ಪೊನ್ನಂಪೇಟೆ, ಆ. ೮: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪೊನ್ನಂಪೇಟೆ ತಾಲೂಕು ಘಟಕದ ವಾರ್ಷಿಕ ಮಹಾಸಭೆ ಗೋಣಿಕೊಪ್ಪಲಿನಲ್ಲಿರುವ ಸಂಘದ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಪೊನ್ನಂಪೇಟೆ ತಾಲೂಕು ಘಟಕದ ಅಧ್ಯಕ್ಷರಾದ ಮುಕ್ಕಾಟಿರ ನಿರನ್ ತಿಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಸಂಘದ ಬೆಳವಣಿಗೆ ಮತ್ತು ಗುತ್ತಿಗೆದಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಇದಕ್ಕೂ ಮೊದಲು ಸಂಘದ ವತಿಯಿಂದ ಆಷಾಢ ಮಾಸದ ಪ್ರಯುಕ್ತ ವಿಶೇಷ ಚಾಮುಂಡೇಶ್ವರಿ ಪೂಜೆಯನ್ನು ಆಯೋಜಿಸಲಾಗಿತ್ತು.

ಪೂಜಾ ಕಾರ್ಯಕ್ರಮದಲ್ಲಿ ಸೆಸ್ಕ್ ಕೊಡಗು ಕಾರ್ಯಪಾಲಕ ಅಭಿಯಂತರರಾದ ಹೇಮಚಂದ್ರ, ಗೋಣಿಕೊಪ್ಪಲು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸತೀಶ್, ಕೊಡಗು-ಹಾಸನ ವೃತ್ತದ ವಿದ್ಯುತ್ ಪರಿವೀಕ್ಷಕರಾದ ಅಮಿತ್ ಕಶ್ಯಪ್, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ವಸಂತ್ ರೈ, ಕಾರ್ಯದರ್ಶಿ ರಾಜ, ಮಾಜಿ ಅಧ್ಯಕ್ಷರಾದ ಪೂಣಚ್ಚ, ರಾಜ್ಯ ಸಮಿತಿ ಸದಸ್ಯರಾದ ಬಿ.ಎಂ. ಗಣೇಶ್, ಪೊನ್ನಂಪೇಟೆ ತಾಲೂಕು ಘಟಕದ ಅಧ್ಯಕ್ಷರಾದ ಮುಕ್ಕಾಟಿರ ನಿರನ್ ತಿಮ್ಮಯ್ಯ, ಕಾರ್ಯದರ್ಶಿ ಬಿ.ಎನ್. ಪ್ರಕಾಶ್, ಕೋಶಾಧಿಕಾರಿ ಟಿ.ವಿ. ಆನಂದ, ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷರಾದ ಭರತ್ ಕುಮಾರ್, ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷರಾದ ರವಿ ಅಪ್ಪು ಕುಟ್ಟನ್, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷರಾದ ಸದಾಶಿವ ಸೇರಿದಂತೆ ಗೋಣಿಕೊಪ್ಪಲು ಉಪ ವಿಭಾಗದ ವಿವಿಧ ಪ್ರದೇಶದ ಕಿರಿಯ ಅಭಿಯಂತರು, ಹಿರಿಯ ಗುತ್ತಿಗೆದಾರರು, ವಿವಿಧ ತಾಲೂಕು ಘಟಕದ ಪದಾಧಿಕಾರಿಗಳು, ಪೊನ್ನಂಪೇಟೆ ತಾಲೂಕು ಘಟಕದ ಸದಸ್ಯರು ಉಪಸ್ಥಿತರಿದ್ದರು.