ಮಡಿಕೇರಿ, ಜು. ೩೧: ಮೆಕ್ಸಿಕೋ ದೇಶದಲ್ಲಿ ನಡೆಯುತ್ತಿರುವ ಲಾಸ್ ಕಾಬೋಸ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಕೊಡಗಿನವರಾದ ಕಲಿಯಂಡ ನಿಕ್ಕಿ ಪೂಣಚ್ಚ ಅವರು ಸೆಮಿಫೈನಲ್ ತಲುಪಿದ್ದಾರೆ.

ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ತಮ್ಮ ಜೊತೆ ಆಟಗಾರ ಈಕ್ವಿಡಾರ್ ದೇಶದ ಜಿ ಎಸ್ಕೊಬಾರ್ ಅವರೊಂದಿಗೂಡಿ ಟೆನ್ನಿಸ್ ನ ಪ್ರತಿಷ್ಠಿತ ಗ್ರಾö್ಯಂಡ್ ಸ್ಲಾö್ಯಮ್ ಕಿರೀಟವನ್ನು ೪ ಬಾರಿ ಧರಿಸಿರುವ ರಾಜೀವ್ ರಾಮ್(ಯು.ಎಸ್.ಎ) ಹಾಗೂ ಸಾಲಿಸ್ಬುರಿ(ಯು.ಕೆ) ಜೋಡಿಯನ್ನು ೬-೩, ೬-೪ ಎರಡು ನೇರ ಸೆಟ್‌ಗಳಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅವರು, ಮೆಕ್ಸಿಕೋದ ಆಲ್ವಾರೇಜ್ - ಮಗಾದಾನ್ ಜೋಡಿ ಅವರೊಂದಿಗೆ ೬-೧, ೬-೧ ಎರಡು ನೇರ ಸೆಟ್ ಗಳ ಸುಲಭ ಗೆಲುವು ಸಾಧಿಸಿ ಸೆಮಿಫೈನಲ್ ಗೆ ಪ್ರವೇಶಿಸಿದರು.

ತಾ.೧ ರಂದು (ಇಂದು) ನ್ಯೂಜಿಲ್ಯಾಂಡ್ ನ ರೇನಾಲ್ಡ್ ಹಾಗೂ ವ್ಯಾಟ್ ಜೋಡಿಯೊಂದಿಗೆ ಸೆಮಿಫೈನಲ್ ಆಡಲಿದ್ದಾರೆ. ವಿ. ಬಿ. ಎ ಪದವೀಧರರಾಗಿರುವ ನಿಕ್ಕಿ ಅವರು ಮೂಲತಃ ಕಕ್ಕಬ್ಬೆಯವರಾದ ಇದೀಗ ಆಂಧ್ರದ ಅನಂತಪುರದಲ್ಲಿ ನೆಲೆಸಿರುವ ಕಲಿಯಂಡ ಪೂಣಚ್ಚ ಹಾಗೂ ವೀಣಾ ದಂಪತಿಯ ಪುತ್ರ.