ಮಡಿಕೇರಿ, ಆ. ೪: ರಾಜ್ಯದಲ್ಲಿ ಅತಿವೃಷ್ಠಿ/ಬರ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಪರಿಶೀಲನೆ ನಡೆಸಿ ವರದಿ ನೀಡುವ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಿಗೆ ಸಚಿವರುಗಳನ್ನು ನೇಮಿಸಿದ್ದು, ಕೊಡಗು ಜಿಲ್ಲೆಗೆ ಪಿ.ಎಂ. ನರೇಂದ್ರಸ್ವಾಮಿ ಅವರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿಯೋಜಿಸಿದ್ದಾರೆ.
ತಕ್ಷಣ ಪ್ರವಾಸ ಕೈಗೊಂಡು ಪರಿಸ್ಥಿತಿ ಪರಿವೀಕ್ಷಣೆ ನಡೆಸಿ ವಾಸ್ತವಸ್ಥಿತಿಯ ವರದಿಯನ್ನು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಇಂದು ಭೇಟಿ
ಸಚಿವ ನರೇಂದ್ರ ಸ್ವಾಮಿ ಅವರು ತಾ. ೫ ರಂದು (ಇಂದು) ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ ೧೧ ಗಂಟೆಗೆ ಜಿಲ್ಲೆಯ ಅತಿವೃಷ್ಟಿ/ಬರ ಪರಿಸ್ಥಿತಿಯ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಬಳಿಕ ಮ. ೨.೩೦ ಗಂಟೆಗೆ ಮಡಿಕೇರಿ ತಾಲೂಕು ಕೆ. ನಿಡುಗಣೆ ಗ್ರಾಮದಲ್ಲಿರುವ ಸರಕಾರಿ ಗೋಶಾಲೆ ವೀಕ್ಷಣೆ ಮಾಡಲಿದ್ದಾರೆ. ನಂತರ ೩.೩೦ಕ್ಕೆ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ ೪ಕ್ಕೆ ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.