ಮಡಿಕೇರಿ, ಆ. ೭: ನಾಲ್ನಾಡ್ ಕೊಡವ ಕೂಟದ ವತಿಯಿಂದ ಮಾಜಿ ಅಂತರರಾಷ್ಟಿçÃಯ ಬ್ಯಾಡ್ಮಿಂಟನ್ ಪಟು ಮಾಳೆಯಂಡ ಅರುಣ್ ಪೂವಯ್ಯ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪ್ರಮುಖರಾದ ಬಾಳೆಯಡ ಕಾಳಪ್ಪ ಅವರು ಪೂವಯ್ಯ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಬೆಂಗಳೂರಿನ ಕೊಡವ ಸಮಾಜದಲ್ಲಿ ನಡೆದ ಒತ್ತೋರ್ಮೆ ಕೂಟದಲ್ಲಿ ಅರುಣ್ ಪೂವಯ್ಯ ಅವರ ಸುದೀರ್ಘ ಬ್ಯಾಡ್ಮಿಂಟನ್ ವೃತ್ತಿಯಲ್ಲಿನ ಸೇವೆಯನ್ನು ಪರಿಗಣಿಸಿ ಅವರನ್ನು ಗೌರವಿಸಲಾಯಿತು. ಅರುಣ್ ಅವರು ಮೂಲತಃ ಕೊಡಗಿನ ನೆಲಜಿಯವರಾಗಿದ್ದು ಇದೀಗ ಮಂಗಳೂರಿನಲ್ಲಿ ನೆಲೆಸಿದ್ದಾರೆ.