ಸಿದ್ದಾಪುರ, ಜು. ೩೧: ಅರಣ್ಯ ಇಲಾಖೆಯಿಂದ ಆಗಸ್ಟ್ ೩ ಮತ್ತು ೪ರಂದು ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ.

ಹಚ್ಚಿನಾಡು, ಹಾಲುಗುಂದ, ಯಡೂರು, ಬೈರಂಬಾಡ, ಇಂಜಲಗೆರೆ, ಪುಲಿಯೇರಿ, ಗುಹ್ಯ ಸಿದ್ದಾಪುರ, ಕರಡಿಗೋಡು, ಕಣ್ಣಂಗಾಲ, ಚೆಂಬೆಬೆಳ್ಳೂರು, ಕಾವಡಿ, ಕುಂಬೇರಿ ಹಾಗೂ ಅಮ್ಮತ್ತಿ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಮೇಲ್ಕಂಡ ಪ್ರದೇಶಗಳ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಅನಾವಶ್ಯಕವಾಗಿ ಹೊರ ಸಂಚಾರ ಮಾಡುವುದನ್ನು ತಪ್ಪಿಸಬೇಕು. ವಿಶೇಷವಾಗಿ ಬೆಳಗ್ಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ಸೂಚಿಸಲಾಗಿದೆ.

ಸಾರ್ವಜನಿಕರು ತಮ್ಮ ಹಾಗೂ ಕುಟುಂಬದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕಾರ್ಯಾಚರಣೆಗೆ ಅಗತ್ಯ ಸಹಕಾರ ನೀಡುವಂತೆ ವಲಯ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.