ಮಡಿಕೇರಿ, ಆ. ೪: ಮಡಿಕೇರಿ ಟ್ಯಾಕ್ಸಿ ಕಾರು ಮಾಲೀಕರು ಮತ್ತು ಚಾಲಕರ ಸಂಘದ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ವೀರೇಂದ್ರ (ವೀರು) ಅವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ವೀರೇಂದ್ರ ಅವರು ನೇಮಕಗೊಂಡರು.

ಸAಘದ ಉಪಾಧ್ಯಕ್ಷರಾಗಿ ತೆಕ್ಕಡ ಮಧು ಮಂದಣ್ಣ, ಗೌರವ ಅಧ್ಯಕ್ಷರಾಗಿ ತೆಕ್ಕಡ ಸಂತು ಕಾರ್ಯಪ್ಪ, ಕಾರ್ಯದರ್ಶಿಯಾಗಿ ತೆಕ್ಕಡ ಗಣೇಶ್ ಪೆಮ್ಮಯ್ಯ, ಖಜಾಂಚಿಯಾಗಿ ನಾಯಕಂಡ ಕುಟ್ಟಪ್ಪ ಹಾಗೂ ಸಲಹೆಗಾರರಾಗಿ ಸುರೇಶ್ ಅವರು ನೇಮಕಗೊಂಡಿದ್ದಾರೆ ಸಮಿತಿ ಸದಸ್ಯರಾಗಿ ಸ್ವಾಮಿ, ಗಣೇಶ್, ಅಂಟೋ ಪಿ. ಜೋಶ್, ನಿಯಾಜ್ ಆಯ್ಕೆಯಾಗಿದ್ದಾರೆ.