ಶ್ರೀಮಂಗಲ, ಆ. ೪: ನಮಗೆ ಪರಿಸರ ಸಂರಕ್ಷಣೆಯ ದೇವರಕಾಡು, ನಮ್ಮ ಉಡುಪು, ಭಾಷೆ ಎಲ್ಲವನ್ನು ಹಿರಿಯರು ನೀಡಿದ್ದು ಇದನ್ನು ನಾವು ಉಳಿಸಿಕೊಂಡು ಬಂದಿದ್ದೇವೆ.ಆದರೆ ನಮ್ಮ ಜಾಗವನ್ನು ಕಳೆದುಕೊಳ್ಳುತ್ತಾ ಹೋಗುತ್ತಿದ್ದೇವೆ ಇಂತಹ ಸಮಾರಂಭದಲ್ಲಿ ನಮ್ಮ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಗಂಭೀರ ವಿಚಾರದ ಬಗ್ಗೆ ಯೋಚಿಸಬೇಕಾಗಿದೆ. ಜನಸಂಖ್ಯೆ ಕಡಿಮೆ ಇದ್ದರೂ ಜಾಗ ನಮ್ಮ ಕೈಯಲ್ಲಿತ್ತು. ಇಂದು ಇದನ್ನು ಕಳೆದುಕೊಳ್ಳುತ್ತಾ ಸಾಗುತ್ತಿದ್ದೇವೆ. ಜಾಗ ಮಾರಾಟ ನಿಲ್ಲಬೇಕು. ಅದು ನಿಲ್ಲುತ್ತದೆ ಎಂಬ ಭರವಸೆ ಇದೆ. ಮಲ್ಮಜಾಗವನ್ನು ಮರಳಿ ಪಡೆಯಲು ಸಂಘಟಕರಾಗಿ ಜನಾಂಗ ನಿಂತಿರುವುದು ಹೊಸ ಭರವಸೆಯನ್ನು ಮೂಡಿಸಿದೆ. ನಮ್ಮ ಜಾಗ ಉಳಿಸಿಕೊಳ್ಳದಿದ್ದರೆ ನಮ್ಮ ಉಡುಪಿಗೂ(ಕುಪ್ಯಚೇಲೆ)ಹಾಗೂ ಭಾಷೆಗೂ ಯಾವುದೇ ಬೆಲೆ ಇಲ್ಲ ಎಂದು ಕೊಡಗು ಮಾಡೆಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ನಿವೃತ್ತ ಡೀನ್ ಚೆಪ್ಪುಡಿರ ಜಿ.ಕುಶಾಲಪ್ಪ ಹೇಳಿದರು.

