ವೀರಾಜಪೇಟೆ, ಆ. ೮: ಕೊಡವಾಮೆಯ ಹಿರಿಮೆಗೆ ಮಹಿಳೆಯರ ಪಾತ್ರ ಬಹುಮುಖ್ಯ. ಉಡುಗೆ-ತೊಡುಗೆಯ ಜೊತೆಗೆ ಮನೆಯಲ್ಲಿ ಕೊಡವ ಭಾಷೆ, ಸಂಸ್ಕೃತಿಯನ್ನು ಉತ್ತಮ ಸಂಸ್ಕಾರದೊAದಿಗೆ ಬೆಳೆಸುವ ಮಹತ್ತರವಾದ ಜವಾಬ್ದಾರಿ ಮಹಿಳೆಯರದ್ದಾಗಬೇಕು. ಮನೆಯಲ್ಲಿ ಒಳ್ಳೆಯ ವಿಚಾರ, ಒಳ್ಳೆಯ ವಾತಾವರಣವನ್ನು ಕಾಯ್ದುಕೊಳ್ಳುವುದು ಸ್ತಿçÃಯರ ಕೈಯಲ್ಲಿದೆ. ಅಂತಹ ಮನೆಯಲ್ಲಿ ಕೊಡವಾಮೆ, ಕೊಡವ ಸಂಸ್ಕೃತಿ ಹಾಗೂ ಕೊಡವ ಸಂಸ್ಕಾರವು ಬೆಳಗುತ್ತದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅಭಿಪ್ರಾಯಪಟ್ಟರು.
ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ತಿನಿಂದ ಆಯೋಜಿಸಿದ ‘ಕಕ್ಕಡ ನಮ್ಮೆ’ ಆಚರಣೆ ಹಾಗೂ ಅಕಾಡೆಮಿಯ ೧೬ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಜಂಟಿ ಕಾರ್ಯಕ್ರಮದಲ್ಲಿ ಪತ್ತಾಯ ಉದ್ಘಾಟಿಸಿ ಮಾತನಾಡಿದ ಇವರು, ಪ್ರಸ್ತುತ ಬಹುತೇಕ ಸಂಘ-ಸAಸ್ಥೆ, ಸಮಾಜಗಳ ವ್ಯಾಪ್ತಿಯಲ್ಲಿ ಮಹಿಳೆಯರಿಂದ ಸಂಘಟನೆಗೆ ಅವಕಾಶ ಮಾಡಿಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಇಂತಹ ಸಂಘಟನೆಗಳಲ್ಲಿ ಸಂಸ್ಕೃತಿ-ಸAಸ್ಕಾರಗಳ ಬಗ್ಗೆ ಹೆಚ್ಚಿನ ಆದ್ಯತೆಯ ಮೇರೆಗೆ ತಿಳುವಳಿಕೆ ನೀಡುವಂತಾಗಬೇಕು. ಪ್ರತಿಯೊಬ್ಬರ ಮನೆ-ಮನಗಳಲ್ಲಿ ಹಿಂದಿನ ಕಾಲದ ಕೊಡವಡ ಆತಿಥ್ಯದ ಗತವೈಭವ ಮರುಕಳುಹಿಸುವಂತಾಗಬೇಕು. ಕೊಡಗಿನ ನೆಲದಲ್ಲಿ ‘ಅತಿಥಿದೇವೋಭವ’ ಎಂಬುವುದು ಕೊಡವ ಸ್ತಿçÃಯರ ಸಂಸ್ಕಾರದಿAದ ಹುಟ್ಟಿ ಬಂದAತಹ ಸಂಸ್ಕೃತಿ ಎಂದು ಉಲ್ಲೇಖಿಸಿ ಮಹೇಶ್ ನಾಚಯ್ಯ, ಇಂತಹ ಸುಸಂಸ್ಕೃತಿ ಮರುಕಳುಹಿಸುವಲ್ಲಿ ಸ್ತಿçà ಸಂಘಟನೆಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ಪೊಮ್ಮಕ್ಕಡ ಪರಿಷತ್ತಿನ ಅಧ್ಯಕ್ಷೆ ಐತಿಚಂಡ ರಶ್ಮಿ ಮೇದಪ್ಪ ಪ್ರಾಸ್ತಾವಿಕ ನುಡಿಗಳಲ್ಲಿ, ಮನೆ ಮನೆಗಳಲ್ಲಿ ಜ್ಞಾನದ ಬೆಳಕು ಹರಿಯಬೇಕೆಂದರೆ ಓದುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು. ಪುಸ್ತಕ ಓದುವುದರಿಂದ ಜ್ಞಾನಾರ್ಜನೆಯೊಂದಿಗೆ ಸಾಹಿತ್ಯ ಚಿಂತನೆಗೆ ಕಾರಣವಾಗುತ್ತದೆ. ಕೊಡವ ಪುಸ್ತಕ ಪತ್ತಾಯದಂತಹ ಕಾರ್ಯಕ್ರಮದಿಂದ ನಾಡಿನಾದ್ಯಂತ ಓದುವ ಹವ್ಯಾಸ ವೃದ್ಧಿಸುವುದರ ಮೂಲಕ ಕೊಡವ ಸಾಹಿತ್ಯ ಬೆಳೆಯಲಿ ಎಂದು ಆಶಿಸಿದರು.
ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಮಾತನಾಡಿ, ಕೊಡವಾಮೆಯ ಮೂಲ ಕೃಷಿ. ಪ್ರಸ್ತುತ ಕೃಷಿಯಿಂದ ಧನ ಲಾಭದ ಬಗ್ಗೆ ಚಿಂತಿಸುವುದನ್ನು ಬಿಟ್ಟು ಸಂಸ್ಕೃತಿಯ ಜೀವಂತಿಕೆ ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ಕೃಷಿಗೆ ಆದ್ಯತೆ ನೀಡುವಂತಾಗಬೇಕು. ಕೊಡವ ಅಕಾಡೆಮಿಯಂತಹ ಘನತೆವೆತ್ತ ಸರ್ಕಾರಿ ಸಂಸ್ಥೆಯ ಮೂಲಕ ಗದ್ದೆ ಕೃಷಿಗೆ ರಾಜ್ಯ ಸರಕಾರ ಧನಸಹಾಯ ನೀಡಿ ಸಹಕರಿಸುವಂತೆ ಮನವಿ ಮಾಡಲು ಕೇಳಿಕೊಂಡರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಪುಸ್ತಕ ಪತ್ತಾಯ ದಾನಿಗಳಾದ ಕೊಡಗು ಎಜುಕೇಶನ್ ಮತ್ತು ಸೋಷಿಯಲ್ ಟ್ರಸ್ಟ್ನ ಮಾರ್ಚಂಡ ಗಣೇಶ್ ಪೊನ್ನಪ್ಪ ಹಾಗೂ ನಿವೃತ್ತ ಶಿಕ್ಷಕಿ, ಪೊಮ್ಮಕ್ಕಡ ಪರಿಷತ್ ನಿರ್ದೇಶಕಿ ಮಳವಂಡ ಪೂವಮ್ಮ ಮಾತನಾಡಿದರು. ಕಕ್ಕಡ ತಿಂಗಳ ಮಹತ್ವ ಹಾಗೂ ಇಂದಿನ ಸ್ಥಿತಿಗತಿಯ ಬಗ್ಗೆ ಪೊಮ್ಮಕ್ಕಡ ಪರಿಷತ್ ನಿರ್ದೇಶಕಿ ಮೂವೆರ ರೇಖ ಪ್ರಕಾಶ್ ಉತ್ತಮವಾಗಿ ವಿಚಾರ ಪ್ರಸ್ತುತಿ ಪಡಿಸಿದರು. ಈ ವೇಳೆ ಪುಸ್ತಕ ಪತ್ತಾಯದ ನೋಂದಣಿ ಪತ್ರವನ್ನು ಪೊಮ್ಮಕ್ಕಡ ಪರಿಷತ್ತಿಗೆ ಅಕಾಡೆಮಿ ವತಿಯಿಂದ ನೀಡಲಾಯಿತು.
