ಪೊನ್ನಂಪೇಟೆ, ಜು. ೨೯: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು.

ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ.ಎಸ್. ಕುಶಾಲಪ್ಪ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಂಯಮ ಹಾಗೂ ಪ್ರಾಮಾಣಿಕತೆಯಂತಹ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಉತ್ತಮ ನಾಯಕರಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಶಾಜಿ ಅಚ್ಚುತನ್ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಪೋಷಕರ ತ್ಯಾಗ ಮತ್ತು ಶ್ರಮ ಅಡಗಿದ್ದು, ಅದನ್ನು ಅರಿತು ಗೌರವಿಸಬೇಕು ಎಂದರು. ಅಲ್ಲದೆ ಭಾರತೀಯ ಚುನಾವಣಾ ಆಯೋಗದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಉಪ ಪ್ರಾಂಶುಪಾಲೆ ಅನೃತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಾಗೇಶ್ ಜಿ.ಎನ್. ಮಾತನಾಡಿ, ಸರ್ಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಾಧನೆ ಮಾಡಲು ಅಗತ್ಯ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭ ಸ್ಥಳೀಯ ದಾನಿ ಹಾಗೂ ಪೊನ್ನಂಪೇಟೆಯ ದಸ್ತಾವೇಜು ಬರಹಗಾರ ಪುತ್ತಾಮನೆ ಜಿ. ಪ್ರಸಾದ್‌ಅವರು ತಮ್ಮ ತಂದೆ ದಿ. ಗಣಪಮಯ್ಯ ಹಾಗೂ ತಾಯಿ ದಿ. ಸೀತಮ್ಮ ಅವರ ಸ್ಮರಣಾರ್ಥವಾಗಿ ಕಾಲೇಜಿಗೆ ಕೊಡುಗೆಯಾಗಿ ನೀಡಿದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.

ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು

ಕಾಲೇಜು ನಾಯಕರಾಗಿ ರಾಜೇಶ್ ಎಚ್. ಹಾಗೂ ಮುಫೀದ್ ಎ.ಎಂ., ಕ್ರೀಡಾ ಮಂತ್ರಿಗಳಾಗಿ ಗಿರೀಶ್ ಎನ್., ಸುಹೇಬ್ ಎಂ.ಎಸ್., ನವ್ಯ ವೈ.ಡಿ. ಹಾಗೂ ಭುವಿ ಬಿ.ಜೆ.. ಸಾಂಸ್ಕೃತಿಕ ಮಂತ್ರಿಗಳಾಗಿ ಮೋನಿಕ ಬಿ.ಆರ್., ಶುಭ ಪಿ.ಎಂ., ಅಕ್ಷಿತಾ ಪಿ.ಜಿ. ಹಾಗೂ ರೇಷ್ಮಾ ಪಿ.ಎ., ಶಿಸ್ತುಪಾಲನಾ ಮಂತ್ರಿಗಳಾಗಿ ಅಶ್ವತ್ ವೈ.ಆರ್., ಕೃಪಾ ಪಿ.ಎ., ನೀವೇದ್ಯಾ ವಿನೋದ್ ಟಿ.ವಿ. ಹಾಗೂ ರಮಿತ್ ಎಸ್., ಸ್ವಚ್ಛತಾ ಮಂತ್ರಿಗಳಾಗಿ ಸಿ.ಯು. ಸೋಮಣ್ಣ ಮತ್ತು ಎಚ್.ಎಸ್. ಚಂದು ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ರಾಜ್ಯಶಾಸ್ತç ಉಪನ್ಯಾಸಕ ರಮೇಶ್ ಆರ್. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಪೋಷಕ ಪ್ರತಿನಿಧಿಗಳಾದ ಅರುಣ್ ಕುಮಾರ್, ಚಿಟ್ಟಿಯಪ್ಪ, ಲಕ್ಷಿö್ಮ ಹಾಗೂ ಗುಲ್ತಾಜ್ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕಿ ಸುಜಾತ ಪಿ.ಎ. ಸ್ವಾಗತಿಸಿ, ವಾಣಿಜ್ಯಶಾಸ್ತç ಉಪನ್ಯಾಸಕಿ ದೀಪ ಕೆ. ಕಾರ್ಯಕ್ರಮ ನಿರೂಪಿಸಿ, ಆಂಗ್ಲ ಭಾಷಾ ಉಪನ್ಯಾಸಕಿ ಸವಿತಾ ಸಿ.ಟಿ. ವಂದಿಸಿದರು.