ಮಡಿಕೇರಿ, ಆ. ೭: ಹಿಂದೂ ಜಾಗರಣ ವೇದಿಕೆ ವತಿಯಿಂದ ಸ್ವಾತಂತ್ರö್ಯ ದಿನದ ಅಮಗವಾಗಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ ನಡೆಯಿತು.

ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಬಳಿಯಿಂದ ಹೊರಟು ಮಂಗೇರಿರ ಮುತ್ತಣ್ಣ ವೃತ್ತ, ಜ.ತಿಮ್ಮಯ್ಯ ವೃತ್ತಕ್ಕಾಗಿ ಹಾದು ಮುಖ್ಯ ಬೀದಿಗಾಗಿ ಸ್ಕಾ÷್ವಡ್ರನ್ ಲೀಡರ್ ದೇವಯ್ಯ ವೃತ್ತ, ಇಂದಿರಾಗಾAಧಿ ವೃತ್ತಕ್ಕಾಗಿ ಕಾಲೇಜು ರಸ್ತೆಯಲ್ಲಿ ಸಾಗಿ ಕಾವೇರಿ ಹಾಲ್‌ನಲ್ಲಿ ಸಮಾಪ್ತಿಗೊಂಡಿತು.

ಸುರಿಯುವ ಮಳೆಯ ನಡುವೆಯೂ ಮಹಿಳೆಯರಾದಿಯಾಗಿ ನೂರಾರು ಸಂಖ್ಯೆಯಲ್ಲಿ ದೇಶಭಕ್ತರು ಪಾಲ್ಗೊಂಡಿದ್ದರು.