ಮಡಿಕೇರಿ, ಜು. ೪: ಹಿಂದೂ ಜಾಗರಾಣಾ ವೇದಿಕೆ ವತಿಯಿಂದ ಸ್ವಾತಂತ್ರö್ಯ ದಿನದ ಅಂಗವಾಗಿ ಜಿಲ್ಲೆಯ ಏಳು ಕಡೆಗಳಲ್ಲಿ ಅಖಂಡ ಭಾರತ ಸಂಕಲ್ಪ ದಿನ ಹಮ್ಮಿಕೊಳ್ಳಲಾಗಿದ್ದು, ಪಂಜಿನ ಮೆರವಣಿಗೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆಯ ಜಿಲ್ಲಾ ಸಂಯೋಜಕ ಬೋಜೇಗೌಡ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರö್ಯ ನಂತರ ಭಾರತ ತ್ರಿಖಂಡವಾಗಿ ವಿಭಜನೆಯಾಯಿತು. ದೇಶದ ಅಖಂಡತೆಯನ್ನು ಯುವಪೀಳಿಗೆಗೆ ತಿಳಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ದೇಶವನ್ನು ಇಬ್ಭಾಗ ಮಾಡಲು ದುಷ್ಟಕೂಟವೂ ಕಾರ್ಯನಿರ್ವಹಿಸುತ್ತಿದೆ. ಪ್ರತ್ಯೇಕ ದೇಶದ ಕೂಗು ಭಾರತದ ಸುಭದ್ರತೆ ಧಕ್ಕೆ ತರುವ ವಿಚಾರವಾಗಿದೆ. ಸಮಾಜವನ್ನು ಜಾಗೃತಗೊಳಿಸುವ ಸಲುವಾಗಿ ಕಾರ್ಯಕ್ರಮನ್ನು ನಡೆಸಲಾಗುತ್ತದೆ. ತಾ. ೭ ರಂದು ಮಡಿಕೇರಿಯಲ್ಲಿ ಸಂಜೆ ೬ ಗಂಟೆಗೆ ಪಂಜಿನ ಮೆರವಣಿಗೆ ನಡೆಯಲಿದೆ. ನಗರದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಕೆ ಬಳಿಕ ಮೆರವಣಿಗೆ ಆರಂಭವಾಗಲಿದ್ದು, ಕಾವೇರಿ ಹಾಲ್‌ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ತಾ. ೮ ರಂದು ಮಾದಾಪುರದಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ. ಸಂಜೆ ೬ಕ್ಕೆ ಇಗ್ಗೋಡ್ಲು ಶ್ರೀ ಚಾಮುಂಡೇಶ್ವರಿ ದೇವಾಲಯದಿಂದ ಆರಂಭವಾಗಿ ಎಫ್‌ಎಂಸಿ ರಸ್ತೆ ಮೂಲಕ ಮಾದಾಪುರ ಪಟ್ಟಣಕ್ಕಾಗಿ ಮೆರವಣಿಗೆ ಸಾಗಲಿದೆ. ಗಣಪತಿ ದೇವಾಲಯದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ ಎಂದರು. ತಾ. ೯ ರಂದು ಕೊಡ್ಲಿಪೇಟೆಯ ಆರ್‌ಎಂಸಿ ಮಾರುಕಟ್ಟೆ ಸಮೀಪದ ಶ್ರೀ ಗಣಪತಿ ದೇವಾಲಯದಿಂದ ಸಂಜೆ ೬ ಗಂಟೆಗೆ ಪಂಜಿನ ಮೆರವಣಿಗೆ ಹೊರಟು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ತಾ. ೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಗೋಣಿಕೊಪ್ಪ ಆರ್‌ಎಂಸಿ ಆವರಣದಿಂದ ಖಾಸಗಿ ಬಸ್ ನಿಲ್ದಾಣ ಮೂಲಕ ಬೈಪಾಸ್ ರಸ್ತೆಗಾಗಿ ಪೊನ್ನಂಪೇಟೆ ತನಕ ವಾಹನ ಜಾಥಾ ನಡೆಸಿ ಬೆ. ೧೧.೩೦ಕ್ಕೆ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ತಾ. ೧೨ ರಂದು ವೀರಾಜಪೇಟೆಯ ತೆಲುಗರ ಬೀದಿಯ ಮಾರಿಯಮ್ಮ ದೇವಾಲಯದಿಂದ ಪಂಜಿನ ಮೆರವಣಿಗೆ ಹೊರಟು ಖಾಸಗಿ ಬಸ್ ನಿಲ್ದಾಣ ಮೂಲಕ ನಡೆದು ಮಹಿಳಾ ಸಮಾಜದಲ್ಲಿ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ತಾ. ೧೪ ರಂದು ಸಂಜೆ ೬ ಗಂಟೆಗೆ ಕುಶಾಲನಗರ ಸಮೀಪದ ಬೈಚನಹಳ್ಳಿ ಶ್ರೀ ಮಾರಿಯಮ್ಮ ದೇವಾಲಯದಿಂದ ಪಂಜಿನ ಮೆರವಣಿಗೆ ಹೊರಟು ರಥಬೀದಿ, ಐಬಿ ರಸ್ತೆ ಮೂಲಕ ರೈತ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬಾಂಡ್ ನೀಡುವ ಕ್ರಮಕ್ಕೆ ಖಂಡನೆ
ದೇಶಭಕ್ತಿ ಮೂಡಿಸುವ ಉದ್ದೇಶದ ಕಾರ್ಯಕ್ರಮಗಳಿಗೆ ಪೊಲೀಸ್ ಇಲಾಖೆ ಕಠಿಣ ನಿಯಮಗಳನ್ನು ವಿಧಿಸುತ್ತಿರುವುದನ್ನು ಬೋಜೇಗೌಡ ಖಂಡಿಸಿದರು.
ಕಾರ್ಯಕ್ರಮ ನಡೆಸಲು ರೂ. ೩ ಲಕ್ಷ ಮೌಲ್ಯದ ಬಾಂಡ್ ನೀಡುವಂತೆ ಸೂಚಿಸಿರುವುದು ಆಕ್ಷೇಪಾರ್ಹವಾಗಿದೆ. ಇದು ಧಾರ್ಮಿಕ ಕಾರ್ಯಕ್ರಮವಲ್ಲ, ದೇಶಭಕ್ತಿಯ ಕಾರ್ಯಕ್ರಮವಾಗಿದ್ದು, ಅನಗತ್ಯವಾಗಿ ಬಾಂಡ್ ಹಾಗೂ ವಿವಿಧ ಅನುಮತಿಗಳನ್ನು ಕಡ್ಡಾಯಗೊಳಿಸುವುದು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಸಹಸಂಯೋಜಕ ಅಲ್ಲುಮಾಡ ಶರತ್ ಪೆಮ್ಮಯ್ಯ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಎಲ್ ಹರೀಶ್, ಶಾಂತೆಯAಡ ತಿಮ್ಮಯ್ಯ, ವೀರಾಜಪೇಟೆ ತಾಲೂಕು ಸಂಯೋಜಕ ಬಿ.ಬಿ. ಸಜೀವ್, ಮಡಿಕೇರಿ ತಾಲೂಕು ಸಂಯೋಜಕ ಬಾಲಕೃಷ್ಣ ರೈ ಹಾಜರಿದ್ದರು.