ಬೆಂಗಳೂರು, ಜು. ೨೯: ರಾಂಧವ ಸಿನಿಮಾ, “ಬಿಗ್ ಬಾಸ್” ಖ್ಯಾತಿಯ ನಟ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರ “ಬುಲ್ಲಿ” ಸಿನಿಮಾದ ಚಿತ್ರೀಕರಣದ ಮೊದಲನೆಯ ಶೆಡ್ಯೂಲ್ ಮುಕ್ತಾಯಗೊಂಡಿದೆ. ಈ ಕಾಮಿಡಿ ಚಿತ್ರದಲ್ಲಿ ಬಹುಭಾಷಾ ತಾರೆ ಹಿರಿಯ ನಟಿ ಊರ್ವಶಿ ಅವರು ಭುವನ್ ಜೊತೆ ಅಭಿನಯಿಸುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ಊರ್ವಶಿ ಅವರ ಮಗಳು ತೇಜ ಊರ್ವಶಿ ನಾಯರ್ ಈ ಚಿತ್ರದ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
ಸಮೃದ್ಧ್ ಸ್ಟುಡಿಯೋಸ್ ಹಾಗೂ ಭುವನಂ ಎಂಟರ್ಟೈನ್ಮೆAಟ್ ಲಾಂಛನದಲ್ಲಿ ನಿರ್ಮಿಸಲಾಗುತ್ತಿರುವ ಈ ಚಿತ್ರವನ್ನು ಅನೂಪ್ ಆಂಟೋನಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆ ಅನಾವರಣ ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜ್ ಕುಮಾರ್ ಸಮಾಧಿಗೆ ನಮನ ಸಲ್ಲಿಸುವ ಮೂಲಕ ನಡೆಯಿತು.
ಈವರೆಗೂ ೭೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪಂಚಭಾಷಾ ನಟಿ ಊರ್ವಶಿ ಅವರ ಜೊತೆಗೆ ನಟಿಸುವುದು ನನ್ನ ಬಹು ದಿನಗಳ ಆಸೆ. ಈಗ ಆ ಆಸೆ ಈಡೇರಿದೆ. ಊರ್ವಶಿ ಅವರಿಂದ ತುಂಬಾ ಕಲಿತಿದ್ದೇನೆ. ಈ ಚಿತ್ರದ ಕಥೆ ಅನೂಪ್ ಬರೆದಿದ್ದಾರೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ನವೀನ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರತಂಡದವರನ್ನು ಪರಿಚಯಿಸಿ ಮಾತನಾಡಿದ ಕಾರ್ಯಕಾರಿ ನಿರ್ಮಾಪಕಿ ಹರ್ಷಿಕಾ ಪೂಣಚ್ಛ, ನಟಿ ಊರ್ವಶಿ ಅವರು ಬಹಳ ವರ್ಷಗಳ ನಂತರ ನಮ್ಮ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿಯಾದರೆ, ಅವರ ಪುತ್ರಿ ತೇಜ ಅವರಿಗೆ ಬೇರೆ ಬೇರೆ ಭಾಷೆಗಳಿಂದ ಅವಕಾಶ ಬಂದರೂ ಈ ಕನ್ನಡ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಲು ಒಪ್ಪಿಕೊಂಡದ್ದು ಬಹಳ ಖುಷಿಯಾಗಿದೆ ಎಂದರು.