ಸೋಮವಾರಪೇಟೆ, ಆ. ೭: ಪಶ್ಚಿಮ ಘಟ್ಟ ಪರಿಸರ ಸೂಕ್ಷö್ಮ ವಲಯ (ಇSಂ) ಘೋಷಣೆಗೆ ಸಂಬAಧಿಸಿದAತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಪ್ರಕಟಿಸಿರುವ ಹೊಸ ಕರಡು ಅಧಿಸೂಚನೆಯಲ್ಲಿ ಕೊಡಗಿನ ಬಹುತೇಕ ಗ್ರಾಮಗಳು ಪರಿಸರ ಸೂಕ್ಷ್ಮ ವಲಯದ ಪಟ್ಟಿಯ ವ್ಯಾಪ್ತಿಗೆ ಒಳಪಡುತ್ತಿದ್ದು, ಈ ಪಟ್ಟಿಗೆ ಸಂಬAಧಿಸಿದAತೆ ಸಾರ್ವಜನಿಕರು, ರೈತರು, ಗ್ರಾಮ ಪಂಚಾಯಿತಿಗಳು ಹಾಗೂ ವಿವಿಧ ಸಂಘ-ಸAಸ್ಥೆಗಳು ಸ್ವಯಂಪ್ರೇರಣೆಯಿAದ ಆಕ್ಷೇಪಣೆಗಳನ್ನು ಸಲ್ಲಿಸಬೇಕೆಂದು ತಾಲೂಕು ರೈತ ಹೋರಾಟ ಸಮಿತಿ ಹಾಗೂ ರೈತ ಸಂಘ ಕರೆ ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಅವರು, ಕಸ್ತೂರಿ ರಂಗನ್ ವರದಿಗೆ ಪೂರಕವಾಗಿ ಪರಿಸರ ಸೂಕ್ಷö್ಮ ವಲಯ ಘೋಷಣೆ ಸಂಬAಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಪರಿಸರ ಸಚಿವಾಲಯದ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. ಒಂದು ವೇಳೆ ಆಕ್ಷೇಪಣೆಗಳು ಸಲ್ಲಿಕೆಯಾಗದೇ ಹೋದಲ್ಲಿ ಕೊಡಗಿನ ಬಹುತೇಕ ಗ್ರಾಮಗಳು ಸಮಸ್ಯೆಗೆ ಸಿಲುಕಲಿವೆ ಎಂದರು.

ಒAದು ವೇಳೆ ಪರಿಸರ ಸೂಕ್ಷö್ಮ ವಲಯ ಘೋಷಣೆಯಾದರೆ ಈಗಾಗಲೇ ಇರುವ ಮೀಸಲು ಅರಣ್ಯ, ಸಂರಕ್ಷಿತ, ವನ್ಯಜೀವಿ ಧಾಮಗಳಿಂದ ೧ ಕಿ.ಮೀ. ‘ಏರ್ ಡಿಸ್ಟೆನ್ಸ್’ ನಲ್ಲಿ ಯಾವುದೇ ಚಟುವಟಿಕೆ ನಡೆಸಲು ಅವಕಾಶ ಲಭಿಸುವುದಿಲ್ಲ ಎಂಬ ಆತಂಕ ಸೃಷ್ಟಿಯಾಗಿದೆ. ಕೊಡಗು ಸಣ್ಣ ಜಿಲ್ಲೆಯಾದರೂ ಅರಣ್ಯ ಪ್ರದೇಶ ಹೆಚ್ಚಿದೆ. ಅರಣ್ಯಕ್ಕೆ ಒತ್ತಿಕೊಂಡAತೆ, ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ಮಂದಿ ಜೀವನ ಕಂಡುಕೊAಡಿದ್ದಾರೆ. ಪರಿಸರ ಸೂಕ್ಷö್ಮ ವಲಯ ಘೋಷಣೆಯಾದರೆ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ಜಿಲ್ಲೆಯಲ್ಲಿರುವ ೨೯೨ ಗ್ರಾಮಗಳಿಂದಲೂ ಸಂಬAಧಿಸಿದ ಸಚಿವಾಲಯಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ಗ್ರಾಮ ಸಮಿತಿ, ಯುವಕ ಸಂಘ, ರೈತ ಮುಖಂಡರು, ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಮುಂದೆ ಬರಬೇಕು ಎಂದು ಮನವಿ ಮಾಡಿದ ಚಕ್ರವರ್ತಿ ಸುರೇಶ್, ಈವರೆಗಿನ ಸರ್ಕಾರಗಳು, ಜನಪ್ರತಿನಿಧಿಗಳು ನಿರ್ಲಕ್ಷö್ಯ ವಹಿಸಿದ್ದರ ಪರಿಣಾಮ ಸಮಸ್ಯೆ ಗಂಭೀರತೆ ಪಡೆದುಕೊಳ್ಳುತ್ತಿದೆ. ಈಗಲಾದರೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಗ್ರಾಮ ಸಭೆಗಳನ್ನು ಕರೆಯಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.

