ದಿನಾಂಕ ೦೨-೦೮-೨೦೨೬ನೇ ಭಾನುವಾರ

ದಿ. ಕುಲ್ಲಚಂಡ ಪೆಮ್ಮಯ್ಯ (ಮುತ್ತು) ಅವರ ಧರ್ಮಪತ್ನಿ ಕಾಳವ್ವ ನವರು ದೈವಾಧೀನರಾದ ಸಂದರ್ಭ ಹಾಗೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾಂತ್ವನ ಹೇಳಿ ಸಹಕರಿಸಿದ ಊರಿನವರಿಗೂ, ನೆರೆಕರೆಯವರಿಗೂ, ಬಂಧುಮಿತ್ರರಿಗೂ, ಕುಟುಂಬಸ್ಥರಿಗೂ ಹಾಗೂ ಎಲ್ಲಾ ಹಿತೈಷಿಗಳಿಗೂ ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ.

ಮೃತರ ತಿಥಿ ಕರ್ಮಾಂತರವನ್ನು ದಿನಾಂಕ ೧೨.೦೮.೨೦೨೬ನೇ ಬುಧವಾರ ಹಗಲು ೧೧ ಗಂಟೆಗೆ ಅರಪಟ್ಟು ಗ್ರಾಮದ ಕುಲ್ಲಚಂಡ ಐನ್ ಮನೆಯಲ್ಲಿ ನಡೆಸಲು ನಿಶ್ಚಯಿಸಿರುವುದರಿಂದ, ಆಹ್ವಾನ ಪತ್ರಿಕೆ ತಲುಪದವರು ಇದನ್ನೇ ವೈಯಕ್ತಿಕ ಆಹ್ವಾನವೆಂದು ಪರಿಗಣಿಸಿ, ಆಗಮಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.

ದುಃಖತಪ್ತ ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು

ಹಾಗೂ ಕುಟುಂಬಸ್ಥರು.

ಅರಪಟ್ಟು ಗ್ರಾಮ ಮತ್ತು ಅಂಚೆ, ಮೊ: ೯೪೮೨೯೫೯೩೩೮