ಮಡಿಕೇರಿ, ಆ. ೧:ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಇದೇ ಪ್ರಥಮ ಬಾರಿಗೆ ಎಂಬAತೆ ಕಳೆದ ಒಂದೆರಡು ದಿನಗಳಿಂದ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಪುನರ್ವಸು ಮಳೆ ಆರಂಭದ ಎರಡು ದಿನ ಮಾತ್ರ ಜಿಲ್ಲೆಯಲ್ಲಿ ಬಿರುಸು ಕಂಡಿದ್ದ ಮಳೆ ನಂತರದಲ್ಲಿ ಕ್ಷೀಣಗೊಂಡAತಿತ್ತು.

ಇದೀಗ ಪುಷ್ಯ ಮಳೆ ತನ್ನ ಕೊನೆಯ ಪಾದದಲ್ಲಿ ಒಂದಷ್ಟು ಆರ್ಭಟ ತೋರುತ್ತಿದೆ. ಶುಕ್ರವಾರದಿಂದ ಜಿಲ್ಲೆಯ ಹಲವೆಡೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ, ಭಾಗಮಂಡಲ, ತಲಕಾವೇರಿ, ಶಾಂತಳ್ಳಿ, ಸೋಮವಾರಪೇಟೆ, ಸೂರ್ಲಬ್ಬಿ, ನಾಪೋಕ್ಲು, ಕಕ್ಕಬೆ ವ್ಯಾಪ್ತಿಯಲ್ಲಿ ಹಾಗೂ ದಕ್ಷಿಣ ಕೊಡಗಿನ ಬಿರುನಾಣಿ, ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಕಾವೇರಿ ಜಲಾನಯನ ಪ್ರದೇಶ ಲಕ್ಷö್ಮಣತೀರ್ಥ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾದ್ದರಿಂದ ಈ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಕಾವೇರಿ ನದಿ ಮೈದುಂಬಿ ಹರಿಯುವಂತಾಗಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಕೊಡಗಿನಲ್ಲಿ ಇದೀಗ ಸುರಿದ ವ್ಯಾಪಕ ಮಳೆ ಮೈಸೂರು, ಮಂಡ್ಯ, ಬೆಂಗಳೂರಿಗರಿಗೂ ಒಂದಷ್ಟು ನೆಮ್ಮದಿ ತರಿಸಿದ್ದರೆ, ಕಾವೇರಿ ವಿವಾದದ ಕಾವು ಏರುತ್ತಿದ್ದ ಹಿನ್ನೆಲೆ ರಾಜ್ಯ ಸರಕಾರಕ್ಕೂ ತುಸು ಸಮಾಧಾನ ಮೂಡಿಸಿದಂತಾಗಿದೆ. ಕೊಡಗಿನಲ್ಲಿನ ಮಳೆಯಿಂದಾಗಿ ತಮಿಳುನಾಡಿಗೆ ನೀರು ಬಿಡುವ ಅನಿವಾರ್ಯತೆಯನ್ನು ರಾಜ್ಯ ಸರಕಾರ ಎದುರಿಸುತ್ತಿದ್ದು, ಇದೀಗ ಕೆ.ಆರ್.ಎಸ್. ಜಲಾಶಯದಲ್ಲೂ ನೀರು ಶೇಖರಣೆಯಾಗುತ್ತಿದೆ.

ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೨.೨೭ ಇಂಚು ಮಳೆ ಸುರಿದಿದೆ. ಭಾಗಮಂಡಲ, ಬೇತ್ರಿ, ಸಿದ್ದಾಪುರ, ಕರಡಿಗೋಡು, ಕುಶಾಲನಗರ, ಕಣಿವೆ ವ್ಯಾಪ್ತಿಯಲ್ಲಿ ಕಾವೇರಿ ಹರಿವು ಮೊದಲ ಬಾರಿಗೆ ಹೆಚ್ಚಾಗಿ ಕಂಡುಬರುತ್ತಿದೆ. ಭಾಗಮಂಡಲ ತ್ರಿವೇಣಿ ಸಂಗಮ ಭರ್ತಿಯಾಗುವತ್ತ ಸಾಗಿದ್ದರೂ, ಶನಿವಾರ ಬೆಳಿಗ್ಗೆ ೧೧ರ ಬಳಿಕ ಮಳೆ ತುಸು ಇಳಿಮುಖವಾದ್ದರಿಂದ ನೀರಿನಮಟ್ಟ ಮತ್ತೆ ಇಳಿಮುಖಗೊಂಡAತಾಗಿತ್ತು. ನಿನ್ನೆ ಸುರಿದ ಧಾರಾಕಾರ ಮಳೆ ಹಾಗೂ ಶನಿವಾರದಂದು ಹೆಚ್ಚು ಮಳೆ - ಗಾಳಿಯ ಮುನ್ನೆಚ್ಚರಿಕೆಯಿಂದಾಗಿ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ನೀಡಲಾಗಿತ್ತು.

ಶಾಂತಳ್ಳಿಗೆ ೭.೨೦ ಇಂಚು

ಶಾAತಳ್ಳಿ ಹೋಬಳಿಯಲ್ಲಿ ಕಳೆದ ೨೪ ಗಂಟೆಗಳಲ್ಲಿ ೭.೨೦ ಇಂಚುಗಳಷ್ಟು ಭಾರೀ ಮಳೆಯಾಗಿದೆ. ಭಾಗಮಂಡಲ ಹೋಬಳಿಯಲ್ಲಿ ೫.೦೨ ಇಂಚು, ಸೋಮವಾರಪೇಟೆ ೪.೧೩ ಇಂಚು ಮಳೆಯಾಗಿದೆ. ಇನ್ನಿತರ ಹೋಬಳಿಗಳಾದ ಮಡಿಕೇರಿಯಲ್ಲಿ ೩.೪೪, ನಾಪೋಕ್ಲು ೧.೮೨, ಸಂಪಾಜೆ ೩.೫೦, ವೀರಾಜಪೇಟೆ ೧.೩೪, ಅಮ್ಮತ್ತಿ ೧.೫೦, ಹುದಿಕೇರಿ ೧.೧೪, ಶ್ರೀಮಂಗಲ ೨.೭೨, ಶನಿವಾರಸಂತೆ ೨.೦೨, ಕೊಡ್ಲಿಪೇಟೆ ೧.೬೦, ಸುಂಟಿಕೊಪ್ಪ ೧.೮೪, ಕುಶಾಲನಗರ ಹೋಬಳಿಯಲ್ಲಿ ೧.೨೭ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೩.೪೪ ಇಂಚು, ವೀರಾಜಪೇಟೆ ೧.೪೨, ಪೊನ್ನಂಪೇಟೆ ೧.೧೭, ಸೋಮವಾರಪೇಟೆ ೦.೯೫ ಹಾಗೂ ಕುಶಾಲನಗರ ತಾಲೂಕಿನಲ್ಲಿ ೧.೫೬ ಇಂಚು ಮಳೆ ಕಳೆದ ೨೪ ಗಂಟೆಗಳಲ್ಲಿ ದಾಖಲಾಗಿದೆ.

ಮಳೆಯಿಂದ ಹಲವೆಡೆ ಸಮಸ್ಯೆ

ಧಾರಾಕಾರ ಮಳೆಯಿಂದಾಗಿ ಎರಡನೇ ಮೊಣ್ಣಂಗೇರಿಯಲ್ಲಿ ಬರೆ ಕುಸಿದು ರಸ್ತೆ ಸಂಚಾರಕ್ಕೆ ತೊಡಕಾಗಿತ್ತು. ಕೆಲವು ಮನೆಗಳಿಗೂ ನೀರು ನುಗ್ಗಿ ಸಮಸ್ಯೆಯಾಗಿರುವ ಕುರಿತು ವರದಿಯಾಗಿವೆ.