ಕೂತಿ ಗ್ರಾಮದಲ್ಲಿ ಖಾಲಿಯಿದ್ದ ಜಾಗಕ್ಕೆ ಅರಣ್ಯ ಇಲಾಖೆಯವರು ಗಿಡಗಳನ್ನು ನೆಡಲು ಆಗಮಿಸಿದ ಸಂದರ್ಭ ಸ್ಥಳೀಯ ರೈತರು ತಡೆಯೊಡ್ಡಿದ್ದಾರೆ. ಸಿ ಮತ್ತು ಡಿ ಜಾಗಕ್ಕೆ ಸಂಬAಧಿಸಿದAತೆ ಸರ್ಕಾರ ರಚಿಸಿರುವ ಎಸ್‌ಐಟಿ ಸಮಿತಿ ವರದಿ ಸಲ್ಲಿಸಿ, ಸರ್ಕಾರ ನೂತನ ಆದೇಶ ಹೊರಡಿಸುವ ಮುನ್ನವೇ ಅರಣ್ಯ ಇಲಾಖೆ ರೈತರ ಜಮೀನಿಗೆ, ಖಾಲಿ ಜಾಗಕ್ಕೆ ನುಗ್ಗುತ್ತಿರುವುದು ಖಂಡನೀಯ ಎಂದರು.

ಗೋಷ್ಠಿಯಲ್ಲಿದ್ದ ತಾಲೂಕು ರೈತ ಸಂಘದ ಅಧ್ಯಕ್ಷ ಕೂತಿ ದಿನೇಶ್ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ಕೇರಳ ಸರ್ಕಾರ ತಿರಸ್ಕರಿಸಿದೆ. ಕರ್ನಾಟಕ ಸರ್ಕಾರವೂ ಸಹ ವರದಿಯನ್ನು ತಿರಸ್ಕರಿಸಬೇಕು. ಇದೀಗ ಜಿಲ್ಲೆಯ ೫೩ ಗ್ರಾಮಗಳನ್ನು ಮಾತ್ರ ಹೆಸರಿಸಲಾಗಿದೆ. ಏರ್ ಡಿಸ್ಟೆನ್ಸ್ ತೆಗೆದುಕೊಂಡರೆ ಇಡೀ ಕೊಡಗು ಪರಿಸರ ಸೂಕ್ಷö್ಮ ವಲಯವಾಗಲಿದೆ. ಸಿ ಮತ್ತು ಡಿ ಜಾಗದ ಸಮಸ್ಯೆಯಂತೆಯೇ ಸೂಕ್ಷö್ಮ ವಲಯ ಸಮಸ್ಯೆ ರೈತರನ್ನು ಬಾಧಿಸಲಿದೆ ಎಂದರು.

ರಾಜಕಾರಣಿಗಳು ಚುನಾವಣೆ ಸಂದರ್ಭ ರೈತರ ಮನೆ ಬಾಗಿಲಿಗೆ ಬರುವುದನ್ನು ಬಿಟ್ಟು, ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ರೈತರ ಪರವಾಗಿ ದನಿಯೆತ್ತಬೇಕು. ಗ್ರಾಮದಲ್ಲಿ ಜನರೇ ಇಲ್ಲವಾದರೆ ಮತ ಹಾಕಲು ಯಾರು ಬರುತ್ತಾರೆ? ಎಂದು ಪ್ರಶ್ನಿಸಿದ ದಿನೇಶ್, ಎಲ್ಲಾ ರಾಜಕೀಯ ಪಕ್ಷಗಳು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ರೈತ ಹೋರಾಟ ಸಮಿತಿ ಸದಸ್ಯರುಗಳಾದ ನಾಗರಾಜ್, ಮಣಿ ಕುಶಾಲಪ್ಪ ಇದ್ದರು.