ವೀರಾಜಪೇಟೆ, ಆ. ೪: ವೀರಾಜಪೇಟೆ - ಮಡಿಕೇರಿ ಮುಖ್ಯ ರಸ್ತೆಯ ಕದನೂರಿನಲ್ಲಿ ಸೋಮವಾರ ರಾತ್ರಿ ೧೦ ಗಂಟೆಯ ಸುಮಾರಿಗೆ ಆಟೋ ಚಾಲಕರೊಬ್ಬರ ಮೇಲೆ ಹೊರ ರಾಜ್ಯದ (ಅಸ್ಸಾಂ) ಕಾರ್ಮಿಕನೊಬ್ಬ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಸ್ಥಳೀಯ ಆಟೋ ಚಾಲಕ ಅಚ್ಚಪಂಡ ದೀಪು ಮೊಣ್ಣಪ್ಪ (೪೩) ಅವರ ತಲೆಗೆ ಗಾಯಗಳಾಗಿದ್ದು, ಅವರು ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಆಟೋ ಚಾಲಕರು ಒಗ್ಗೂಡಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಸ್ಥಳೀಯ ಆಟೋ ಚಾಲಕರಿಗೆ ಸೂಕ್ತ ಭದ್ರತೆ ಮತ್ತು ನ್ಯಾಯ ಒದಗಿಸಬೇಕೆಂದು ಚಾಲಕರು ಈ ಸಂದರ್ಭ ಒತ್ತಾಯಿಸಿದರು.
ಘಟನೆಗೆ ಸಂಬAಧಿಸಿದAತೆ ಆಟೋ ಚಾಲಕ ಗಾಯಾಳು ದೀಪು ಮೊಣ್ಣಪ್ಪ ನೀಡಿದ ದೂರಿನ ಅನ್ವಯ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.