ಮಡಿಕೇರಿ, ಆ. ೪: ಕೊಡಗು ವಿದ್ಯಾಲಯದ ಬೆಳ್ಳಿ ಮಹೋತ್ಸವದ ಅಂಗವಾಗಿ ಅಂತರಶಾಲಾ ಚದುರಂಗ ಪಂದ್ಯಾವಳಿಯನ್ನು ತಾ. ೫ ರಂದು (ಇಂದು) ಆಯೋಜಿಸಿದೆ.
ಬೆಳಿಗ್ಗೆ ೯.೪೫ ಗಂಟೆಗೆ ಕೊಡಗು ವಿದ್ಯಾಲಯದ ಬಿ.ಕೆ. ಸುಬ್ಬಯ್ಯ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ ವಿ.ಟಿ. ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.