ಸೋಮವಾರಪೇಟೆ, ಆ. ೬: ತಾಲೂಕಿನ ಐಗೂರು ರಸ್ತೆಯಲ್ಲಿ ಪಿಕ್ಅಪ್ ವಾಹನದಲ್ಲಿ ಜನರನ್ನು ಅಪಾಯಕಾರಿಯಾಗಿ ಸಾಗಾಟಗೊಳಿಸುತ್ತಿದ್ದ ಚಾಲಕನಿಗೆ ಪೊಲೀಸರು ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಸರಕು ಸಾಗಾಣಿಕೆಗೆ ಬಳಕೆ ಮಾಡಬೇಕಿದ್ದ ಪಿಕ್ಅಪ್ ವಾಹನದಲ್ಲಿ ಕಾರ್ಮಿಕರನ್ನು ಅಪಾಯಕಾರಿಯಾಗಿ ಸಾಗಾಟಗೊಳಿಸುತ್ತಿದ್ದ ಚಾಲಕನಿಗೆ ರೂ. ೩ ಸಾವಿರ ದಂಡ ವಿಧಿಸಲಾಗಿದೆ.