ಚೆಯ್ಯಂಡಾಣೆ, ಜು. ೩೧: ಕೂರ್ಗ್ ಜಂಇಯ್ಯತುಲ್ ಉಲಮಾ ಮಡಿಕೇರಿ ಝೋನ್ ಹಾಗೂ ಎಸ್ವೈಎಸ್ ಮಡಿಕೇರಿ ಝೊನ್ ಸಮಿತಿ ವತಿಯಿಂದ ಮಾದರಿ ಮದುವೆ ಜಾಗೃತಿ ಕಾರ್ಯಾಗಾರ ಹಾಗೂ ಮೊಹಲ್ಲಾ ಸಂಗಮ ಕಾರ್ಯಕ್ರಮ ಮೇಕೇರಿಯಲ್ಲಿ ಜರುಗಿತು. ಮೇಕೇರಿ ಮದರಸ ಸಭಾಂಗಣದಲ್ಲಿ ಎಸ್ ವೈಎಸ್ ಮಡಿಕೇರಿ ಝೋನ್ ಅಧ್ಯಕ್ಷ ಅಬ್ದುಲ್ಲ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್ವೈಎಸ್ ಜಿಲ್ಲಾಧ್ಯಕ್ಷ ಮುನೀರ್ ಮಲ್ಳರಿ ಉದ್ಘಾಟಿಸಿ ಮಾತನಾಡಿದರು. ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಿ ಮಹಲ್ ಪದಾಧಿಕಾರಿಗಳು ನಿರ್ವಹಿಸಬೇಕಾದ ಪ್ರಮುಖ ವಿಚಾರಗಳ ಹಾಗೂ ವಿವಾಹಗಳಲ್ಲಿ ತಂಡವಾಡುತ್ತಿರುವ ಅನಾಚಾರಗಳ ಬಗ್ಗೆ ಧ್ವನಿಎತ್ತ್ತುವ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಮಡಿಕೇರಿ ಝೋನ್ಗೆ ಒಳಪಟ್ಟ ೨೦ಕ್ಕೂ ಅಧಿಕ ಮಹಲ್ನ ಪದಾಧಿಕಾರಿಗಳು ಪಾಲ್ಗೊಂಡು ಇದರ ಸದುಪಯೋಗಪಡೆದುಕೊಂಡರು. ಈ ಸಂದರ್ಭ ಎಸ್ವೈಎಸ್ ಮಾಜಿ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ, ಮಾಜಿ ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್, ಸಯ್ಯಿದ್ ಝಕರಿಯ ತಂಙಳ್, ಮೇಕೆರಿ ಜಮಾಅತ್ ಅಧ್ಯಕ್ಷ ಝಂರುದ್ದೀನ್, ಸ್ವಾಗತ ಸಮಿತಿಯ ಚೆರ್ಮೆನ್ ಷಂಶುದ್ದೀನ್ ಅಮ್ಜದಿ, ಜಿಲ್ಲಾ ಸಮಿತಿಯ ಸದಸ್ಯ ರಫೀಕ್ ಮೇಕೆರಿ ಸೇರಿದಂತೆ ಎಸ್ ವೈಎಸ್ ಜಿಲ್ಲಾ, ಝೋನ್ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಝಕರಿಯ ತಂಙಳ್ ಪ್ರಾರ್ಥಿಸಿ, ಷಂಶದ್ದೀನ್ ಅಮ್ಜದಿ ಸ್ವಾಗತಿಸಿ, ವಂದಿಸಿದರು.