬ ಪ್ರದೇಶದಲ್ಲಿ ಸಿಂಹವು ಅಧಿಕ ಎಂದರೆ, ೧೪,೫೦೦ ಇದ್ದು ಅನಂತರದ ಸ್ಥಾನವನ್ನು ೩೨೮೪ ಸಿಂಹಗಳಿರುವ ದಕ್ಷಿಣ ಆಫ್ರಿಕಾವು ಪಡೆಯುತ್ತದೆ. ಬೋಟ್ಸ್ವಾನದಲ್ಲಿ ೩೦೬೩ ಸಿಂಹಗಳಿದ್ದು ಕೆನ್ಯಾದಲ್ಲಿ ೨೫೧೬ ಹಾಗೂ ಜಾಂಬಿಯಾದಲ್ಲಿ ೨೩೪೯ ಸಿಂಹಗಳು ಇವೆ. ೨೦೨೫ರ ಇಸವಿಯಲ್ಲಿ ನಡೆಸಿದ ೧೬ನೆಯ ಏಶಿಯಾಟಿಕ್ ಸಿಂಹ ಸಮೀಕ್ಷೆಯಂತೆ ಭಾರತದಲ್ಲಿ ೮೯೧ ಸಿಹಗಳಿದ್ದು ಗಂಡು ಸಿಂಹವು ೧೯೬ ಹಾಗೂ ಹೆಣ್ಣು ಸಿಂಹವು ೩೩೦ ಮತ್ತು ಸಿಂಹದ ಮರಿಗಳು ೩೬೫ ಇವೆಯೆಂದು ಲೆಕ್ಕ ಹಾಕಲಾಗಿದೆ. ಭಾರತದ ಗುಜರಾತಿನ ಗಿರ್ ರಾಷ್ಟಿçÃಯ ವನ್ಯಧಾಮದಲ್ಲಿ ಮಾತ್ರ ಸಿಂಹಗಳನ್ನು ಕಾಣಬಹುದಾಗಿದೆ.
ಗಂಡು ಸಿಂಹಗಳು ೧.೫ ಮೀಟರ್ನಿಂದ ೨.೫ ಮೀಟರ್ವರೆಗೂ ಉದ್ದವಿದ್ದು ಸುಮಾರು ೧೫೦ ರಿಂದ ೨೫೦ ಕೆ.ಜಿ. ತೂಕವನ್ನು ಹೊಂದಿರುತ್ತವೆ. ಹೆಣ್ಣು ಸಿಂಹಗಳು ಗಾತ್ರದಲ್ಲಿಯೂ ತೂಕದಲ್ಲಿಯೂ ಗಂಡು ಸಿಂಹಗಳಿಗಿAತ ಕಡಿಮೆ ಇರುತ್ತವೆ. ಗಂಡು ಸಿಂಹಗಳಿಗೆ ಮಾತ್ರ ಉದ್ದವಾದ ಕೂದಲುಗಳಿದ್ದು ನೋಡಲು ರುದ್ರರಮಣೀಯವನ್ನಾಗಿ ಮಾಡುತ್ತವೆ. ಗಂಡು ಸಿಂಹಗಳು ಹತ್ತರಿಂದ ಹದಿನಾಲ್ಕು ವರ್ಷಗಳು ಮಾತ್ರ ಬದುಕಿದರೆ ಹೆಣ್ಣು ಸಿಂಹಗಳು ಹದಿನೈದರಿಂದ ಹದಿನಾರು ವರ್ಷಗಳು ಬದುಕುತ್ತವೆ. ಸಿಂಹಗಳನ್ನು ಹಿಡಿದು ಮೃಗಾಲಯಗಳಲ್ಲಿ ರಕ್ಷಣೆೆಯನ್ನು ನೀಡಿದರೆ ಅವು ೨೦ ವರ್ಷದವರೆಗೂ ಬದುಕುತ್ತವೆ. ಅರ್ಜುನ ಎನ್ನುವ ಸಿಂಹವು ೨೮ ವರ್ಷಗಳಷ್ಟು ಕಾಲ ಮೃಗಾಲಯದಲ್ಲಿ ಬದುಕಿ ದಾಖಲೆಯನ್ನು ನಿರ್ಮಿಸಿದೆ.
