ಮಡಿಕೇರಿ, ಆ. ೧: ಮಡಿಕೇರಿ ನಗರದಲ್ಲಿ ತಲೆದೋರಿರುವ ಕಸದ ಕೊಂಪೆಯ ಸಮಸ್ಯೆ ಇದೀಗ ಬಿಗಡಾಯಿಸಿದ್ದು.., ಕಸದ ರಾಶಿಯಲ್ಲಿನ ಕೊಳಚೆ ನೀರು ನೇರವಾಗಿ ಕೆಳಭಾಗದ ಜನನಿಬಿಡ ಪ್ರದೇಶಕ್ಕೆ ಹರಿಯುತ್ತಿದ್ದು., ವಾತಾವರಣ ಗಬ್ಬು ನಾರುವಂತಾಗಿದೆ...,
ಕಳೆದ ದಶಕಗಳಿಂದ ಸ್ಟೋನ್ ಹಿಲ್ ಬಳಿ ರಾಶಿಯಾಗಿರುವ ಕಸ, ತ್ಯಾಜ್ಯ ತೆರವುಗೊಳಿಸುವ ಕಾರ್ಯ ವಿಳಂಬವಾದ ಹಿನ್ನೆಲೆಯಲ್ಲಿ ಇದೀಗ ಮಳೆಯಿಂದಾಗಿ ಕಸದ ಗುಡ್ಡೆಯಲ್ಲಿ ಸಂಗ್ರಹವಾಗಿರುವ ಕಸದ ಗುಡ್ಡೆಯಲ್ಲಿನ ತ್ಯಾಜ್ಯ ನೀರು ಕೆಳಭಾಗದ ಸುಬ್ರಮಣ್ಯ ನಗರಕ್ಕೆ ಇಳಿಯುತ್ತಿದೆ. ಇದರೊಂದಿಗೆ ಈ ಭಾಗದ ಭೂ ಭಾಗ ಕೂಡ ಕುಸಿಯುವ ಭೀತಿ ಎದುರಾಗಿದೆ.