ಮಡಿಕೇರಿ, ಜು. ೨೯: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹ ಜ್ಯೋತಿ ಯೋಜನೆಯ ಮರು ಪರಿಶೀಲನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಸರಕಾರ ಆದೇಶಿಸಿದ ಬಳಿಕ ಜುಲೈ ೧ ರಿಂದ ಫಲಾನುಭವಿಗಳ ಮರುಶೀಲನೆ ನಡೆದಿದ್ದು, ಇದುವರೆಗೆ ಶೇ. ೪೭ ರಷ್ಟು ಮುಗಿದಿದ್ದು ಇನ್ನೂ ಮುÄಂದುವರಿಯಲಿರುವುದಾಗಿ ಕೊಡಗು ಚೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತÀರರಾದ ರಾಮಚಂದ್ರ “ಶಕ್ತಿ”ಗೆ ತಿಳಿಸಿದ್ದಾರೆ.

ಪುನರ್ ಪರಿಶೀಲನೆಯನ್ವಯ ಪ್ರತಿ ಮನೆಗೂ ಮೀಟರ್ ರೀಡರ್ ಹಾಗೂ ಲೈನ್‌ಮ್ಯಾನ್‌ಗಳ ಮೂಲಕ ಗೃಹ ಜ್ಯೋತಿ ಬಳಕೆದಾರರ ಪರಿಶೀಲನೆ ನಡೆಸಲಾಗುತ್ತಿದೆ. ಮೀಟರ್ ರೀಡರ್ ಹಾಗೂ ಲೈನ್ ಮ್ಯಾನ್‌ಗಳು ಪ್ರತಿ ಮನೆಗೂ ತೆರಳಿ, ಮನೆಯಲ್ಲಿ ವಾಸ ಮಾಡುತ್ತಿರುವವರ ಬಳಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಒಟ್ಟು ೧,೪೭,೮೧೨ ಮಂದಿ ಫಲಾನುಭವಿಗಳ ಪೈಕಿ ಇದುವರೆಗೆ ೬೯,೨೭೫ ಗ್ರಾಹಕರ ದಾಖಲಾತಿಗಳ ಮರು ಪರಿಶೀಲನೆ ನಡೆದಿದೆ. ಮಡಿಕೇರಿ ತಾಲೂಕಿನಲ್ಲಿ ೧೭,೨೫೦ ಮಂದಿ, ವೀರಾಜಪೇಟೆ ತಾಲೂಕಿನಲ್ಲಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ೧೨,೬೮೫ ಮಂದಿ, ಸೋಮವಾರಪೇಟೆ ತಾಲೂಕಿನಲ್ಲಿ ೧೭,೦೩೧, ಕುಶಾಲನಗರ ತಾಲೂಕಿನಲ್ಲಿ ೧೨,೨೬೮ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ೧೦,೦೪೧ ಮಂದಿಯ ದಾಖಲಾತಿಗಳನ್ನು ಮರು ಪರಿಶೀಲನೆಗೊಳಿಸಲಾಗಿದೆ. ಈ ಪೈಕಿ ಸೋಮವಾರಪೇಟೆ ತಾಲೂಕಿನಲ್ಲಿ ಶೇ. ೭೯.೧೫ ಮುಕ್ತಾಯಗೊಂಡು ಗರಿಷ್ಠ ಕಾರ್ಯವಾಗಿದ್ದು, ಕುಶಾಲನಗರ ತಾಲೂಕಿನಲ್ಲಿ ಅತಿ ಕನಿಷ್ಟ ಅಂದರೆ ಕೇವಲ ೩೪.೮೩ ಮಾತ್ರ ಮುಗಿದಿದೆ.

