ಪೊನ್ನಂಪೇಟೆ, ಜು. ೩೧: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಮರ ಬಿದ್ದು ಗಾಯಗೊಂಡ ಘಟನೆ ಪೊನ್ನಂಪೇಟೆ ತಾಲೂಕಿನ ನಡಿಕೇರಿ ಗ್ರಾಮದಲ್ಲಿ ನಡೆದಿದೆ.
ಪೊನ್ನಂಪೇಟೆ ತಾಲೂಕಿನ ನಡಿಕೇರಿ ನಿವಾಸಿ ಕಿರುಂದAಡ ಎನ್. ಗಿರೀಶ್ ಅವರು ತಮ್ಮ ಮನೆಯ ಸಮೀಪ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಭಾರಿ ಗಾಳಿ ಮಳೆಗೆ ಸಮೀಪದ ತೋಟದಲ್ಲಿದ್ದ ಒಣಗಿದ ಮರ ಬುಡ ಸಮೇತ ಕಿತ್ತು ರಸ್ತೆಯ ಮೇಲೆ ಬಿದ್ದಿದೆ. ಈ ವೇಳೆ ಮರದ ಕೊಂಬೆ ಅವರ ಎಡ ಭುಜಕ್ಕೆ ಬಡಿದು ಗಂಭೀರ ಗಾಯವಾಗಿದೆ.
ಗಾಯಗೊಂಡ ಗಿರೀಶ್ ಅವರನ್ನು ತಕ್ಷಣ ಗೋಣಿಕೊಪ್ಪಲು ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಘಟನೆಯ ಬಗ್ಗೆ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಗಿರೀಶ್ ಅವರ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು ಎಂದು ನಡಿಕೇರಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.