ಪೊನ್ನಂಪೇಟೆಯಲ್ಲಿ ಕೊಡವ ಹಿತ ರಕ್ಷಣಾ ಬಳಗ ಕ್‌ಗ್ಗಟ್‌ನಾಡು ಪೊನ್ನಂಪೇಟೆ ಆಯೋಜಿಸಿದ ಕಕ್ಕಡ ಪದ್ ನೆಟ್ಟ್ ಪ್ರಯುಕ್ತ ಪಂಜಿನ ಮೆರವಣಿಗೆ ನಂತರ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಭತ್ತದ ಕೃಷಿ ಕ್ಷೀಣಿಸುತ್ತಿದೆ. ಹಿಂದೆ ಮನೆಯ ತಾಯಂದಿರು ಮುಂದೆ ನಿಂತು ಭತ್ತದ ಕೃಷಿ ನಿರ್ವಹಿಸುತ್ತಿದ್ದರು. ಕಾರ್ಮಿಕರು ಅವರನ್ನು ಅವ್ವ ಎಂದು ಕರೆಯುತ್ತಿದ್ದರು. ಎಂದೂ ಯಜಮಾನಿ ಎಂದು ಕರೆಯುತ್ತಿರಲಿಲ್ಲ. ಮತ್ತೊಮ್ಮೆ ಜಿಲ್ಲೆಯ ತಾಯಂದಿರು ಅಕ್ಕ-ತಂಗಿಯAದಿರು ಮನಸು ಮಾಡಿ ಪಾಳು ಬಿಟ್ಟಿರುವ ಭತ್ತದ ಗದ್ದೆಗಳನ್ನು ಕೃಷಿಯಾಗಿ ರೂಪಿಸಲು ಮುಂದಾಗಬೇಕೆAದು ಕರೆ ನೀಡಿದರು. ಗದ್ದೆಯಿಂದ ಕೇವಲ ಆಹಾರಕ್ಕೆ ಭತ್ತ ಸಿಗುತ್ತದೆ ಎಂಬ ನಿಲುವು ತಪ್ಪು. ಭತ್ತದ ಕೃಷಿಯಿಂದ ನೀರಿನ ಸಂರಕ್ಷಣೆ ಸೇರಿದಂತೆ ಪರಿಸರದ ಸಂರಕ್ಷಣೆಯೊAದಿಗೆ ಬಹು ಉಪಯೋಗದ ಬಗ್ಗೆ ವಿವರಿಸಿದ ಅವರು ಕೃಷಿ ಮತ್ತು ಕಾಫಿಗೆ ಉತ್ತಮ ಭವಿಷ್ಯವಿದೆ.ಕೃಷಿಯಿಂದ ವಿಮುಖರಾಗದಂತೆ ಕರೆ ನೀಡಿದರು. ಉತ್ತರ ಕೊಡಗಿನಲ್ಲಿ ಯುವಕರು ನಗರದತ್ತ ವಲಸೆ ಹೋದ ಹಿನ್ನೆಲೆ ಮುಟ್ಲು, ಸೂರ್ಲಬ್ಬಿ, ಗರ್ವಾಲೆ ಗಳಲ್ಲಿ ಹೆಚ್ಚಿನ ಪ್ರಮಾಣದ ಜಾಗ ಮಾರಾಟವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಮತ್ತೋರ್ವ ಮುಖ್ಯ ಅತಿಥಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಹಾಗೂ ಕೊಡವ ಜನಪದ ತಜ್ಞ ಕಾಳಿಮಾಡ ಎಂ. ಮೋಟಯ್ಯ ಮಾತನಾಡಿ, ನಮ್ಮ ಸಂಸ್ಕೃತಿ ಉಳಿದರೆ ಜನಾಂಗ ಉಳಿಯುತ್ತದೆ ಜನಾಂಗ ಉಳಿದರೆ ನೆಲವು ಉಳಿಯುತ್ತದೆ ನಮ್ಮ ಆಚಾರ, ವಿಚಾರ, ಪದ್ಧತಿ, ಪರಂಪರೆಯನ್ನು ಕಿರಿಯರು ಕಲಿತಾಗ ಮಾತ್ರ ಅದು ಮುಂದಿನ ತಲೆಮಾರಿಗೆ ಹಸ್ತಾಂತರವಾಗಲಿದೆ. ಕೊಡವರ ಎಲ್ಲಾ ಹಬ್ಬಗಳು ನಮ್ಮ ಪ್ರಕೃತಿಗೆ, ಮಣ್ಣಿಗೆ, ಕೃಷಿಗೆ ಸಂಬAಧಪಟ್ಟದ್ದಾಗಿದೆ. ಯಾವ ಋತುಗಳಿಗೆ ಯಾವ ಆಹಾರ ಬೇಕು, ಅದನ್ನು ಪ್ರಕೃತಿ ನಮಗೆ ನೀಡುತ್ತದೆ. ಪ್ರಕೃತಿಯಿಂದ ನಾವು ಹೊರತು, ನಮ್ಮಿಂದ ಪ್ರಕೃತಿ ಅಲ್ಲ. ಪ್ರತಿ ಹಬ್ಬಗಳ ಆಚರಣೆ ಸಂದರ್ಭ ಪ್ರಕೃತಿಯನ್ನು ನಾವು ಪೂಜಿಸುತ್ತೇವೆ, ಹಾಗೆಯೇ ಅದನ್ನು ರಕ್ಷಿಸುವ ಜವಾಬ್ದಾರಿ ಸಹ ನಮ್ಮ ಮೇಲಿದೆ ಎಂದು ಹೇಳಿದರು.

ಇಂದಿನ ಮಕ್ಕಳು ಕೊಡಗಿನ ಪರಿಸರ ನೆಲಜಲ ಸಂಸ್ಕೃತಿಯ ಬಗ್ಗೆ ಚಿಂತನೆ ನಡೆಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜ ನಂಜಪ್ಪ ಅವರು ನಮ್ಮ ನೆಲವನ್ನು ಉಳಿಸಿಕೊಳ್ಳಬೇಕು. ಕೊಡಗಿನ ಮಣ್ಣು ಪರಭಾರೆಯಾಗದಂತೆ, ಕೊಡವಾಮೆ ಹಾಗೂ ಈ ನೆಲದ ರಕ್ಷಣೆಗೆ ವಿಶೇಷವಾಗಿ ಕೊಡವ ಮಹಿಳೆಯರು ಪಣ ತೊಡಬೇಕೆಂದು ಕರೆ ನೀಡಿದರು. ಕಾವೇರಿ ತಪೋಭೂಮಿಯಲ್ಲಿ ಕೊಡವ ಸಂಸ್ಕೃತಿ ಜನ್ಮ ತಾಳಿದೆ, ಕೊಡವ ಸಂಸ್ಕೃತಿ ಉಳಿಕೆ, ಸಂಸಾರದ ಜವಾಬ್ದಾರಿ ನಿಭಾಯಿಸುವÀ ಮಹಿಳೆ ಕೊಡಗಿನ ನೆಲವನ್ನು ಉಳಿಸಿ ಅದನ್ನು ಮಾರಾಟ ಮಾಡಲು ಬಿಡದಂತೆ ತಡೆಯಬೇಕು ಎಂದು ಪುನರುಚ್ಚರಿಸಿದರು.