ಇನ್ನುಳಿದ ಗ್ರಾಹಕರು ಕೂಡ ನೀಡಬೇಕಾದ ಮಾಹಿತಿ ಹೀಗಿದೆ: ಮೀಟರ್ ರೀಡರ್ ಮತ್ತು ಲೈನ್‌ಮ್ಯಾನ್‌ಗಳು ಒಟ್ಟಿಗೆ ತೆರಳಿ ಮನೆಯಲ್ಲಿ ವಾಸ ಮಾಡುವವರ ಬಳಿ, ಇದು ಸ್ವಂತ ಮನೆಯೇ, ಬಾಡಿಗೆ ಮನೆಯೇ ಮನೆಯಲ್ಲಿ ಎಷ್ಟು ಜನ ವಾಸವಾಗಿದ್ದಾರೆ, ಜಾತಿ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ವಿದ್ಯುತ್ ಮೀಟರ್ ಬಿಲ್, ಬಾಡಿಗೆಗೆ ಇರುವವರು ಬಾಡಿಗೆ ಕರಾರು ಪತ್ರ, ಫೋಟೋ- ಹೀಗೆ ಹಲವು ದಾಖಲೆಗಳನ್ನು ಸರ್ಕಾರ ಹೇಳಿದಂತೆ ಪÀಡೆದು ಅದನ್ನು ಮೊದಲು ಮೊಬೈಲ್ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಿಕೊಂಡು ನಂತರ ಆಫ್‌ಲೈನ್ ಅರ್ಜಿಯನ್ನು ತುಂಬುತ್ತಾರೆ. ಅದಕ್ಕೆ ಮನೆಯಲ್ಲಿ ವಾಸವಾಗಿರುವವರ ಬಳಿ ಸಹಿ ಪಡೆದು ತೆರಳುತ್ತಿದ್ದಾರೆ.

ಈ ಹಿಂದೆ ಆನ್‌ಲೈನ್‌ನಲ್ಲಿ ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಿದವರು ಈಗ ಮನೆಗೆ ಬರುವ ಚೆಸ್ಕಾಂ ಸಿಬ್ಬಂದಿಗೆ ತಮ್ಮ ಮಾಹಿತಿಯನ್ನು ನೀಡಬೇಕು. ಈ ವೇಳೆ ಆನ್‌ಲೈನ್‌ನಲ್ಲಿ ಅರ್ಜಿ ತುಂಬುವ ವೇಳೆ ಮನೆಯಲ್ಲಿ ಇರುವವರ ಫೋಟೋವನ್ನು ತೆಗೆದುಕೊಂಡು ಅಪ್ಲೋಡ್ ಮಾಡುತ್ತಾರೆ. ಆಗಸ್ಟ್ ಅಂತ್ಯದವರೆಗೆ ಸಮಯಾವಕಾಶವಿದೆ ಎಂದು ರಾಮಚಂದ್ರ ಮಾಹಿತಿಯಿತ್ತ್ತಿದ್ದಾರೆ.

ಇದರಲ್ಲಿ ತೆರಿಗೆದಾರರಾಗಿದ್ದರೆ, ಅವರು ತಮ್ಮ ಪಾನ್‌ಕಾರ್ಡ್ ಸಹ ನೀಡಬೇಕು. ಸದ್ಯ ಮೀಟರ್ ರೀಡರ್ ಹಾಗೂ ಲೈನ್‌ಮ್ಯಾನ್‌ಗಳಿಗೆ ದಿನಕ್ಕೆ ಇಷ್ಟೇ ಮನೆ ಮಾಡಬೇಕೆಂದು ಟಾರ್ಗೆಟ್ ನೀಡಿಲ್ಲ. ಆದರೆ ಎರಡು ತಿಂಗಳಲ್ಲಿ ತಮ್ಮ ಪ್ರದೇಶವನ್ನು ಮುಗಿಸಬೇಕೆಂದು ತಿಳಿಸಿದೆ. ಇ.ಇ. ರಾಮಚಂದ್ರ ಅವರ ಪ್ರಕಾರ ಎಲ್ಲರ ಮಾಹಿತಿ ಪೂರ್ಣಗೊಂಡ ಬಳಿಕವಷ್ಟೇ ಯಾರನ್ನು ಕೈಬಿಡಬೇಕು, ಒಟ್ಟು ಫಲಾನುಭವಿಗಳ ಖಚಿತ ಸಂಖ್ಯೆ ಎಷ್ಟು ಎಂದು ಖಚಿತಗೊಳ್ಳ್ಳುತ್ತದೆ ಎಂದು ತಿಳಿಸಿದ್ದಾರೆ.