ಅಜ್ಜಮಾಡ ಸಾವಿತ್ರಿ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಸುಳ್ಳಿಮಾಡ ಶಿಲ್ಪ ನಿರೂಪಿಸಿದರು. ಕರವಂಡ ಸರಸು ಪೆಮ್ಮಯ್ಯ ವಂದಿಸಿದರು. ಕಾರ್ಯಕ್ರದಲ್ಲಿ ಅಕಾಡೆಮಿ ಸದಸ್ಯರಾದ ನಾಪಂಡ ಸಿ. ಗಣೇಶ, ಪಾನಿಕುಟ್ಟಿರ ಕೆ. ಕುಟ್ಟಪ್ಪ, ಕಂಬೆಯAಡ ಡೀನ ಬೋಜಣ್ಣ, ನಾಯಂದಿರ ಆರ್. ಶಿವಾಜಿ, ಚೊಟ್ಟೆಯಂಡ ಸಂಜು ಕಾವೇರಪ್ಪ, ಪೊನ್ನಿರಯು. ಗಗನ್, ಕುಡಿಯರ ಕಾವೇರಪ್ಪ ಹಾಗೂ ಪೊಮ್ಮಕ್ಕಡ ಪರಿಷತ್ತಿನ ಹಿರಿಯರಾದ ಮಂಡೇಪAಡ ತ್ಯಾಗಿರವಿ, ಪಟ್ರಪಂಡ ಗೀತಾ, ತೀತಿರ ಊರ್ಮಿಳ ಸೋಮಯ್ಯ, ಕಡೇಮಡ ಕವಿತ ರಮೇಶ್, ಅಜ್ಜಮಡ ಶಾಂತಿ, ಬೊಳ್ಳಜಿರ ರಾಧ ಕರುಂಬಯ್ಯ, ಕೆಚ್ಚೆಟ್ಟಿರ ಕಾಮುಣಿ, ಚೇನಂಡ ಶಿಲ್ಪ, ಮೊಣ್ಣಂಡ ವಿನು ಇನ್ನಿತರರು ಪಾಲ್ಗೊಂಡಿದ್ದರು. ಕಕ್ಕಡ ನಮ್ಮೆಯ ಪ್ರಯುಕ್ತ ಪೊಮ್ಮಕ್ಕಡ ಪರಿಷತ್ತಿನ ಮಹಿಳೆಯರು ಸ್ವತಃ ತಯಾರಿಸಿ ತಂದಿದ್ದ ಕಕ್ಕಡ ಕೋಳಿ ಕರಿ, ಪಂದಿಕರಿ, ಕಕ್ಕಳೆ ಞಂಡ್‌ಕರಿ, ಮಾಂಗೆಕರಿ, ಚೆಕ್ಕೆ ಪಲ್ಯ, ಬೈಂಬಳೆ ಪಲ್ಯ, ತರಕಾರಿಕರಿ, ಕಡಂಬುಟ್ಟ್, ಪಾಪುಟ್ಟ್, ಬೊಳ್‌ತ ಕೂಳ್, ನೈಕೂಳ್, ಒಟ್ಟಿ, ತರಾವರಿ ಉಪ್ಪಿನ ಕಾಯಿ, ಮದ್ದ್ ಪಾಯಸ, ಮದ್ದ್ ಪುಟ್ಟ್ ಸೇರಿದಂತೆ ಇನ್ನೂ ಹಲವು ವಿಧದ ಖಾದ್ಯಗಳು ಮಧ್ಯಾಹ್ನದ ಊಟದ ವಿಶೇಷ ತಿನಿಸುಗಳಾಗಿದ್ದವು.