ಕೂಡಿಗೆ, ಆ, ೮: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾರಾಟ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಜೆ. ಪೂರ್ಣಿಮಾ ಅವರಿಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ವತಿಯಿಂದ ಸನ್ಮಾನಿಸಲಾಯಿತು.
ಗೋಣಿಕೊಪ್ಪ ಕೃಷಿ ವಿಶ್ವವಿದ್ಯಾಲಯದ ‘ಡಿಪ್ಲೊಮಾ ಇನ್ ಅಗ್ರಿಕಲ್ಚರಲ್ ಎಕ್ಸೆ÷್ಟನ್ಶನ್ ಸರ್ವೀಸಸ್ ಫಾರ್ ಇನ್‌ಪುಟ್ ಡೀಲರ್ಸ್’ ತರಬೇತಿಯಲ್ಲಿ ತೃತೀಯ ರಾಂಕ್ಯ್ ಪಡೆದ ಹಿನ್ನೆಲೆ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್, ಉಪಾಧ್ಯಕ್ಷ ವಿ. ಬಸಪ್ಪ, ನಿರ್ದೇಶಕರಾದ ಕೆ.ಟಿ ಅರುಣ್ ಕುಮಾರ್, ಕೆ.ಪಿ ರಾಜು ಎಸ್.ಎಸ್ ಕೃಷ, ರಾಮಚಂದ್ರ, ರಮೇಶ್ ನಾಗರಾಜು, ಎಸ್.ಆರ್. ಅರುಣ್ ರಾವ್, ಜಯಶ್ರೀ, ಕೃಷ್ಣೇಗೌಡ, ಕುಮಾರ್, ಪಲ್ಲವಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರ್ಷ, ಸಂಘದ ಮೇಲ್ವಿಚಾರಕ, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.