ನೈಋತ್ಯ ಮಾನ್ಸೂನ್ ಮಾರುತಗಳು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಭಾರತೀಯ ಉಪಖಂಡದ ಮೇಲೆ ವಿಶಿಷ್ಟ ಹವಾಮಾನ ಬದಲಾವಣೆ ಕಂಡುಬAದಿದೆ.

ಎರಡು ಅತ್ಯಂತ ಶಕ್ತಿಶಾಲಿ ಮುಂಗಾರು ವ್ಯವಸ್ಥೆಗಳು ಭಾರತದ ವಾಯುಮಂಡಲದಲ್ಲಿ ಪರಸ್ಪರ ಸಂಧಿಸುತ್ತಿದ್ದು, ದೇಶದ ಪ್ರಮುಖ ಭಾಗಗಳಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (Iಒಆ) ಹಾಗೂ ಇಸ್ರೋ (ISಖಔ) ಉಪಗ್ರಹ ವರದಿಗಳು ಸ್ಪಷ್ಟಪಡಿಸಿವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISಖಔ) ಬಿಡುಗಡೆ ಮಾಡಿರುವ IಓSಂಖಿ-೩ಆಖ ಉಪಗ್ರಹದ ಕಣ್ಣಿಗೆ ಬಿದ್ದಿರುವ ಚಿತ್ರಗಳ ಪ್ರಕಾರ, ದೇಶದ ವಾಯುಮಂಡಲದಲ್ಲಿ ಎರಡು ಪ್ರತ್ಯೇಕ ಹಾಗೂ ಅತ್ಯಂತ ಪ್ರಬಲವಾದ ಹವಾಮಾನ ವ್ಯವಸ್ಥೆಗಳು ಒಂದಕ್ಕೊAದು ಹೆಣೆದುಕೊಳ್ಳುತ್ತಿವೆ. ಹಿಮಾಲಯ ಹಾಗೂ ಟಿಬೆಟ್ ಪ್ರಸ್ಥಭೂಮಿಯ ಮೇಲ್ಭಾಗದಲ್ಲಿ ಸೃಷ್ಟಿಯಾಗಿರುವ ಬೃಹತ್ ಪ್ರಮಾಣದ ಉಷ್ಣಮಂಡಲದ ಸುಳಿ, ಬಂಗಾಳ ಕೊಲ್ಲಿಯಲ್ಲಿ ಉದ್ಭವಿಸಿ ಒಳನಾಡಿಗೆ ಪ್ರವೇಶಿಸಿರುವ ತೀವ್ರ ವಾಯುಭಾರ ಕುಸಿತ, ಈ ಎರಡೂ ಬೃಹತ್ ವ್ಯವಸ್ಥೆಗಳು ಭಾರತದ ಮಧ್ಯ ಮತ್ತು ಉತ್ತರ ಭಾಗಗಳ ಮೇಲೆ ಒಂದನ್ನೊAದು ಸಂಧಿಸುತ್ತಿದ್ದು, ಇದರ ಪರಿಣಾಮವಾಗಿ ದೇಶದ ವಾಯುಮಂಡಲದಲ್ಲಿ ಅತಿಯಾದ ತೇವಾಂಶ ಮತ್ತು ದಟ್ಟವಾದ ಮೋಡಗಳ ಜಾಲ ಸೃಷ್ಟಿಯಾಗಿದೆ. ಪರಿಣಾಮ ಮುಂಬರುವ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ತೀವ್ರ ಮಳೆಯಾಗಲಿದೆ. ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗಗಳು, ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಲ್ಲಿ ಗುಡುಗು ಸಹಿತ ಅತಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಒಡಿಶಾ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶಗಳಲ್ಲಿ ನಿರಂತರ ಮಳೆಯಾಗಲಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಯಿದೆ. ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಮಳೆಯಾಗಲಿದೆ.