ಮಡಿಕೇರಿ, ಆ. ೮: ಶ್ರೀಮಂಗಲ ನಿವಾಸಿ ಪಣಿ ಎರವರ ಕರಿಯ ಅವರ ಪತ್ನಿ ಮಂಜುಳ ಹಾಗೂ ಪುತ್ರಿ ಕಾವ್ಯ ನಾಪತ್ತೆಯಾಗಿರುವುದಾಗಿ ಶ್ರೀಮಂಗಲ ಠಾಣೆಯಲ್ಲಿ ದೂರು ದಾಖಲಾಗಿದೆ. ಜುಲೈ ೪ ರಂದು ಕರಿಯ ಅವರು ತಮ್ಮ ಪತ್ನಿ ಮಂಜುಳ ಹಾಗೂ ಪುತ್ರಿ ಕಾವ್ಯ ಅವರೊಂದಿಗೆ ಶ್ರೀಮಂಗಲದಲ್ಲಿರುವ ತಮ್ಮ ತಂದೆಯ ಲೈನ್‌ಮನೆಗೆ ತೆರಳಿದ್ದಾರೆ. ಜುಲೈ ೫ ರಂದು ಕರಿಯ ಹಾಗೂ ಅವರ ತಂದೆ, ಮನೆಯಿಂದ ಹೊರಹೋಗಿದ್ದು, ವಾಪಸ್ಸು ಮನೆಗೆ ಹಿಂತಿರುಗುವಾಗ ಮಂಜುಳ ಹಾಗೂ ಕಾವ್ಯ ಮನೆ ಬಿಒಟ್ಟು ತೆರಳಿದ್ದಾರೆ. ಇದುವರೆಗೂ ಅವರುಗಳು ಪತ್ತೆಯಾಗಿಲ್ಲ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಾಪತ್ತೆಯಾದವರ ಬಗ್ಗೆ ಮಾಹಿತಿ ಇದ್ದಲ್ಲಿ ಶ್ರೀಮಂಗಲ ಠಾಣೆ, ದೂ: ೦೮೨೭೪-೨೪೬೨೪೬ ಅನ್ನು ಸಂಪರ್ಕಿಸುವAತೆ ಕೋರಿದೆ.