ಸೋಮವಾರಪೇಟೆ, ಆ. ೭: ನಗರದ ಆನೆಕೆರೆ ಬಳಿಯ ಅರಳಿಮರ ಹಾಗೂ ನಾಗದೇವರುಗಳ ಬನದಲ್ಲಿ ವಿಶೇಷ ಹೋಮ ಹಾಗೂ ಆಶ್ಲೇಷ ಬಲಿ ಪೂಜೆ ನಡೆಯಿತು. ನೂತನವಾಗಿ ಪ್ರತಿಷ್ಠಾಪಿಸಲ್ಪಟ್ಟಿದ್ದ ನಾಗರಾಜ ಹಾಗೂ ನಾಗಕನ್ಯೆಯರಿಗೆ ವಿಶೇಷ ಪೂಜೆಯೊಂದಿಗೆ ಸುದರ್ಶನ ಹೋಮ, ಅಶ್ಲೇಷ ಬಲಿ ಹಾಗೂ ಸರ್ಪಶಾಂತಿ ಹೋಮ ನಡೆಯಿತು.

ಪೂಜಾ ವಿಧಿವಿಧಾನಗಳನ್ನು ವೇದವಿದ್ವಾನ್ ಜಗದೀಶ ಉಡುಪರ ಪೌರೋಹಿತ್ಯದಲ್ಲಿ ವೇದವ್ಯಾಸ ಭಟ್, ಹರಿಭಟ್, ವಾದಿರಾಜ್ ನಡೆಸಿಕೊಟ್ಟರು. ವರ್ತಕ ಕೆ.ಬಿ. ಲೋಕೇಶ್, ಶ್ಯಾಮ್ ಸುಂದರ್ ಸೇರಿದಂತೆ ಪ್ರಮುಖರು ಪೂಜಾ ಕಾರ್ಯದ ನೇತೃತ್ವ ವಹಿಸಿದ್ದರು. ಭಕ್ತಾದಿಗಳಿಗೆ ಉಪಾಹಾರ ವಿತರಿಸಲಾಯಿತು.