ಸುಂಟಿಕೊಪ್ಪ, ಆ. ೫: ರಾಷ್ಟಿçÃಯ ಹೆದ್ದಾರಿ ೭ನೇ ಹೊಸಕೋಟೆಯಲ್ಲಿ ಎರಡು ಕಾರು ಮತ್ತು ರಾಜ್ಯ ಸಾರಿಗೆ ಸಂಸ್ಥೆ ಬಸ್ ನಡುವೆ ಸರಣಿ ಅಪಘಾತಗಳಾಗಿದ್ದು, ಅದೃಷ್ಟವಶಾತ್ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಿಲ್ಲ.

ಕುಶಾಲನಗರದಿಂದ ಸುಂಟಿಕೊಪ್ಪ ಕಡೆಗೆ ಮಾತಾಜಿ ಜ್ಯೂವೆಲ್ಲರ್ಸ್ ಮಾಲೀಕ ರಮೇಶ್ ಶೇಟ್ ರಿಟ್ಜ್(ಕೆಎ೫೦ಎಂ೬೪೩೪) ಕಾರಿನಲ್ಲಿ ಬರುತ್ತಿದ್ದವರು ಕಲ್ಲುಕೋರೆ ರಸ್ತೆಯತ್ತ ತಿರುಗಿಸಿದಾಗ ಹಿಂಬದಿಯಲ್ಲಿ ಬರುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆ ಬಸ್ ಕಾರಿಗೆ ಡಿಕ್ಕಿಯಾಗಿದೆ.

ಇದೇ ಸಂದರ್ಭ ಸುಂಟಿಕೊಪ್ಪದಿAದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಬಲೆನೋ (ಕೆಎ೧೨ಎಂಸಿ೦೯೦೮) ಕಾರು ರಮೇಶ್ ಅವರ ರಿಟ್ಜ್ ಕಾರಿಗೆ ಡಿಕ್ಕಿಯಾಗಿದೆ. ಇದರಿಂದ ರಿಟ್ಜ್ ಕಾರು ಜಖಂಗೊAಡಿದ್ದು ಅದೃಷ್ಟವಶಾತ್ ಈ ಮೂರು ವಾಹನಗಳ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.