ಕಡಂಗ, ಆ. ೭: ಪುತ್ತೂರು ಮರ್ಕಜ್ ಮಹಿಳಾ ಕಾಲೇಜಿನಲ್ಲಿ ಕಾರ್ಗಿಲ್ ದಿನಾಚರಣೆಯ ಅಂಗವಾಗಿ ಕಡಂಗ ಗ್ರಾಮದವರಾದ ನಿವೃತ್ತ ಸೈನಿಕ ಎಂ.ಕೆ ಸಲಾಂ ಮತ್ತು ಅವರ ತಾಯಿ ರುಕಿಯ ಹಜ್ಜುಮ್ಮ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಲಾಂ ಅವರು, ವಿದ್ಯಾರ್ಥಿಗಳು ಕಲಿಕೆಯೊಂದಿಗೆ ದೇಶಭಕ್ತಿಯನ್ನು ಹೊಂದಬೇಕು. ಹಾಗೂ ದೇಶ ಸೇವೆ ಗಯ್ಯಲು ಸೇನಾಪಡೆಯಲ್ಲಿ ಸೇರಲು ಎಲ್ಲರೂ ಮುಂದೆ ಬರಬೇಕು ಎಂದರು. ಈ ಸಂದರ್ಭದಲ್ಲಿ ಇತರ ೩ ನಿವೃತ್ತ ಸೈನಿಕರನ್ನು ಕೂಡ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಪ್ರಮುಖರಾದ ರಶೀದ್ ಸಖಾಫಿ ಕಕ್ಕಿಂಜೆ, ಶಾಲೆಯ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.