ಮಡಿಕೇರಿ, ಜು. ೩೦: ಮನೆಯ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಯೊAದು ಗಾಳಿ, ಮಳೆಗೆ ತುಂಡರಿಸಿ ಮನೆ ಮೇಲೆ ಬಿದ್ದ ಘಟನೆ ಶನಿವಾರಸಂತೆ ಹೋಬಳಿ, ಗೋಪಾಲಪುರದ ಮಾದೇಗೋಡು ಗ್ರಾಮದಲ್ಲಿ ಸಂಭವಿಸಿದೆ.

ಮಾದೇಗೋಡು ಗ್ರಾಮದ ನಿವಾಸಿ ಎಂ.ಬಿ. ಗಣೇಶ್ ಎಂಬವರಿಗೆ ಸೇರಿದ ಮನೆಯ ಮೇಲೆ ವಿದ್ಯುತ್ ಮಾರ್ಗ ಹಾದುಹೋಗಿದ್ದು, ನಿನ್ನೆ ರಾತ್ರಿ ಒಂದು ತಂತಿ ತುಂಡರಿಸಿ ಮನೆ ಮೇಲೆ ಬಿದ್ದಿದೆ. ತಂತಿಯಲ್ಲಿ ವಿದ್ಯುತ್ ಪ್ರಹಾರವಿತ್ತಾದರೂ ಯಾವದೇ ಅಪಾಯ ಸಂಭವಿಸಿಲ್ಲ. ಸೆಸ್ಕ್ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಬಳಿಕ ವಿದ್ಯುತ್ ಸಂಚಾರ ಕಡಿತಗೊಳಿಸಲಾಗಿದೆ.

ಮನೆಯ ಮೇಲ್ಭಾಗದಲ್ಲಿ ಹಾದುಹೋಗಿರುವ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸುವAತೆ ಅನೇಕ ಬಾರಿ ಸೆಸ್ಕ್ ಅಧಿಕಾರಿ, ಸಿಬ್ಬಂದಿಗಳಿಗೆ ಮನವಿ ಮಾಡಿಕೊಂಡಿದ್ದರೂ ಇದುವರೆಗೂ ಯಾವದೇ ಕ್ರಮ ಕೈಗೊಂಡಿಲ್ಲ. ಇದೀಗ ತಂತಿ ತುಂಡರಿಸಿ ಬಿದ್ದಿದೆ, ಸದ್ಯ ಯಾವದೇ ಅಪಾಯ ಸಂಭವಿಸದಿರುವದು ಪುಣ್ಯವೇ ಸರಿ. ಇನ್ನಾದರೂ ಸ್ಥಳಾಂತರಿಸುವAತೆ ಗಣೇಶ್ ಕುಟುಂಬಸ್ಥರು ಇಲಾಖೆಯನ್ನು ಆಗ್ರಹಿಸಿದ್ದಾರೆ.