ವೀರಾಜಪೇಟೆ, ಜು. ೩೧: ಜೆನ್-ಶಿಟೋರಿಯೋ ಕರಾಟೆ ಅಕಾಡೆಮಿ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ೨೯ನೇ ಅಖಿಲ ಭಾರತ ಶಿಟೋರಿಯೋ ಕರಾಟೆ-ಡೋ ಚಾಂಪಿಯನ್ಶಿಪ್-೨೦೨೬ ರಲ್ಲಿ ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಪೆರುಂಬಾಡಿಯ ಜೆನ್-ಶಿಟೋರಿಯೋ ಸ್ಕೂಲ್ ಆಫ್ ಇಂಡಿಯಾ-ಕರಾಟೆ ಶಾಲೆಯ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದು ಸಾಧನೆ ಗೈದಿದ್ದಾರೆ.
ಇತ್ತೀಚೆಗೆ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಸ್ಥಳೀಯ ಸಂಸ್ಥೆಯ ಒಟ್ಟು ೨೨ ಕರಾಟೆ ಪಟುಗಳು ಕುಮಿತೆ ಹಾಗೂ ಕಟಾ ವಿಭಾಗಗಳಲ್ಲಿ ವಿವಿಧ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಪAದ್ಯಾವಳಿಯ ಕುಮಿತೆ ಹಾಗೂ ಕಟಾ ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಚೈತನ್ಯ ಪಿ.ವಿ. ಅವರು ಎರಡೂ ವಿಭಾಗಗಳಲ್ಲೂ ಚಿನ್ನದ ಪದಕಗಳನ್ನು ಪಡೆದು ಅತ್ಯುತ್ತಮ ಸಾಧಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅದೇ ರೀತಿ, ದೃತಿಕ್ ಡಿ, ಕಾರ್ತಿಕ್ ಕೆ.ಎಚ್, ಪ್ರಜನ್ ಎನ್.ಬಿ, ಆದರ್ಶ ಕೆ.ಬಿ, ಅನುರಾಗ್ ಟಿ.ಎಸ್, ಧನುಶ್ರೀ ಎಸ್.ಆರ್ ಅವರು ಕುಮಿತೆಯಲ್ಲಿ ಚಿನ್ನ ಹಾಗೂ ಕಟಾದಲ್ಲಿ ಬೆಳ್ಳಿ ಪದಕ ಗಳಿಸಿ ಸಾಧನೆ ಮಾಡಿದ್ದಾರೆ. ಹರಿಧಾ ಅವರು ಕಟಾದಲ್ಲಿ ಚಿನ್ನ ಹಾಗೂ ಕುಮಿತೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಎರಡೂ ವಿಭಾಗಗಳಲ್ಲಿ ಪದಕ ಪಡೆದವರು
ಧವನ್ ಬಿ.ಎ.(ಕಂಚು/ಬೆಳ್ಳಿ), ಸಮಿತ್ ಪಿ.ಬಿ. (ಬೆಳ್ಳಿ/ಕಂಚು), ದೇನಿಷ್ ಪಿ.ಎಲ್. (ಬೆಳ್ಳಿ/ಬೆಳ್ಳಿ), ಕೃತಿಕ್ ಎಮ್. (ಬೆಳ್ಳಿ/ಕಂಚು), ಕೃಷಾಂಕ್ ಎಮ್.ಎಸ್. (ಕಂಚು/ಕAಚು), ಅಭಿನವ್ ಟಿ.ಎಸ್. (ಬೆಳ್ಳಿ/ಬೆಳ್ಳಿ), ಧ್ಯಾನ್ ಟಿ.ಎಚ್. (ಬೆಳ್ಳಿ/ಕಂಚು), ಗಾನವಿ ಎನ್.ಎಲ್. (ಕಂಚು/ಬೆಳ್ಳಿ).
ಕಟಾ ವಿಭಾಗದಲ್ಲಿ ಪದಕ ಪಡೆದವರು
ಅದಿದೇವ್ ಎನ್.ಎಸ್.(ಕಂಚು), ಬಿಂದ್ಯಾ ಪಿ.ಬಿ.(ಬೆಳ್ಳಿ), ಕೀರ್ತನಾ ಜಿ.(ಕಂಚು), ನಿರಂಜನಾ ಎಮ್.ಎಮ್(ಕಂಚು), ಸಾನ್ವಿ ಪಿ.ವಿ. (ಬೆಳ್ಳಿ) ಹಾಗೂ ಹಿಮಾನಿ (ಬೆಳ್ಳಿ) ಪಡೆದಿದ್ದಾರೆ.
ಜೆನ್-ಶಿಟೋರಿಯೋ ಸ್ಕೂಲ್ ಆಫ್ ಇಂಡಿಯಾ ಕರಾಟೆ ಶಾಲೆಯ ಸೆನ್ಸಾಯಿ ಶಿವಪ್ಪ ಅವರು ತರಬೇತಿ ನೀಡಿದ್ದಾರೆ. ಅಕಾಡೆಮಿಯ ಕ್ಯೋಶಿ ರಾಹುಲ್ ತೌಡೆ ಮತ್ತು ಅನಿಲ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಪದಕಗಳನ್ನು ವಿತರಿಸಿದರು.