ನಾಪೋಕ್ಲು, ಆ. ೬: ಇತ್ತೀಚೆಗೆ ಸುರಿದ ತೀವ್ರ ಮಳೆ ಗಾಳಿಯಿಂದ, ಬಾವಿ ಕುಸಿದು ನಷ್ಟ ಸಂಭವಿಸಿದೆ.

ಪಾರಾಣೆ ಕೋಣಂಜಗೇರಿ ಪಂಚಾಯಿತಿಯ ಬಲಮುರಿ ಗ್ರಾಮ ನಿವಾಸಿ ಮೇಡತನ ಎನ್. ಶಾಂತಿ ಅವರಿಗೆ ಸೇರಿದ ಬಾವಿ ಸಿಮೆಂಟ್ ರಿಂಗ್‌ಗಳು ಕುಸಿದುದ್ದಲ್ಲದೆ ಇದರ ಅಡಿಯಲ್ಲಿ ನೀರು ಸರಬರಾಜು ಮಾಡಲು ಅಳವಡಿಸಿದ ಪಂಪು ಕೂಡ ಮಣ್ಣಿನ ಅಡಿಯಲ್ಲಿ ಸಿಲುಕಿ ನಷ್ಟ ಸಂಭವಿಸಿದೆ. ಅಂತರ್ಜಲ ಮಟ್ಟದಲ್ಲಿ ಏರು ಪೇರಾದಾಗ ಬಾವಿಯು ಸಂಪೂರ್ಣವಾಗಿ ಕುಸಿಯುವ ಹಂತಕ್ಕೆ ತಲುಪಿದ್ದು ಇದೀಗ ದಿನಬಳಕೆಗೆ ಮಳೆ ನೀರನ್ನೇ ಆಶ್ರಯಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.