ಮಡಿಕೇರಿ, ಆ. ೭: ೨೦೨೬-೨೭ನೇ ಸಾಲಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈಗಾಗಲೇ ನೀಡಲಾದ ಪ್ರಕಟಣೆಯಲ್ಲಿ ಮುಸುಕಿನ ಜೋಳ(ಮಳೆಯಾಶ್ರಿತ) ಬೆಳೆಗೆ ವಿಮೆ ನೋಂದಾಯಿಸಿಕೊಳ್ಳಲು ಜುಲೈ ೩೧ ಕ್ಕೆ ಕಡೆದಿನವೆಂದು ನಿಗಧಿಪಡಿಸಲಾಗಿತ್ತು.
ಆದರೆ ವಿಭಾಗೀಯ ಮಟ್ಟದ ಬರ ಪರಿಶೀಲನಾ ಸಮಿತಿಯಲ್ಲಿ ಮುಸುಕಿನ ಜೋಳ(ಮಳೆಯಾಶ್ರಿತ) ವಿಮೆಗೆ ನೋಂದಾಯಿಸಿಕೊಳ್ಳಲು ಬೆಳೆ ಸಾಲ ಪಡೆದ ರೈತರಿಗೆ ಆಗಸ್ಟ್ ೧೦ ರವರೆಗೆ ನೋಂದಣಿಗೆ ಅವಕಾಶ ಮಾಡಲಾಗಿದ್ದು, ಈ ಅವಕಾಶವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ.
೨೦೨೬ನೇ ಸಾಲಿನ ಮುಂಗಾರು ಹಂಗಾಮಿನ ವಿಮಾ ಮೊತ್ತ ಮತ್ತು ರೈತರ ವಿಮಾ ಕಂತಿನ ವಿವರ:
ವಿಮೆಗೆ ಒಳಪಡಿಸಿದ ಬೆಳೆಗಳಾದ ಭತ್ತ(ನೀರಾವರಿ) ರೈತರ ಪಾಲಿನ ಶೇಕಡವಿಮಾ ಕಂತು ೨, ವಿಮಾ ಮೊತ್ತ ಪ್ರತಿ ಹೆಕ್ಟೇರ್‌ಗೆ ರೂ.೧,೦೮,೬೦೦, ಪ್ರತಿ ಎಕರೆಗೆ ೪೩,೯೫೦.೪೨, ರೈತರ ವಿಮಾ ಕಂತು(ರೂ.ಗಳಲ್ಲಿ) ಪ್ರತಿ ಹೆಕ್ಟೇರ್‌ಗೆ ೨೧೭೨, ಪ್ರತಿ ಎಕರೆಗೆ ೮೭೯.೦೧. ನೋಂದಾಯಿಸಿಕೊಳ್ಳಲು ಆಗಸ್ಟ್, ೧೪ ಕೊನೆಯ ದಿನವಾಗಿದೆ.
ಭತ್ತ (ಮಳೆಯಾಶ್ರಿತ) ರೈತರ ಪಾಲಿನ ಶೇಕಡ ವಿಮಾ ಕಂತು ೨, ವಿಮಾ ಮೊತ್ತ (ರೂ.ಗಳಲ್ಲಿ) ಪ್ರತಿ ಹೆಕ್ಟೇರ್‌ಗೆ ೭೫,೬೦೦, ಪ್ರತಿ ಎಕರೆಗೆ ೩೦,೫೯೫.೩೨, ರೈತರ ವಿಮಾ ಕಂತು(ರೂ.ಗಳಲ್ಲಿ) ಪ್ರತಿ ಹೆಕ್ಟೇರ್‌ಗೆ ೧,೫೧೨, ಪ್ರತಿ ಎಕರೆಗೆ ೬೧೧.೯೧.
ನೊಂದಾಯಿಸಿಕೊಳ್ಳಲು ಆಗಸ್ಟ್ ೧೪ ಕೊನೆಯ ದಿನವಾಗಿದೆ.
ಮುಸುಕಿನ ಜೋಳ(ಮಳೆಯಾಶ್ರಿತ) ರೈತರ ಪಾಲಿನ ಶೇಕಡ ವಿಮಾ ಕಂತು ೨, ವಿಮಾ ಮೊತ್ತ (ರೂ.ಗಳಲ್ಲಿ) ಪ್ರತಿ ಹೆಕ್ಟೇರ್‌ಗೆ ೬೭,೫೦೦, ಪ್ರತಿ ಎಕರೆಗೆ ೨೭,೩೧೭.೨೫, ರೈತರ ವಿಮಾ ಕಂತು(ರೂ.ಗಳಲ್ಲಿ) ಪ್ರತಿ ಹೆಕ್ಟೇರ್‌ಗೆ ೧,೩೫೦, ಪ್ರತಿ ಎಕರೆಗೆ ೫೪೬.೩೫. ನೊಂದಾಯಿಸಿಕೊಳ್ಳಲು ಆಗಸ್ಟ್ ೧೦ ಕೊನೆಯ ದಿನವಾಗಿದೆ.
ರೈತರು ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂರಕ್ಷಣೆ ತಂತ್ರಾAಶದಲ್ಲಿ ಪಡೆಯಬಹುದು. (hಣಣಠಿ://ತಿತಿತಿ. sಚಿmಡಿಚಿಞshಚಿಟಿe.ಞಚಿಡಿಟಿಚಿಣಚಿಞಚಿ.gov.iಟಿ/). ಹೆಚ್ಚಿನ ಮಾಹಿತಿಗೆ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದಾಗಿದೆ. ಕೊಡಗು ಜಿಲ್ಲೆಯ ಹೆಚ್ಚಿನ ರೈತರು ಈ ಯೋಜನೆಯಲ್ಲಿ ಭಾಗವಹಿಸಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರು ಕೋರಿದ್ದಾರೆ.