ಭಾರತದ ಹಿಂದೂ ಧರ್ಮಗಳಲ್ಲಿ ದುರ್ಗಾ ದೇವಿಯು ಸಿಂಹವನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿರುವಳು. ಇದು ದುರ್ಗಾ ದೇವಿಯ ಶಕ್ತಿ ಮತ್ತು ಧೈರ್ಯದ ದ್ಯೋತಕವಾಗಿದೆ. ಹಿರಣ್ಯಕಷಿಪುವೆಂಬ ರಾಜನು ತನ್ನ ಮಗ ಪ್ರಹ್ಲಾದನೊಂದಿಗೆ “ದೇವರು ಈ ಕಂಬದಲ್ಲಿ ಇರುವನೇ” ಎಂದು ಕೇಳಿ ಆ ಕಂಬವನ್ನು ತನ್ನ ಗದೆಯಿಂದ ಪ್ರಹಾರ ಮಾಡಿದಾಗ ದೇವರು ನರಸಿಂಹನ ರೂಪವನ್ನು ತಾಳಿ ಕಂಬವನ್ನೊಡೆದು ಬಂದು ಹಿರಣ್ಯಕಷಿಪುವನ್ನು ತನ್ನ ತೊಡೆಯಲ್ಲಿ ಮಲಗಿಸಿಕೊಂಡು ಸಿಗಿದು ಹಾಕಿದ ಕಥೆಯನ್ನು ಹಲವು ಚಲನಚಿತ್ರಗಳಲ್ಲಿಯೂ ಅಳವಡಿಸಲಾಗಿದೆ. ದಕ್ಷಿಣ ಭಾರತದ ಹಲವು ದೇವಾಲಯಗಳಲ್ಲಿ ಸಿಂಹದ ಆಕೃತಿಯ ಕೆತ್ತನೆಗಳನ್ನು ಕಾಣಬಹುದಾಗಿದೆ. ಕೊಡಗಿನ ಓಂಕಾರೇಶ್ವರ ದೇವಸ್ಥಾನದಲ್ಲಿಯೂ ಸಿಂಹದ ಕೆತ್ತನೆಯನ್ನು ಗುರುತಿಸಬಹುದು. ಮನುಷ್ಯನ ಹುಟ್ಟನ್ನು ಆಧರಿಸಿ ಆತನ ಕುಂಡಲಿಯನ್ನು ತಯಾರಿಸಿದ್ದು ಅದರಲ್ಲಿ ಸಿಂಹರಾಶಿ ಎನ್ನುವುದು ಪ್ರಸಿದ್ಧವಾಗಿದೆ. ಜ್ಯೋತಿಷ್ಯಶಾಸ್ತçದ ಪ್ರಕಾರ ಸಿಂಹ ರಾಶಿಯಲ್ಲಿ ಜನಿಸಿದವರು ಶಿವ ಮತ್ತು ವಿಷ್ಣುವನ್ನು ಪೂಜಿಸಲು ಅರ್ಹರಾಗಿರುವರಂತೆ. ಚಿತ್ರನಟ ವಿಷ್ಣುವರ್ಧನನಿಗೆ ಸಾಹಸಸಿಂಹ ಎನ್ನುವ ಬಿರುದನ್ನು ಚಿತ್ರ ಪ್ರೇಮಿಗಳು ನೀಡಿ ಗೌರವಿಸಿರುವರು. ಒಂದು ಘಟನೆಯನ್ನು ವಿವರವಾಗಿ ವಿಮರ್ಶಿಸುವುದನ್ನು ಸಿಂಹಾವಲೋಕನ ಎಂದೂ ಕರೆಯುವರು. ರಾಜರು ಕೂರುವ ಆಸನಕ್ಕೆ ಸಿಂಹಾಸನ ಎಂದೂ ಹೆಸರಿದೆ. ಶುನಕವನ್ನು ಸಿಂಹಾಸನದ ಮೇಲೆ ಕೂರಿಸಿದಂತೆ ಆಯಿತು ಎಂಬ ಗಾದೆಯಲ್ಲಿ ಅಯೋಗ್ಯರು ಗೌರವಯುತ ಸ್ಥಾನವನ್ನು ಹೊಂದಬಾರದು ಎನ್ನುವ ಭಾವವಿದೆ. ಈಸೋಪನ ನೀತಿ ಕಥೆಗಳಲ್ಲಿಯೂ ಸಿಂಹವನ್ನು ಉದಾಹರಣೆಯಾಗಿ ಬಳಸಲಾಗಿದೆ. ಸಿಂಹದ ಹಾದಿಯಲ್ಲಿ ಪಾದ ಚಿಹ್ನೆಗಳು ದೊಡ್ಡದಾಗಿರುತ್ತವೆ ಎಂಬ ಗಾದೆಯಲ್ಲಿ ಮಹತ್ವದ ವ್ಯಕ್ತಿಗಳ ನಡೆಯನ್ನು ಗೌರವಿಸಲಾಗಿದೆ. ದೊಡ್ಡದಾಗಿ ಮಾತನಾಡುವವರ ನುಡಿಗಳನ್ನು ಸಿಂಹಗರ್ಜನೆ ಎನ್ನುತ್ತಾರೆ. ಸಿಂಹದ ಗರ್ಜನೆಯು ಇಪ್ಪತ್ತೆöÊದು ಕಿಲೋಮೀಟರ್ ದೂರದವರೆಗೂ ಕೇಳಿಸುವುದಂತೆ. ಛಂದೋಬದ್ಧ ರಚನಗಳಲ್ಲಿ ಸಿಂಹಪ್ರಾಸ ಎನ್ನುವ ಆದಿಪ್ರಾಸವನ್ನು ಬಳಸಲಾಗುತ್ತದೆ. ಸಿಂಹಕ್ಕೆ ಕೇಸರಿಯೆಂದೂ ಶಾರ್ದೂಲವೆಂದೂ ಕರೆಯುವರು. ಶಾರ್ದೂಲ ವಿಕ್ರೀಡಿತವೆಂಬ ಅಕ್ಷರ ಗಣವು ಬಹಳ ಪ್ರಸಿದ್ಧವಾಗಿದೆ.
ಹೀಗೆ ಮಾನವನ ಬದುಕಿನಲ್ಲಿ ಸಿಂಹದ ಶಕ್ತಿ, ನಡೆನುಡಿಗಳು, ಸಾಹಸಗಳು ಹಾಸುಹೊಕ್ಕಾಗಿ ಬಂದಿವೆ. ಇಂದು, ವಿಶ್ವ ಸಿಂಹದ ದಿನದಂದು ಸಿಂಹಗಳನ್ನು, ಅದರ ಸಾಹಸವನ್ನು ನೆನೆಯುವುದರ ಮೂಲಕ ಅವುಗಳಿಗೆ ನಾವು ಗೌರವವನ್ನು ತೋರಬಹುದಾಗಿದೆ.
- ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು.
ಮೊ. ೯೧೪೧೩ ೯೫೪೨೬