ಕೂಡಿಗೆ, ಆ. ೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಹುಲುಗುಂದ ಗ್ರಾಮದಲ್ಲಿ ನಿರಂತರವಾಗಿ ಮಳೆ ಸುರಿದಿರುವ ಕಾರಣ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದೆ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್ ನಾಯಕ್, ಅಭಿವೃದ್ಧಿ ಅಧಿಕಾರಿ ಹೇಮಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಭಾಸ್ಕರ್ ನಾಯಕ್ ಶಾಲೆಯಲ್ಲಿ ಸುಮಾರು ೭೫ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಶಾಲೆಯ ಮೇಲ್ಛಾವಣಿ ಕುಸಿತಗೊಂಡಿದೆ; ಶಾಲೆಯಲ್ಲಿ ಮಕ್ಕಳು ಇದ್ದಂತಹ ಸಂದರ್ಭದಲ್ಲಿಯೇ ಕುಸಿತಗೊಂಡಿದ್ದು ದೇವರ ಕೃಪೆಯಿಂದ ಯಾರಿಗೂ ಏನು ಆಗಲಿಲ್ಲ. ಜಿಲ್ಲೆಯಲ್ಲಿ ಹಾರಂಗಿ ಸರ್ಕಾರಿ ಶಾಲೆ ಮಾತ್ರ ಇನ್ನೂ ಕೂಡ ಶೀಟಿನಿಂದ ಕೂಡಿದ ಮೇಲ್ಛಾವಣಿ ಆಗಿರುತ್ತದೆ. ಆದಷ್ಟು ಬೇಗ ಸಂಬAಧಪಟ್ಟ ಇಲಾಖೆಯವರು ಈ ಕುರಿತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.