ವೇದಿಕೆಯಲ್ಲಿ ಕೊಡವ ಹಿತ ರಕ್ಷಣಾ ಬಳಗದ ಉಪಾಧ್ಯಕ್ಷ ಚೆಕ್ಕೇರ ರಮೇಶ್, ಕಾರ್ಯದರ್ಶಿ ಗಾಂಡAಗಡ ಕೌಶಿಕ್ ದೇವಯ್ಯ, ಖಜಾಂಚಿ ಕೋಟೆರ ಕಿಶನ್ ಉತ್ತಪ್ಪ ಹಾಜರಿದ್ದರು. ಚೆಟ್ಟಂಗಡ ಲೇಖನ ಉತ್ತಪ್ಪ ಪ್ರಾರ್ಥಿಸಿ, ಚಿರಿಯಪಂಡ ರಾಜ ನಂಜಪ್ಪ ಸ್ವಾಗತಿಸಿ, ಉಳುವಂಗಡ ಲೋಹಿತ್ ಭೀಮಯ್ಯ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಎಂಗ ಕಲಾರಂಗ ಕಲಾವಿದರಿಂದ “ಕುರ್ಕಂಗ” ನಾಟಕ ಪ್ರದರ್ಶನ, ಚೆಕ್ಕೇರ ವಾಣಿ ಸಂಜು ಅವರಿಂದ ಹಾಡು, ಚೆಟ್ಟಂಗಡ ಲೇಖನ ಉತ್ತಪ್ಪ ಅವರಿಂದ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು.

ಪಂಜಿನ ಮೆರವಣಿಗೆ: ಕೊಡವ ಹಿತರಕ್ಷಣಾ ಬಳಗ, ಕ್‌ಗ್ಗಟ್ಟ್ನಾಡ್, ಪೊನ್ನಂಪೇಟೆ ಇವರ ವತಿಯಿಂದ ಸೋಮವಾರ ಸಂಜೆ ೧೫ನೇ ವರ್ಷದ ಕಕ್ಕಡ ಪದ್‌ನೆಟ್ಟ್ ಹಬ್ಬ ಆಚರಣೆ ಮತ್ತು ಪೊನ್ನಂಪೇಟೆ ಮುಖ್ಯ ಬೀದಿಯಲ್ಲಿ ಪಂಜಿನ ಮೆರವಣಿಗೆ ನಡೆಯಿತು, ಮೆರವಣಿಗೆಯಲ್ಲಿ ನೂರಾರು ಮಹಿಳೆಯರು, ಪುರುಷರು, ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು.

ಪೊನ್ನAಪೇಟೆ ಕೊಡವ ಸಮಾಜದಿಂದ ಆರಂಭವಾದ ಪಂಜಿನ ಮೆರವಣಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಸಾಗಿ ಪಟ್ಟಣದ ಬಸವೇಶ್ವರ ದೇವಸ್ಥಾನ ವೃತ್ತ ಮೂಲಕ ಬಸ್ ನಿಲ್ದಾಣಕ್ಕೆ ತೆರಳಿ ನೂರಾರು ಜನರು ವಾಲಗಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು, ನಂತರ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳಿಗೆ ಸನ್ಮಾನ

ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಪ್ರಥಮ ಸ್ಥಾನ ಪಡೆದ ದ್ವಿತೀಯ ಪಿಯುಸಿ ಕಾಮರ್ಸ್ ವಿದ್ಯಾರ್ಥಿ ಅಜ್ಜಿಕುಟ್ಟಿರ ಅಗಣಿತ ಮಾದಯ್ಯ ಮತ್ತು ರಾಧಾ ದಂಪತಿಯ ಪುತ್ರ ಜಷ್ ಕಾವೇರಪ್ಪ ಅವರ ಪರವಾಗಿ ಅವರ ತಂದೆಯವರನ್ನು ಸಿಐಟಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಹಾಗೂ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಕಾಟಿಮಾಡ ದೇವಯ್ಯ ಮತ್ತು ಕಾವೇರಮ್ಮ ದಂಪತಿಯ ಪುತ್ರಿ ಬಾಷಿತ ದೇವಯ್ಯ ಮತ್ತು ಲಯನ್ಸ್ ವಿದ್ಯಾ ಸಂಸ್ಥೆಯಲ್ಲಿ ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದ ನೆಲ್ಲಮಾಡ ರಾಜತಿಮ್ಮಯ್ಯ- ಸೌಮ್ಯ ದಂಪತಿಯ ಪುತ್ರ ಸಿದ್ದಾಂತ್ ಕಾವೇರಪ್ಪ ಅವರ ಪರವಾಗಿ ಅವರ ತಂದೆ ಅವರನ್ನು ಈ ಸಂದರ್ಭ ಮುಖ್ಯ ಅತಿಥಿ ಡಾ.ಸಿ.ಜಿ. ಕುಶಾಲಪ್ಪ ಅವರು ಸನ್ಮಾನಿಸಿದರು.

-ಹರೀಶ್ ಮಾದಪ್ಪ