ಮಡಿಕೇರಿ, ಜು. ೩೧: ನಗರದ ಜಲಾಶಯ ಬಡಾವಣೆಯ ನಾಗರಿಕರ ಬಹುಕಾಲದ ಕೋರಿಕೆಯಾಗಿದ್ದ ೫೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ತಡೆಗೋಡೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ನಿರ್ಮಿಸಿದ ಕಾಮಗಾರಿಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಲೋಕಾರ್ಪಣೆ ಮಾಡಿದರು.
ಗೌಳಿಬೀದಿ ನೂತನ ಕಾಂಕ್ರಿಟ್ ರಸ್ತೆ, ಭಗವತಿ ನಗರದ ಮೂಲಕ ಅಬ್ಬಿಫಾಲ್ಸ್ಗೆ ಹೋಗುವ ಕಾಂಕ್ರೀಟ್ ರಸ್ತೆ ಕಾಮಗಾರಿ ನಾಗರಿಕರ ಸಮ್ಮುಖದಲ್ಲಿ ಉದ್ಘಾಟಿಸಿದರು.
ಮುಖ್ಯಮಂತ್ರಿ ಅವರ ವಿಶೇಷ ಅನುದಾನದಲ್ಲಿ ೩.೫ ಕೋಟಿ ರೂಗಳನ್ನು ಮಡಿಕೇರಿ ನಗರದ ಬಡಾವಣೆಗಳ ಅಭಿವೃದ್ಧಿಗೆ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಒದಗಿಸಿ ಮಡಿಕೇರಿಯನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿಸಲು ಪ್ರಯತ್ನ ಪಡುವುದಾಗಿ ಮಂತರ್ ಗೌಡ ಭರವಸೆ ನೀಡಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ, ೨೦೧೮ರ ಪ್ರಕೃತಿ ವಿಕೋಪದ ನಂತರ ಜಲಾಶಯ ಬಡಾವಣೆಯ ನಿವಾಸಿಗಳು ಭೂಕುಸಿತದ ಆತಂಕದಿAದಲೇ ಇದ್ದು ತಮ್ಮ ಬಡಾವಣೆ ರಕ್ಷಣೆಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ದೊಡ್ಡ ಮೊತ್ತದ ಕಾಮಗಾರಿಯಾದ್ದರಿಂದ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಕಳೆದ ವರ್ಷ ಮಳೆಗಾಲದಲ್ಲಿ ಈ ಅಪಾಯಕಾರಿ ಪ್ರದೇಶವನ್ನು ವೀಕ್ಷಿಸಿದ ಶಾಸಕರು ಅನುದಾನದ ಭರವಸೆ ನೀಡಿದ್ದರು. ಈಗ ೫೦ ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ಪೂರ್ಣಗೊಳಿಸಿ ಬಡಾವಣೆ ನಿವಾಸಿಗಳು ನಿರಾಳರಾಗಿರುವಂತೆ ಮಾಡಿದ್ದಾರೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಜೇಶ್ ಯಲ್ಲಪ್ಪ, ನಗರಸಭಾ ಸದಸ್ಯೆ ಉಷಾ ಕಾವೇರಪ್ಪ, ಆಯುಕ್ತರಾದ ಎಚ್.ಆರ್.ರಮೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸತೀಶ್, ಕಿರಿಯ ಇಂಜಿನಿಯರ್ ಹೇಮಕುಮಾರ್, ಪ್ರಮುಖರಾದ ಪ್ರಕಾಶ್ ಆಚಾರ್ಯ, ಪುಷ್ಪ ಪೂಣಚ್ಚ, ಜಿ.ಸಿ.ಜಗದೀಶ್, ಮುದ್ದುರಾಜ್, ಅಂಬೇಕಲ್ ಕುಶಾಲಪ್ಪ, ಕಾವೇರಪ್ಪ, ಅಂಬೇಕಲ್ ನವೀನ್, ಜೀವನ್, ಕೋಚನ ಹರಿ ಪ್ರಸಾದ್, ವಿ.ಜಿ.ಮೋಹನ್, ಫ್ಯಾನ್ಸಿ ಪಾರ್ವತಿ, ಶಶಿಕಲಾ, ಕೋಚನ ಚೇತನ್, ರಾಜು,ಅರ್ಜುನ್ ಸೇರಿದಂತೆ ಸ್ಥಳೀಯ ನಾಗರೀಕರು ಉಪಸ್ಥಿತರಿದ್ದರು.
ಕಾಮಗಾರಿ ಪರಿಶೀಲನೆ
ಕೆಲವು ದಿನಗಳ ಹಿಂದೆ ಕುಸಿತಗೊಂಡ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಇಳಿಯುವ ರಸ್ತೆ ಬದಿಯ ಪಾದಚಾರಿ ಮಾರ್ಗದ ಕಾಮಗಾರಿಯನ್ನು ಶಾಸಕರು ಪರಿಶೀಲಿಸಿದರು.
ತಡೆಗೋಡೆ ಕಾಮಗಾರಿ ವೈಜ್ಞಾನಿಕ ಹಾಗೂ ಸಮರ್ಪಕವಾಗಿ ನಡೆಯಬೇಕು. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಸೂಚಿಸಿದರು.